ಮಾಹೇಶ್ವರನ ಶರಣಸ್ಥಲ - ಭಕ್ತಿನಿಷ್ಟೆ
ಈಶ‍್ವರಸದ್ಭಾವೇ ಕಿಂ-ಪ್ರಮಾಣಂ
ಎಂಬ ಮೀಮಾಂಸಕನ ಮೂಗಿನ ಕೊನೆಯನು
'ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ ವಿಶ‍್ವತೋ ಬಾಹುರುತ
ವಿಶ‍್ವತಸ್‌ಪಾತ್| ಸ ಬಾಹುಭ್ಯಾಂ ಧಮತಿ ಸಂ ಪತತ್ರೈರ್
ದ್ಯಾವಾಭೂಮೀ ಜನಯನ್ ದೇವ ಏಕಃ'
ಎಂಬ ಸುರಗಿಯಲಿರಿದು,
ವೈಶೇಷಿಕ ಎಂಬ ಇಟ್ಟಿಗೆಯಲೊರಸಿ,
ಕೂಡಲಸಂಗಯ್ಯನೆಂಬ ಕನ್ನಡಿಯ ತೋರುವೆನು!
Transliteration ʼīśavarasadbhāvē kiṁ-pramāṇam'
emba mīmānsakana mūgina koneyadu
'viśvataścakṣuruta viśvatō mukhō viśasvatō bāhuruta
viśvataspāt| sa bāhubhyāṁ dhamati saṁ patatrair
dyāvābhūmi janayan dēva ēkaḥ'
emba suragiyaliridu,
vaiśēṣika emba iṭṭigeyalorasi,
kūḍalasaṅgayyanemba kannaḍiya tōruvenu!
Manuscript
English Translation 2 The agnostic who says,
'What is the evidence that God exists?'
I will chop off his nose,
And this shall be my knife:
'He, who created earth and heaven,
He, one only God
Whose eyes are everywhere,
Whose face is everything, whose arms and feet
Are over the universe; whose arms
As pinions blow the wind;
And rubbing it with Vaiśēṣika as brick,
I will show him
The mirror that we call
Lord Kūḍala Saṅgama!
Translated by: L M A Menezes, S M Angadi
Hindi Translation ईश्वर सद्भावे किम् प्रमाणम्
कहनेवाले मीमांस के नासिकाग्र को
विश्वतःश्चक्षुरुत विश्वतो मुखो
विश्वतो बाहुरुत विश्वतः पात्
सं बाहुभ्याम् धमति सं पतत्रैः
द्यावाभूमी जनयन देव एकः
इस खङ्ग से चुभोकर,
वैशेषिक नामक ईंट से रगडकर
कूडलसंगमेश नामक दर्पण दिखाऊँगा॥
Translated by: Banakara K Gowdappa
Telugu Translation ఈశ్వర సద్భావే కిం ప్రమాణంబను మీమాంసకుని చిగురముక్కును
‘‘విశ్వతశ్చక్షురుత విశ్వతోముఖో; విశ్వతో బాహురుత
విశ్వతోపాత్ సబాహుభ్యాంధమతి సంపతత్రైర్
ద్యావా భూమీ జనయం దేవ ఏకః’’ అను బాకుతో
పొడచి వైశేషికమను ఇటికతో రాచి
కూడల సంగడను దర్పణము చూపింతునయ్యా!
Translated by: Dr. Badala Ramaiah
Tamil Translation “ஈச்வர ஸத்பாவே கிம் ப்ரமாணம்”
என்னும் மீமாம்சகனின் மூக்கு நுனியை
“விச்வதச்சக்ஷுருத விச்வதோ முகே
விச்வதோ பாஹுருத விச்வத: பாத்
ஸம்பாஹுப்யாம் தமதி ஸம் பதத்ரை:
த்யாவாபூமி ஜன்யன் தேவ ஏக:
என்னும் வாளால் அறுத்து
வைசீஷிகம் எனும் செங்கல்லை அழித்து
கூடல சங்கமதேவன் எனும் ஆடியைக் காட்டுவேன்
Translated by: Smt. Kalyani Venkataraman, Chennai
Marathi Translation
ईश्वरसद्भावे किं प्रमाणः` असा प्रश्न
मिमांसक नाक वर करुन विचारतो.
विश्वतः चक्षुरुत विश्वतो मुखो । विश्वतो बाहुरुत विश्वतः पात् ।।
सं बाहुभ्यां धमति संपतत्रैः। द्यावाभूमी जनयन् देव एकः ।।
रुपी तलवारीने कापून, वैशेषिकरुपी नाकावर वीट रगडून,
कूडलसंगमरुपी दर्पण दाखवितो.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಈಶ್ವರನಿದ್ದಾನೆನ್ನಲು ಪ್ರಮಾಣವೇನು ಎಂದು ಉದ್ಧಟತನದಿಂದ ಪ್ರಶ್ನಿಸುವ ಮೀಮಾಂಸಕನ ಮೂಗಿನ ಕೊನೆಯನ್ನು–ಅಂದರೆ ಅಲ್ಪ ಜ್ಞಾನವನ್ನು ಶ್ವೇತಾಶ್ವತರೋಪನಿಷತ್ತಿನ “ವಿಶ್ವತಶ್ಚಕ್ಷುರುತ”ಎಂಬ ವಾಕ್ಯವನ್ನೇ ಸುರಗಿ ಮಾಡಿಕೊಂಡು ಇರಿದು –ಅಂದರೆ ಅವನ ದುರಹಂಕಾರದ ವಾದವನ್ನು ಖಂಡಿಸಿ-ಆದ ಮುಖಭಂಗವೆಂಬ ಘಾಯವನ್ನು ವೈಶೇಷಿಕರ ಆಸ್ತಿಕವಾದವೆಂಬ ಇಟ್ಟಿಗೆಯಿಂದ ಉಜ್ಜಿ ಅಂದರೆ –ದೇವರಿದ್ದಾನೆಂಬುದನ್ನು ಒತ್ತಿ ಹೇಳಿ-ಆಗ ಮೀಮಾಂಸಕನಿಗೆ ಆ ಮೂಲಕ ಆದ ಪಶ್ಚಾತ್ತಾಪಕ್ಕೆ ಶೈವದರ್ಪಣವನ್ನು ಹಿಡಿದು -ಶಿವನನ್ನು ಅಲ್ಲಗಳೆದು ಆತ್ಮನು ಪಡೆಯುವ ವಿರೂಪವನ್ನು ಮನಗಾಣೀಸುತ್ತೇನೆ ಎಂಬುದು ಈ ವಚನದ ಅನುವಾದ ವಿವರ.
ವೇದವೇ ದೇವರು, ವೇದಕ್ಕಿಂತ ಮಿಗಿಲಾದ ದೇವರು ಇನ್ನೊಂದಿಲ್ಲ. ವೇದಗಳಲ್ಲಿ ಹೇಳಿರುವ ಕಾಮ್ಯಕರ್ಮಗಳನ್ನು ಮಾಡಿದರೆ ಸ್ವರ್ಗ ಸಿಗುತ್ತದೆ. ವೇದನಿಷಿದ್ಧ ಕರ್ಮಗಳನ್ನು ಮಾಡಿದರೆ ನರಕಪ್ರಾಪ್ತವಾಗುತ್ತದೆ. ವೇದಗಳಲ್ಲಿ ಹೇಳಿರುವ ನಿತ್ಯ-ನೈಮಿತ್ತಿಕ ಕರ್ಮಗಳನ್ನು ಮಾಡಿದರೆ ಮೋಕ್ಷ ದೊರಯುತ್ತದೆ. ವೇದೋಕ್ತ ಕರ್ಮಗಳನ್ನು ಮಾಡುವುದೇ ಮೋಕ್ಷಕ್ಕೆ ಮಾರ್ಗ-ಮೋಕ್ಷವೆಂದರೆ –ಆತ್ಮನು ಶರೀರದಿಂದ ಬಿಡುಗಡೆ ಪಡೆದು ಸುಖವೂ ಇಲ್ಲದ, ದುಃಖವೂ ಇಲ್ಲದ ಶುದ್ಧರೂಪದಲ್ಲಿರುವುದು –ಕರ್ಮವೇ ದೇವರು, ಕರ್ಮವನ್ನು ಬಿಟ್ಟನ್ಯವಾದ ದೇವರಿನ್ನೊಂದಿಲ್ಲ. ಮಾಡಿದ ಕರ್ಮಗಳಿಗೆ ಆ ಕರ್ಮವೇ ಫಲವನ್ನು ಕೊಡುವುದಾಗಿ ಈಶ್ವರನೊಬ್ಬನನ್ನು (ಫಲದಾಯಕನೆಂದು) ಉತ್ಪಾದಿಸಿಕೊಳ್ಳುವುದು ಅವಿವೇಕವೆಂಬುದು ಮೀಮಾಂಸಕನ ಧಾರ್ಮಿಕ ನಿಲುವು.
ವೇದಗಳನ್ನು ಅಲ್ಲಗಳೆಯುವ ಜೈನರು ಬೌದ್ಧರು ಚಾರ್ವಾಕರೂ-ವೇದಕರ್ಮವಾದಿಗಳಾದ ಈ ಮೀಮಾಂಸಕರನ್ನು ಅಲ್ಲಗಳೆಯವರು. ಈ ಜಗತ್ತು ಕರ್ಮನಿಯಮಿತವೇ ಆಗಿರದೆ ಈಶ್ವರನಿಯಮಿತವೂ ಆಗಿರುವುದೆಂದು ನಂಬುವ ವೈಶೇಷಿಕರೂ-ನಿರೀಶ್ವರವಾದಿಗಳಾದ ಈ ಮೀಮಾಂಸಕರನ್ನು ಖಂಡಿಸುವರು. ಬಸವಣ್ಣನವರೂ ಕರ್ಮೈಕಗ್ರಾಹಿಯೂ ನಿರ್ದೈವವಾದಿಯೂ ಆದ ಮೀಮಾಂಸಾವಾದವನ್ನು ಸಹಿಸರು.
ವೈದಿಕನಾದ ಮೀಮಾಂಸಕನ ನಿರೀಶ್ವರವಾದವನ್ನು ಖಂಡಿಸಲು ಬಸವಣ್ಣನವರು ವೈದಿಕವಾದೊಂದು ದರ್ಶನ(ವೈಶೇಷಿಕ)ವನ್ನೇ ಪ್ರಮಾಣವನ್ನಾಗಿ ಎತ್ತಿಕೊಂಡು ವೇದವಾಕ್ಯವನ್ನೇ ಉಲ್ಲೇಖಿಸುತ್ತ ವಾದಮಾಡಿದ್ದನ್ನು ಎಲ್ಲ ಬಸವ ಪುರಾಣಗಳಲ್ಲಿಯೂ ನಿರೂಪಿಸಲಾಗಿದೆ.
ವಚನದಲ್ಲಿ ಉಲ್ಲೇಖಿತವಾಗಿರುವ ಉಪನಿಷದ್ವಾಕ್ಯದ ಅನುವಾದ : “ಭೂಮ್ಯಾಕಾಶಗಳಿಗೆ ಜನಕನಾದ ದೇವರು ಒಬ್ಬನೇ. ಎಲ್ಲೆಡೆ ಅವನ ಕಣ್ಣಿದೆ. ಎಲ್ಲೆಡೆ ಅವನ ಮುಖವಿದೆ, ಎಲ್ಲೆಡೆ ಅವನ ಬಾಹುವಿದೆ ಮತ್ತು ಎಲ್ಲೆಡೆ ಅವನ ಪಾದವಿದೆ. ಅವನು ತನ್ನೆರಡು ಕೈಗಳನ್ನು ಬೀಸಲಾಗಿಯೇ ಬೆಂಕಿ ಉರಿಯುತ್ತಿದೆ”(ಶ್ವೇತಾಶ್ವತರೋಪನಿಷತ್ 3-3)
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು