•  
  •  
  •  
  •  
Index   ವಚನ - 753    Search  
 
ಮಾಹೇಶ್ವರನ ಶರಣಸ್ಥಲ - ಲಿಂಗನಿಷ್ಠೆ
ಆರು ಮುನಿದು ನಮ್ಮನೇನ ಮಾಡುವರು? ಊರು ಮುನಿದು ನಮ್ಮನೆಂತು ಮಾಡುವರು? ನಮ್ಮ ಕುನ್ನಿಗೆ ಕೂಸ ಕೊಡಬೇಡ; ನಮ್ಮ ಸೊಣಗಂಗೆ ತಳಿಗೆಯನಿಕ್ಕಬೇಡ! ಆನೆಯ ಮೇಲೆ ಹೋಹವನ ಶ್ವಾನ ಕಚ್ಚಬಲ್ಲುದೆ, ನಮಗೆ ನಮ್ಮ ಕೂಡಲಸಂಗಯ್ಯನುಳ್ಳನ್ನಕ್ಕ?
Transliteration Āru munidu nam'manēna māḍuvaru? Nāvu munidu nam'manentu māḍuvaru? Nam'ma kunnige kūsa koḍabēḍa; nam'ma soṇagaṅge taḷigeyanikkabēḍa! Āneya mēle hōhavana śvāna kaccaballude, namage nam'ma kūḍalasaṅgayyanuḷḷannakka?
Manuscript
Music Courtesy: Vachana Vaibhava ℗ Super Cassettes Industries Limited, Singer: Puttru Narsinha Nayak, Released on: 2001-02-09
English Translation Damn those who are angry with us! What can they do to us? Even if the whole town rages against us, We don’t care! They can do nothing to us. Let them not give their daughters to our boys, Nor feed any food to our dogs! Can a stray dog bite the one riding an elephant? So long as we have our Lord Kūḍala Saṅgama with us— Who cares!
Translated by: Dr Shivamurthy Shivacharya Mahaswamiji, Taralabalu Math, Sirigere
English Translation 2 Whoever is angry, what do they do to us? Even if the entire town Be angry, how do they deal with us? Let them not give their children to our puppies! Let them not set a platter for our dogs! Can a dog bite One mounted on an elephant, So long as Lord Kūḍala Saṅgama Is on our side? Translated by: L M A Menezes, S M Angadi
Russian Translation Что могут сделать те, кто ненавидит нас? Даже если весь город против нас, Что они могут сделать? Не давайте жен нашим сыновьям! Не кормите наших собак! Дворняга не может достать едущего на слоне. Пока наш Бог Кудаласангама с нами - Ничто нас не сломит! Translated by: Prof Harishankar, Mysore and Mrs. Galina Kopeliovich, Russia
Hindi Translation कोई क्रुद्घ होकर हमें क्या करेगा? सारा नगर क्रुद्ध होकर हमें क्या करेगा? वे हमारे पुत्र को कन्या न दें, हमारे श्वान को थाली में न खिलाएँ! गजारोही को श्वान काट सकता है क्या? जब तक हमारे लिए कूडलसंगमदेव है? Translated by: Banakara K Gowdappa
Telugu Translation ఎవ్వడలుగయేమి? ఊరెయలుగ నా కేమి? మా వానికి బిడ్డ నీవలదు బో! మా కుక్కకూ కడివేయ వలదు బో! ఏనుగుపై బోవువానిని కుక్క కఱచునే? మా సంగయ్య మాకుండునందాక మాకేమిలే! Translated by: Dr. Badala Ramaiah
Tamil Translation யார் சினந்து நம்மை என்ன செய்வர்? ஊர் சினந்து நம்மை என்ன செய்வர்? நம் மகனிற்கு பெண்ணை அளிக்க வேண்டாம் நம் நாய்க்கு தாம்பாளத்தில் அளிக்க வேண்டாம் யானையின் மீது செல்வோனை நாயால் கடிக்கவியலுமோ? நமக்கு நம் கூடல சங்கன் உள்ள வரையில் ஐயனே. Translated by: Smt. Kalyani Venkataraman, Chennai
Marathi Translation कोणाचा तो क्रोध, आम्हा करी काय ? राजतेजे जाय, गज आमुचा ॥ १॥ रुसो सर्व गाव आम्हां त्याचे काय ? राजतेजे जाय, गज आमुचा ॥२॥ पुत्रास तें कन्या न दे त्याचे काय ? राजतेजे जाय, गज आमुचा ॥ ३ ॥ मम श्वाना रोटी न दे तरी काय ? राजतेजे जाय, गज आमुचा ॥ ४ ॥ भक्तिमार्गे जाता भुंकिल्याचे काय ? राजतेजे जाय, गज आमुचा ॥ ५ ॥ कूडलसंगमदेव प्रसन्न तो होय ? राजतेजे जाय, गज आमुचा ॥ ६ ॥ अर्थ - हे कूडलसंगमदेवा! (परमेश्वरा) भक्तिमार्गात तल्लीन होऊन तुझा भक्त जात असता त्याला कोणाच्या रोषाची, क्रोधाची हसण्याची निंदा-स्तुतीची चिंता नसते. तो आपल्या भक्तिरुपी राजतेजात आनंद विभोर होऊन गजपावलाने पुढे जात असतो गजगतीने जात असतांना कितीही कुत्रे भुंकले तरी त्याची त्याला पर्वा नसते. हे प्रभो ! माझ्या पुत्रास कोणी आपली कन्या न देवो व माझ्या कुत्र्यास कोणी भाकरीही न टाको त्याचा मला कसलाही खेद वाटणार नाही. एकमेव तुझी कृपा हेच माझ्या स्थितीगतीस कायम ठेवणारी होय. Translated by Rajendra Jirobe, Published by V B Patil, Hirabaug, Chembur, Mumbai, 1983 कोणी रागावले तरी आम्हाला काय करणार? गाव रागवला तरी आमचे काय बिघडणार? आमच्या पुत्राला पुत्री देवू नको, आमच्या कुत्र्याला भाकरी घालू नको! हत्तीवरुन जाणाराला कुत्रे चावेल का? आमच्या जवळ आमचा कूडलसंगम असेपर्यंत? Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಒಬ್ಬ ಕ್ರಾಂತಿಕಾರೀ ಸತ್ಯಾಗ್ರಹಿಯ ಕಾಳಜಿ ಕಠೋರತೆಯನ್ನು –ಅವನು ಏಕಾಂಗಿಯಾದಲ್ಲಿಯೂ ತೋರುವ ಪರಮವೀರದ ಸಾಹಸಚಿಂತನದ ನವೋನವ ದಿಗಂತಗಳನ್ನು ಈ ವಚನದಲ್ಲಿ ಕಾಣಬಹುದಾಗಿದೆ. ಬಸವಣ್ಣನವರು ತಮ್ಮ ನಿಷ್ಠೆಯನ್ನೇ ಜನರು ಒಂದು ಅನಿಷ್ಟವೆಂಬಂತೆ ಮುನಿದು ದೂರವಾಗುವ ಆ ಜನರಿಗೆ ಹೆದರಲಿಲ್ಲ. ಅಂಥವರಿಂದ ಅವರೇನನ್ನೂ ನಿರೀಕ್ಷಿಸಿಯೂ ಇರಲಿಲ್ಲ. ಕೊಟ್ಟು ತಂದು ಸಂಬಂಧವನ್ನು ಬೆಳೆಸುವ ಸ್ವಜನರೇ ಆಗಲಿ ಅನ್ಯರೇ ಆಗಲಿ ಅವರು ನ್ಯಾಯದೇವತೆಗೆ ಕಣ್ಣು ಹೊಡೆಯುವುದಾದರೆ ಅವರ ಹಂಗೇ ಬೇಡ ಎಂದರು ಬಸವಣ್ಣನವರು. ಅವರ ಗುರಿ ದೊಡ್ಡದು, ಅವರು ಹಿಡಿದ ದಾರಿ ದೊಡ್ಡದು, ಅವರಿಗಿದ್ದ ಆತ್ಮವಿಶ್ವಾಸ ದೊಡ್ಡದು-ಅವರಿಗಿದ್ದ ಪ್ರೇರಣೆ ಮತ್ತು ರಕ್ಷಣೆ ಶಿವನದಾಗಿತ್ತು. ಅಂದಮೇಲೆ ಸಣ್ಣತನದ ಸಣ್ಣಜನಕ್ಕೆ ಅವರು ಹೆದರುವುದೇನಿದೆ ? ಆನೆಯ ಮೇಲೆ ಹೋಗುವನನ್ನು ನಾಯಿ ಕಚ್ಚಬಲ್ಲುದೆ ? ಇಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು