•  
  •  
  •  
  •  
Index   ವಚನ - 749    Search  
 
ಮಾಹೇಶ್ವರನ ಶರಣಸ್ಥಲ - ಭಕ್ತಿ
ಪಂಚಬ್ರಹ್ಮವ ಕೆಡಿಸಿತ್ತು; ಪ್ರಣವಮಂತ್ರವನೀಡಾಡಿತ್ತಲ್ಲಾ; ಕರ್ಮಂಗಳನೆ ಕಳೆಯಿತ್ತು; ಕ್ರೀಗಳನೆ ಮೀರಿತ್ತಲ್ಲಾ; ಆಗಮದ ಹಲ್ಲನೆ ಕಳೆಯಿತ್ತು, ಕೂಡಲಸಂಗಯ್ಯನ ಭಕ್ತಿಗಜ ಹೋ!
Transliteration Pan̄cabrahmava keḍisittu; praṇavamantravanīḍāḍittallā; karmaṅgaḷane kaḷeyittu; krīgaḷane mīrittallā; āgamada hallane kaḷeyittu, kūḍalasaṅgayyana bhaktigaja hō!
Manuscript
English Translation 2 Behold! devotion to Lord Kūḍala Saṅga , Sure, like an elephant Tramples upon the 'Pañcabrahma,' Scatters about the Prāṇava -mantra, Roots out the Karmas, leaps over all acts, Knocks out the teeth of Āgamas! Translated by: L M A Menezes, S M Angadi
Hindi Translation कूडलसंगमेश का भक्ति-गज पंचब्रह्म का नाश करता है; प्रणवमंत्र का उच्चाटन करता है, कर्मों का निर्मूलन करता है, क्रियाओं का अतिक्रमण करता है, आगम के दाँत तोडता है॥ Translated by: Banakara K Gowdappa
Telugu Translation చెఱచె పంచబ్రహ్మమును; పడగొట్టె ప్రణవమంత్రమును; కడతేర్చె కర్మను; మీరె టోక్రియలనెల్ల ; పండ్లు పడగొట్టె ఆగమమునకు; సంగని భక్తి గజ మహహా! Translated by: Dr. Badala Ramaiah
Tamil Translation ஐந்து பிரம்மரைக் கெடுத்து, பிரணவமந்திரத்தை வீசியதன்றோ, கர்மங்களைக் களைந்தது கிரியைகளை மீறியதன்றோ, ஆகமத்தின் பல்லைக் களைந்தது கூடல சங்கனின் பக்தி எனும் யானை. Translated by: Smt. Kalyani Venkataraman, Chennai
Marathi Translation चालला भक्तिगज, पंचभूत तुडवित प्रणवमंत्र म्हणत, ओ हो, ओ हो कर्मकांड सांडित, आगम तया पायात बत्तिसी, पाडीत, ओ हो, ओ हो कूडलसंगमदेवा ! भक्ति गज तालात तव नाम तंद्रित, ओ हो, ओ हो अर्थ : जनहो पहा पहा! माझ्या कूडलसंगमदेवाचे (परशिवाचे) भक्तित तल्लीन होऊन शिवाद्वैतनामे गजराज पंचमहाभूताचा नाश करीत पुढे पुढे चालला आहे. तो जात असता त्यांच्या तोंडून ! ॐ नमः शिवाय या प्रणव मंत्राचा जयघोष ऐकू येत आहे. कर्मकांड यज्ञ-याग व नेम व्रतक्रिया त्याच्या पायाखाली नाश पावत आहेत. त्यामुळे आगम- शास्त्र आदिची नाचक्की होत आहे. या कारणे अशा शिवाद्वैत नामे गजराजामागे धावा घेतल्यास पैलतीर गाठणे आता कितीतरी सोईचे झाले आहे. असे महात्मा बसवेश्वर आपल्या वरील वचनात म्हणत आहेत. Translated by Rajendra Jirobe, Published by V B Patil, Hirabaug, Chembur, Mumbai, 1983 पंचब्रह्माला नष्ट केले. प्रणवमंत्राला अस्ताव्यस्त केले. कर्म नष्ट केले, क्रियांची बंधने तोडली. आगमाचे दात पाडले, कूडलसंगमदेवाच्या भक्तीगजाने हे केले. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಆನೆಯೊಂದು ಪಂಚಬ್ರಹ್ಮವನ್ನು ತುಳಿಯಿತು, ಪ್ರಣವ ಮಂತ್ರವನ್ನು ಈಡಾಡಿತು, ಕರ್ಮಗಳನ್ನೂ ಕ್ರಿಯೆಗಳನ್ನೂ ಹಿಂದೆಹಾಕಿ ಓಡಿ ಆಗಮದ ಹಲ್ಲನ್ನೇ ಮುರಿಯಿತು. ಯಾವುದೀ ಆನೆ ? ಈ ಬೆಡಗಿನ ಒಗಟನ್ನು “ಭಕ್ತಿ” ಎಂದು ಬಿಡಿಸುವರು ಬಸವಣ್ಣನವರು. ಧರ್ಮಾರಣ್ಯನಿಬಿಡದಲ್ಲಿ ಭಕ್ತಿಯೆಂಬ ಆನೆ ಹೋದದ್ದೇ ದಾರಿ, ಅದಕ್ಕೆ ಸದ್ಯೋಜಾತಾದಿ ಪಂಚಬ್ರಹ್ಮದ ಉಪಾಸನೆಯಿಲ್ಲ, ಪ್ರಣವಮಂತ್ರೋಚ್ಛಾರಣೆಯಿಲ್ಲ, ಅದಕ್ಕೆ ದೀಕ್ಷಾದಿಕ್ರಿಯೆಗಳೂ ಇಲ್ಲ, ಪೂಜಾದಿ ಚರ್ಯೆಗಳೂ ಇಲ್ಲ. ಆಗಮದ ಕ್ರಿಯೆ-ಚರ್ಯೆ-ಯೋಗ-ಜ್ಞಾನವೆಂಬ ಪಾಂಕ್ತವಾದ ಅಂಕೆ-ಝಂಕೆಗಳೂ ಇಲ್ಲ. ಭಕ್ತಿಯೆಂದರೆ ದೇಹವೇ ದೇವಾಲಯವಾಗಿ ಜೀವವೇ ದೇವರಾಗಿರುವ ಸ್ವಯಂಸ್ಥಿತಿ: “ಉದಕ ಮೂರುತಿಯಾಗಿ ಉದಯವಾಯಿತ್ತು ಪಿಂಡಿಗೆಯಲ್ಲಿ. ಮೂಲಸ್ಥಾನ ಸ್ಥಾಪ್ಯವಾಯಿತ್ತು ಸ್ವದೇಹಶಿವಪುರದಲ್ಲಿ, ವಾಯು ಪೂಜಾರಿಯಾಗಿ ಪರಿಮಳದಿಂಡೆಯ ಕಟ್ಟಿ ಪೂಜಿಸುತ್ತಿರ್ದುದೋ ಶಿವಾಲಯದಾದಿಮಧ್ಯಸ್ಥಾನದಲ್ಲಿ. ಗುಹೇಶ್ವರನೆಂಬುದರಲ್ಲಿಯೇ ನಿಂದಿತ್ತು” (ಅಲ್ಲಮನವಚನ ಚಂದ್ರಿಕೆ-193) ವಿ : (1) ಪಂಚಬ್ರಹ್ಮವೆಂದರೆ ಸದಾಶಿವತತ್ತ್ವದ ಸದ್ಯೋಜಾತ-ವಾಮದೇವ-ಅಘೋರ-ತತ್ಪುರುಷ-ಈಶಾನವೆಂಬ ಪಂಚ ಶೀರ್ಷಿಕೆಗಳು. ಅವುಗಳಿಂದಲೇ ಪಂಚಾಕ್ಷರ ಶಿವಮಂತ್ರ ಮತ್ತು ಒಂಕಾರಪ್ರಣವ ಹುಟ್ಟುವುದು. ಆ ಓಂಕಾರದಿಂದಲೇ ನಾದ-ಬಿಂದುಗಳು ನೇರ್ಪಟ್ಟು ಕಲಾರೂಪವಾದ ಈ ಪ್ರಪಂಚ ಮೈದಾಳುವುದು. (2) ಮೂಲಸ್ಥಾನವೆಂದರೆ ಹಂಪೆ ಶ್ರೀಶೈಲ ಎಂಬಂಥ ಪವಿತ್ರ ಕ್ಷೇತ್ರ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು