•  
  •  
  •  
  •  
Index   ವಚನ - 746    Search  
 
ಮಾಹೇಶ್ವರನ ಶರಣಸ್ಥಲ - ಲಿಂಗನಿಷ್ಠೆ
ನಿಷ್ಠೆಯಿಂದ ಲಿಂಗವ ಪೂಜಿಸಿ ಮತ್ತೊಂದು ಪಥವನರಿಯದ ಶರಣರು ಸರ್ಪನ ಹೆಡೆಯ ಮಾಣಿಕದಂತಿಪ್ಪರು, ಭೂಷಣರಾಗಿ ! ದರ್ಪಣದೊಳಗಣ ಪ್ರತಿಬಿಂಬದಂತೆ ಹಿಂಗದಿಪ್ಪರು, ಕೂಡಲಸಂಗಮದೇವಾ, ನಿಮ್ಮ ಶರಣರು.
Transliteration Niṣṭheyinda liṅgava pūjisi pathavanariyada śaraṇaru sarpana heḍeya māṇikadantipparu, bhūṣaṇarāgi! Darpaṇadoḷagaṇa pratibimbadante hiṅgadipparu, kūḍalasaṅgamadēvā, nim'ma śaraṇaru.
Manuscript
English Translation 2 The Śaraṇās who worship Liṅga zealously And know no other path, They live as ornaments- like the gem In serpent's hood... Thy Śaraṇās , O Kūḍala Saṅgama Lord, Live steadily, Unlike the reflection in a looking-glass. Translated by: L M A Menezes, S M Angadi
Hindi Translation निष्ठा से लिंग पूजा करते अन्य पथ से अपरिचित शरण। सर्प-फण-मणी सदृशभूषण प्राय हैं। दर्पण के प्रतिबिंब सा नष्ट नहीं होते तव शरण, कूडलसंगमदेव॥ Translated by: Banakara K Gowdappa
Telugu Translation నిష్టతో శివునిగొల్చి వేరొకమార్గము తెలియని శరణులు ఫణిఫణా భోగమాణిక్యముగ దీపింతురయ్యా; అద్దమున గల ప్రతిబింబముగ లొంగరయ్యా నీ శరణులు సంగమదేవా! Translated by: Dr. Badala Ramaiah
Tamil Translation நியமத்துடன் லிங்கத்தைப் பூஜித்து வேறொரு வழியினை அறியாத அடியார் அரவத்தின் படத்திலுள்ள மாணிக்கமனைய இருப்பர், அணியுடன் திகழ்வர் ஆடியில் உள்ள பிரதிபிம்பமனைய அகலாதிருப்பர் கூடல சங்கனே உம் அடியார். Translated by: Smt. Kalyani Venkataraman, Chennai
Marathi Translation निष्ठेने लिंगपूजा करुन अन्यपथाला न जाणणारे शरण सापाच्या फण्यावरील माणिकाप्रमाने शोभतात. अलंकार होऊन! दर्पणातील प्रतिबिंबाप्रमाणे प्रकाशतात कूडलसंगमदेवा तुमचे शरण. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಸರ್ಪ ಭಯಂಕರ, ಅದರ ಹೆಡೆ ಇನ್ನೂ ಭಯಂಕರ–ಆ ಹೆಡೆಯ ಮುಡಿಯಲ್ಲಿ ಮಿನುಗುವ ಮಾಣಿಕ್ಯ ಅತ್ಯಂತ ಮನೋಹರ. ಅಂತೆಯೇ ವಿಷಮ ಸಂಸಾರ ಸರ್ಪದ ಹೆಡೆಯನ್ನು ಮೆಟ್ಟಿ ನಿಂತು ನೀಲಕಂಠಶಿವನ ಲೀಲಾಧ್ಯಾನದಲ್ಲಿ ದೇದೀಪ್ಯ ಮಾನವಾಗಿರುವ ಶಿವಭಕ್ತರು ಅನರ್ಘ್ಯಜೀವರತ್ನಗಳು. ಅವರು ವಿಷವನ್ನೇ ಅರಗಿಸಿಕೊಂಡು ಜ್ಯೋತಿರ್ಲಿಂಗಸ್ವರೂಪಿಗಳಾದ ಅರಿಹಂತ ಅಜಿತರು. ಅವರನ್ನು ಯಾವ ಪುಂಗಿಯೂ ಮೋಹಪಡಿಸದು. ಪುಟ್ಟಿಯೂ ಹಿಡಿಸದು, ಮಾಯಾದಂಡವೂ ಮಣಿಸದು, ಕುಹಕಹಸ್ತವೂ ತುಡುಕದು, ಬಿಂಬವನ್ನು ಕನ್ನಡಿ ಪ್ರತಿಬಿಂಬಿಸುವಂತೆ -ಸಾಂಬಶಿವನನ್ನು ತಮ್ಮ ಮೊಗಗನ್ನಡಿಯಲ್ಲಿ ಶಿವಶರಣರು ಪ್ರತಿಬಿಂಬಿಸುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು