•  
  •  
  •  
  •  
Index   ವಚನ - 750    Search  
 
ಮಾಹೇಶ್ವರನ ಶರಣಸ್ಥಲ - ವೇದ-ಶಾಸ್ತ್ರ
ವೇದ ನಡನಡುಗಿತ್ತು, ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತ್ತಯ್ಯಾ ! ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತ್ತಯ್ಯಾ : ಆಗಮ ಹೆರತೊಲಗಿ ಅಗಲಿ ಇದ್ದಿತ್ತಯ್ಯಾ , ನಮ್ಮ ಕೂಡಲಸಂಗಯ್ಯನು ಚೆನ್ನಯ್ಯನ ಮನೆಯಲುಂಡ ಕಾರಣ!
Transliteration Vēda naḍanaḍugittu, śāstravāgali kelakke sāriddittayyā! Tarka tarkisalariyade mūguvaṭṭiddittayyā: Āgama heratolagi agali iddittayyā, nam'ma kūḍalasaṅgayyanu cennayyana maneluṇḍa kāraṇa!
Manuscript
English Translation 2 The Vēda quaked, the Śāstra stepped aside; Logic, unable to infer, fell dumb; The Āgamas, swerving, stood apart- Because our Lord Kūḍala Saṅga Ate at Cennayya's house! Translated by: L M A Menezes, S M Angadi
Hindi Translation वेद भर्राये, शास्त्र पार्श्व में हट गया! तर्क, तर्क करना न जान मूक बन गया। आगम खिसककर पृथक हो गया । इसलिए कि मम कूडलसंगमदेव ने। चन्नय्या के घर में भोजन किया॥ Translated by: Banakara K Gowdappa
Telugu Translation గడగడవడకె వేదము; జారుకొనుచుండె శాస్త్రము తర్కింపలేక తర్కము మూగjైుపోయె దరిచెడి దూరమగుచుండె ఆగమము సంగడు చెన్నయ్య యింట తిన్న కారణమున! Translated by: Dr. Badala Ramaiah
Tamil Translation வேதம் நடுநடுங்கியது, சாத்திரம் அகன்று பக்கத்தில் சரிந்தது, தருக்கம், தருக்கம் செய்ய அறியாது ஊமையாயிற்றன்றோ! ஆகமம் பின்னால் சரிந்து அகன்றது ஐயனே நம் கூடல சங்கமதேவன், சக்கிலி சென்னய்யனின் இல்லத்தில் உண்டதால் ஐயனே. Translated by: Smt. Kalyani Venkataraman, Chennai
Marathi Translation थरथरले देव, खाली आले शास्त्र तर्काचे ते शस्त्र, न चाले ते चन्नय्या प्रसादे, पळाले आगम देव कूडलसंगम, प्रसन्नले अर्थ : मातंग चन्नय्यांच्या घरी प्रसाद सेवन केल्यामुळे देवगण थरथर कापत होते. शास्त्रे आपली जागा सोडून पळून गेले. तर्कने मौन धारण केले, आणि आगम तर मागे सरून दिसेनासा झाला. माझ्या कूडलसंगमदेवा! (परशिवलिंगा) मातंग चन्नय्याच्या प्रसाद सेवनाने तू मात्र प्रसन्न झालास. Translated by Rajendra Jirobe, Published by V B Patil, Hirabaug, Chembur, Mumbai, 1983 वेद थरथर कापू लागले, शास्त्र मागे सरकले. तर्क वितर्क केल्याविना गोंधळून गेले देवा. आगम आपोआप अंग चोरुन दूर गेले देवा ! आमचा कूडलसंगमदेव मादार चन्नय्याच्या घरी जेवल्यामुळे. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ವೈದಿಕಧರ್ಮದ ವಿಶಿಷ್ಟಲಕ್ಷಣವೆಂದರೆ ವರ್ಣವ್ಯವಸ್ಥೆ : ಸ್ವಧರ್ಮೀಯರನ್ನು ಮೇಲುಕೀಳೆಂದು -ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಪಂಚಮರೆಂದು ವಿಭಾಗಿಸುವುದು. ಮೇಲುಮೇಲಿನವರು ಕೆಳಕೆಳಗಿನವರನ್ನು ಶೋಷಿಸುವುದು. ಈ ವ್ಯವಸ್ಥೆಯನ್ನು ಅದಲುಬದಲಿಸಲಾಗದು –ಉಪೇಕ್ಷಿಸಲೂ ಆಗದು-ಈ ಪ್ರಯತ್ನದಲ್ಲಿ ತೊಡಗಿದವರು ವಧಿಸಲ್ಪಡುತ್ತಿದ್ದರು ಅಥವಾ ನಾಸ್ತಿಕರೆಂದು ಬಹಿಷ್ಕರಿಸಲ್ಪಡುತ್ತಿದ್ದರು. ಆದ್ದರಿಂದ ಶೂದ್ರರೂ ಪಂಚಮರೂ ಮೇಲ್ವರ್ಣದವರ ದಾಸ್ಯವನ್ನು ಮಾಡಿಕೊಂಡೇ ಜೀವಿಸಬೇಕಾಗಿತ್ತು. ಈ ಅಮಾನವೀಯವನ್ನು ಜೈನ-ಬೌದ್ಧ-ಶರಣಧರ್ಮಗಳು ಪ್ರತಿಭಟಿಸಿದವು. ಈ ಹಿನ್ನೆಲೆಯಲ್ಲಿ ಬಸವಣ್ಣನವರೂ 12ನೇ ಶತಮಾನದಷ್ಟು ಹಿಂದೆ–ಈ ವರ್ಣವ್ಯವಸ್ಥೆಯನ್ನು ಅಲ್ಲಗಳೆದು–ಕಲ್ಯಾಣೀ ಚಾಳುಕ್ಯರ ರಾಜಧಾನಿಯಾದ ಕಲ್ಯಾಣನಗರದಲ್ಲಿಯೇ ನಾಗಿದೇವನೆಂಬೊಬ್ಬ ದಲಿತ ಶಿವಭಕ್ತನ ಮನೆಯಲ್ಲಿ ಊಟಮಾಡಿ ಅರಮನೆಯನ್ನು ಪ್ರವೇಶಿಸುತ್ತಿರಲು –ಏರ್ಪಟ್ಟ ಉಗ್ರ ಪದರ್ಶನವನ್ನು ಉಗ್ರವಾಗಿಯೇ ಎದುರಿಸಿದರು : ದೇವರೇ ಮಾದರ ಚೆನ್ನಯ್ಯನ ಮನೆಯಲ್ಲಿ ಉಂಡನೆಂದು ಭಕ್ತಿಚರಿತ್ರೆಯನ್ನು ಉಲ್ಲೇಖಿಸಿದರು. ಹೀಗೆ ಬಸವಣ್ಣನವರು ಈ ವರ್ಣಸಂಕರವನ್ನು ಬೆಂಬಲಿಸುತ್ತ–ಅದನ್ನು ವಿರೋಧಿಸಿಕೊಂಡು ಬಂದಿದ್ದ ವೇದ-ಶಾಸ್ತ್ರ-ತರ್ಕ-ಆಗಮಾದಿ ಧರ್ಮಗ್ರಂಥಗಳನ್ನು ಬಲವಾಗಿ ನಿರಾಕರಿಸಿದರು. ವರ್ಣಸಂಕರವನ್ನು ಸಹಿಸದ ಭಗವದ್ಗೀತೆಯ ಮಾತನ್ನು ನೋಡಿ : ಚಾತುರ್ವರ್ಣ್ಯಂ ಮಾಯ ಸೃಷ್ಟಂ ಗುಣಕರ್ಮ ವಿಭಾಗಶಃ ಉತ್ಸೀದೇಯುರಿಮೇ ಲೋಕಾ ನ ಕುರ್ಯಾಂ ಕರ್ಮ ಚೇದಹಂ | ಸಂಕರಸ್ಯ ಚ ಕರ್ತಾ ಸ್ಯಾಮುಪಹನ್ಯಾಮಿಮಾಃ ಪ್ರಜಾಃ ಸಂಕರೋ ನರಕಾಯೈವ ಕುಲಘ್ನಾನಾಂ ಕುಲಸ್ಯ ಚ | ಪತಂತಿ ಪಿತರೋ ಹ್ಯೇಷಾಂ ಲುಪ್ತ ಪಿಂಡೋದಕಕ್ರಿಯಾಃ ದೋಷೈರೇತೈಃ ಕುಲಘ್ನಾನಾಂ ವರ್ಣಸಂಕರಕಾರಕೈಃ | ಉತ್ಸಾದ್ಯಂತೇ ಜಾತಿಧರ್ಮಾಃ ಕುಲಧರ್ಮಾಶ್ಚ ಶಾಶ್ವತಾಃ ಅನುವಾದ : ಜನರ ಗುಣ ಮತ್ತು ಕರ್ಮಕ್ಕನುಸಾರವಾಗಿ ವರ್ಣವ್ಯವಸ್ಥೆಯನ್ನು ಮಾಡಿದವನು ನಾನೇ. ಆ ವರ್ಣಧರ್ಮೋಚಿತವಾದ ಕರ್ಮಗಳನ್ನು ನಿರ್ವಿಘ್ನ ನಡೆಯುವಂತೆ ಮಾಡದಿದ್ದರೆ ಏಳು ಲೋಕ ಹಾಳಾಗುವುದು-ಮತ್ತು ವರ್ಣಸಂಕರಕ್ಕೆ ನಾನೇ ಕಾರಣಕರ್ತನೆನಿಸಿ -ನಾನೇ ಈ ಜನರನ್ನು ಕೈಯಾರೆ ಕೊಂದಂತಾಗುವುದು. ಕುಲವ್ಯವಸ್ಥೆಯನ್ನು ನಾಶಮಾಡಿದವರಿಗೇ ಅಲ್ಲ ಆ ಕುಲಸಮೂಹಕ್ಕೂ ನರಕ ಉಂಟಾಗುವುದು –ವರ್ಣಸಂಕರ ದೋಷದಿಂದ. ಇಂಥವರ ಪಿತರರೂ ಪಿಂಡೋದಕ ಕ್ರಿಯೆಗಳಿಗೆ ಅರ್ಹರಾಗದೆ ಪತಿತರಾಗುವರು. ಕುಲಘ್ನರ ಈ ವರ್ಣಸಂಕರಕಾರಕ ದೋಷದಿಂದಾಗಿ ಶಾಶ್ವತವಾದ ಜಾತಿಧರ್ಮಗಳೂ ಕುಲಧರ್ಮಗಳೂ ವಿನಾಶವಾಗುವವು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು