•  
  •  
  •  
  •  
Index   ವಚನ - 747    Search  
 
ಮಾಹೇಶ್ವರನ ಶರಣಸ್ಥಲ - ಶಿವಮಂತ್ರ
ಶಿವಲೋಕಕ್ಕೆ ಸರಿ ಬೇರೆ ಲೋಕವಿಲ್ಲ; ಶಿವಮಂತ್ರಕ್ಕೆ ಸರಿ ಬೇರೆ ಮಂತ್ರವಿಲ್ಲ; ಜಗಕ್ಕೆ ಇಕ್ಕಿದೆ ಮುಂಡಿಗೆಯನೆತ್ತಿಕೊಳ್ಳಿ: ʼಕೂಡಲಸಂಗಯ್ಯನೊಬ್ಬನೆ ದೈವʼವೆಂದು.
Transliteration Śivalōkakke sari bēre lōkavilla; śivamantrakke sari bēre mantravilla; jagakke ikkide mundigeyanettikoḷḷi: ʼkūḍalasaṅgayyanobbane daivaʼvendu.
Manuscript
English Translation 2 To match with Śiva 's world There is no other place; To match with Śiva mantra There is no other spell. I fling a challenge to the world- Do take it up: 'Lord Kūḍala Saṅga alone is God!' Translated by: L M A Menezes, S M Angadi
Hindi Translation शिवलोक सा दूसरा लोक नहीं; शिवमंत्र सा दूसरा मंत्र नहीं; मैंने विश्वसमक्ष यह समस्या रखी है, उठा लो कूडलसंगमदेव ही एक मात्र देव है॥ Translated by: Banakara K Gowdappa
Telugu Translation శివలోకమునకు సరి వేఱె లోకము లేదు; శివమంత్రమునకు సరి వేఱె మంత్రము లేదు; కూడల సంగయ్య ఒక్కడే దేవుడని జగమిచ్చు సమస్య నెత్తుకొనుడయ్యా! Translated by: Dr. Badala Ramaiah
Tamil Translation சிவலோகத்திற்கு இணை வேறு உலகில்லை சிவமந்திரத்திற்கு இணை வேறு மந்திரமில்லை உலகிற்குச் சவாலாக, கூடலசங்கமதேவன் ஒருவனே இறைவனென்று பரப்பியுள்ளேன். Translated by: Smt. Kalyani Venkataraman, Chennai
Marathi Translation शिवलोकासारखा दुसरा लोक नाही. शिवमंत्रासारखा दुसरा मंत्र नाही. जगाला माझे आव्हान आहे. कूडलसंगमदेव हा एकच देव आहे. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಬಸವಣ್ಣನವರ ಶೈವನಿಷ್ಠೆಯನ್ನು ಪ್ರಶ್ನಿಸುವಂತಿಲ್ಲವಾದರೂ ವಾದ ಮಾಡುವೆನೆಂಬ ಈ ವಚನ ಅವರದಲ್ಲದ ಸಂಭವವೇ ಹೆಚ್ಚು. ಸ್ವಧರ್ಮದ ಕೆಲವು ತತ್ತ್ವಗಳನ್ನು ಸಾರಿ ಹೇಳಿ-ಅವನ್ನು ಪ್ರತಿಭಟಿಸುವವನಿದ್ದರೆ ಬರಲಿ ನನ್ನೊಡನೆವಾದ ಮಾಡಲೆಂದು ಹಾಕುವ ಸವಾಲಿಗೆ ಸಾಕ್ಷಿಯಾಗಿ ತನ್ನ ತಲೆಯ ಮೇಲಣ ಟೊಪ್ಪಿಗೆಯನ್ನೋ ಪೇಟವನ್ನೋ ತೆಗೆದು ಕೆಳಗೆಸೆಯುವುದು ಪಂಥಾಹ್ವಾನದೊಂದು ರೀತಿ. ಪ್ರತಿವಾದಿ ಯಾವನಾದರಿದ್ದರೆ ಅದನ್ನು ಎತ್ತಿಕೊಳ್ಳಬೇಕು. ಆಗ ಆ ಇಬ್ಬರ ನಡುವೆ ವಾಗ್ವಾದಕ್ಕೆ ಒಪ್ಪಂದವಾದಂತೆಯೇ. ಬಸವಣ್ಣನವರು ನಿರೀಶ್ವರವಾದವನ್ನು ಸಹಿಸದೆ ಒಂದೇ ಒಂದು ಸಲ ಒಬ್ಬ ಮೀಮಾಂಸಕನೊಡನೆವಾದ ಮಾಡಿದ್ದುಂಟು.(ನೋಡಿ ಮುಂದಿನ ವಚನ), ಆಪ್ರಸಂಗ ಬಸವಪುರಾಣದಲ್ಲಿ ಬಹಳ ಪ್ರಸಿದ್ಧವಾಗಿಯೇ ಇದೆ. ಮಿಕ್ಕಂತೆ ಅವರು ವಾದವೆಂದರೆ ಹಿಂತೆಯುತ್ತಿದ್ದರಷ್ಟೇ ಅಲ್ಲ -ಹೇಸುತ್ತಿದ್ದರು -ನೋಡಿ ವಚನ 449. ಪ್ರತಿಷ್ಠೆ ಅಬ್ಬರ ವಿತಂಡ ವಿದ್ವೇಷ –ಅವರ ಸ್ವಭಾವಕ್ಕೇ ಹೊರತಾದುವು. ದೇವರೆಂದರೆ ಶಿವನೇ, ಆ ಶಿವನ ಲೋಕಕ್ಕೆ, ಶಿವನ ಮಂತ್ರಕ್ಕೆ ಸಮಾನವಿನ್ನೊಂದಿಲ್ಲ–ಎಂದು ಸಿದ್ಧಪಡಿಸಲು ಶಿವಾಧಿಕ್ಯದ ಕಥೆಗಳನ್ನು ಹಿಡಿದು ವಾದಮಾಡಬೇಕು-ಇಂಥ ಅವೈಚಾರಿಕ ಕಸರತ್ತಿಗೆ ಬಸವಣ್ಣನವರು ಎಂದಾದರೂ ತೊಡೆತಟ್ಟಿದ್ದರೆಂಬುದನ್ನು ನಂಬುವುದು ಯುಕ್ತವಲ್ಲ. ಶಿವನ ಸರ್ವೋತ್ತಮಿಕೆಯನ್ನು ಮಾಹೇಶ್ವರ ಸ್ಥಲದ ಮೊದಲಿಗೆ ಹೇಗೆ ವೇದೋಪನಿಷತ್ತುಗಳ ವಾಕ್ಯೋಲ್ಲೇಖಗಳಿಂದ ಅವರು ಸಮರ್ಥಿಸಿರುವರೆಂಬುದನ್ನು ನೋಡಬಹುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು