•  
  •  
  •  
  •  
Index   ವಚನ - 752    Search  
 
ಮಾಹೇಶ್ವರನ ಶರಣಸ್ಥಲ - ಏಕದೇವೋಪಾಸನೆ
ನೀನಲ್ಲದನ್ಯದೈವವುಂಟೆಂಬವನ ಬಾಯ, ಕೆನ್ನೆವಾರೆ ಸೀಳಿದಲ್ಲದೆ ಎನ್ನ ಮುನಿಸು ಹೋಗದಯ್ಯಾ, ಎನ್ನ ಕೋಪವಡಗದಯ್ಯಾ! ಎನ್ನ ಬಿನ್ನಪವನವಧರಿಸು, ಕೂಡಲಸಂಗಮದೇವಾ.
Transliteration Nīnalladan'yadaivavuṇṭembavana bāya, kennevāre sīḷidallade enna munisu hōgadayyā, enna kōpavaḍagadayyā! Enna binnapavanavadharisu, kūḍalasaṅgamadēvā.
Manuscript
English Translation 2 My anger will not pass Unless I tear up to the upper cheek The mouth of him who says There be other gods but Thee My anger will not leave me, Lord! O hearken to my prayer, Kūḍala Saṅgama Lord! Translated by: L M A Menezes, S M Angadi
Hindi Translation तुम्हारे सिवा कोई देव है कहनेवालों का मुहँ गाल तक न फाडूँ तो मेरा क्रोध शांत नहीं होगा मेरा कोप शांत नहीं होगा मेरी विनती सुनो कूडलसंगमदेव॥ Translated by: Banakara K Gowdappa
Telugu Translation ఎవ్వడలుగయేమి? ఊరెయలుగ నా కేమి? మా వానికి బిడ్డ నీవలదు బో! మా కుక్కకూ కడివేయ వలదు బో! ఏనుగుపై బోవువానిని కుక్క కఱచునే? మా సంగయ్య మాకుండునందాక మాకేమిలే! Translated by: Dr. Badala Ramaiah
Tamil Translation நீயின்றி வேறு கடவுள் உண்டு என்பவனின் வாயைத் தாடைவரையில் கிழித்தாலன்றி என் சினம் அகலாது ஐயனே என்சினம் அடங்காது ஐயனே, கூடல சங்கமதேவனே, நீ என் விண்ணப்பத்தை ஏற்பாய் ஐயனே. Translated by: Smt. Kalyani Venkataraman, Chennai
Marathi Translation तुझ्याहूनि अन्य देव आहे म्हणी, त्याचे तोंड फोडुनिया जिरऊ भोंड ऐसा रोष माझा ॥१॥ कूडलसंगमेशा ऐक हाचि थोर तो संकल्प तोवरती दूर कोप होईल न माझा ॥२॥ अर्थ : हे कूडलसंगमदेवा ! (परमेश्वरा) तुझ्याशिवाय अन्य देव आहे असे म्हणणाऱ्यांचे तोंड फोडल्याशिवाय माझा क्रोध कधीच दूर होणार नाही हाच माझा शिवसंकल्प होय. Translated by Rajendra Jirobe, Published by V B Patil, Hirabaug, Chembur, Mumbai, 1983 तुमच्या शिवाय अन्य देव आहे असे म्हणणाऱ्यांचे, तोंड फोडल्याशिवाय माझा राग जाणार नाही देवा. माझा क्रोध दूर होणार नाही देवा ! माझी ही प्रतिज्ञा आहे कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ದೇವನೊಬ್ಬ ನಾಮ ಹಲವು (ವಚನ 415) ಎಂಬ ಉದಾರದರ್ಶನ ಬಸವಣ್ಣನವರದು. ಅಂಥವರು ಶಿವನಿಗಿಂತಲೂ ಬೇರೆಯಾದ ದೇವರುಗಳನ್ನು ಮತ್ತು ಅವನ್ನು ಪೂಜಿಸುವ ನೂರಾರು ಮತದವರನ್ನು ತೀರ ಅಸಹನೆಯಿಂದ ಮತ್ತು ಹಿಂಸಾತ್ಮಕ ದ್ವೇಷದಿಂದ ಕಾಣುತ್ತಿದ್ದರೆಂದರೆ –ಎಲ್ಲ ವಿಧವಾದ ತರ್ಕಕ್ಕೂ ತಿಲಾಂಜಲಿಯಿತ್ತಂತೆಯೇ ! ಕೃಪಾವಲೋಕಿತೇಶ್ವರರಾದ ಬಸವಣ್ಣನವರನ್ನು–ಅನ್ಯಧರ್ಮೀಯರ ಬಾಯನ್ನು ಕೆನ್ನೆಯುದ್ದಕ್ಕೂ ಸಿಗಿಯುವ ಒಬ್ಬ ಅಚ್ಚಹಸೀ ಕಟುಕನನ್ನಾಗಿ ಸಂಭಾವಿಸುವುದು ಮರ್ಯಾದೆಯಲ್ಲ.ಇಂಥ ಅಸಭ್ಯ ಅನಾಗರಿಕ ವಚನವು ಕೀಳುದರ್ಜೆಯ ಒಂದು ಪ್ರಕ್ಷಿಪ್ತವಚನವೆಂಬುದರಲ್ಲಿ ಲವಲೇಶವೂ ಸಂಶಯವಿಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು