ಮಾಹೇಶ್ವರನ ಶರಣಸ್ಥಲ - ನಿರ್ಭೀತಿ
ನ್ಯಾಯನಿಷ್ಟುರಿ, ದಾಕ್ಷಿಣ್ಯಪರನು ನಾನಲ್ಲ:
ಲೋಕವಿರೋಧಿ, ಶರಣನಾರಿಗಂಜುವನಲ್ಲ
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ.
Transliteration N'yāyaniṣṭuri, dākṣiṇyaparanu nānalla:
Lōkavirōdhi, śaraṇanārigan̄juvanalla
kūḍalasaṅgamadēvara rājatējadallippanāgi.
Manuscript
English Translation 2 Like adamant in defence of right,
I am not one for deference.
Having renounced the world, the Śaraṇa
Is not afraid of anyone, because
He dwells within the sovereign light
Of Lord Kūḍala saṅgama
Translated by: L M A Menezes, S M Angadi
Hindi Translation न्यायनिष्ठुर, दाक्षिण्य पर मैं नहीं हूँ,
लोक-विरोधि शरण किसी से नहीं डरता,
क्योंकि वह कूडलसंगमदेव के
राजतेज में रहता है ॥
Translated by: Banakara K Gowdappa
Telugu Translation న్యాయ నిష్ఠుడ దాక్షిణ్య పరుడనేగాను;
లోక విరోధి శరణుడెవ్వరికీ వెఱువడు;
అతడు సంగమ దేవుని రాజ తేజస్విjైు యుండునయ్యా!
Translated by: Dr. Badala Ramaiah
Tamil Translation நியாயத்தை மீறி இரக்கத்திற்குக் கட்டுண்டவன் நானல்ல
உலகியலிற்கு எதிரானவன், சரணன்
எவருக்கும் அஞ்சு வோனன்று
கூடல சங்கமதேவனின் பேரொளிப்பிழம்பில் உள்ளதால் ஐயனே
Translated by: Smt. Kalyani Venkataraman, Chennai
Marathi Translation
न्यायदानी समद्रष्टी ठेवितो
कोणाच्या नच दयेत जगतो
निंदास्तुती सम करुनी राहतो
महानवमीच मानी मरणाला
शरण कधी नच भी कोणाला ॥ धृ ॥
भक्तिज्ञान वैभवात राहतो
सदैव दासोहात तृप्त तो
कूडलसंगमदेवा माझ्या
निर्भय मी न चुके स्मरणाला
शरण कधी नच मी कोणाला ॥ धृ ॥
अर्थ - हे कूडलसंगमदेवा! (परशिवा) तुझे शरण अत्यंत धाडसी व न्यायी असतात. त्यांचा कठोर न्याय, वरुन जरी विघातक वाटला तरी सत्यासाठी त्याचे तसे वागणेच इष्ट होय. ते कधीही कोणाच्या दयेची याचना करीत नसतात. कोणाच्या निंदास्तुतीची पर्वा करीत नाही. कारण भक्तिज्ञानरुपी वैभवात कोटी राजतेजाच्या पुढे तुझे शिवशरण अगदी सुरक्षित असतात.
Translated by Rajendra Jirobe, Published by V B Patil, Hirabaug, Chembur, Mumbai, 1983
न्याय निष्ठूर आहे, कोणाच्या मिंद्यात मी नाही.
लोकविरोधी शरण कोणाला भित नाहीत.
कूडलसंगमदेवाच्या राजतेजात राहिल्यामुळे.
Translated by Shalini Sreeshaila Doddamani
Urdu Translation میں نہ گھبراؤں گا انصاف رسانی میں کبھی
چاہےدُنیا کا ہراک شخص مخالف ہوجائے
میں شرن ہوں، مرے سینے میں نہیں خوف وخطر
کوڈلا سنگما دیوا یہ خوشی ہےمجھ کو
میںترے حُسن ترے نورکا اک حصّہ ہوں
Translated by: Hameed Almas
ಕನ್ನಡ ವ್ಯಾಖ್ಯಾನ ದಾಕ್ಷಿಣ್ಯಪರನೆಂಬ ವ್ಯಕ್ತಿ ಎಲ್ಲಕ್ಕೂ ಹೌದಣ್ಣ. ಅಲ್ಲದುದನ್ನು ಅಲ್ಲವೆನ್ನಲೂ ಹೆದರುವ ಹೌದಣ್ಣ. ನ್ಯಾಯನಿಷ್ಠುರಿ ಹಾಗಲ್ಲ-ರಾಗವಾಗಲಿ ದ್ವೇಷವಾಗಲಿ ಇಲ್ಲದೆ-ಸ್ವಜನಪಕ್ಷಪಾತವಿಲ್ಲದೆ ಅನ್ಯರ ಮೇಲೆ ಹಗೆಯಿಲ್ಲದೆ ನ್ಯಾಯನಿಯಮಗಳಿಗೇ ಬದ್ಧನಾಗಿರುವನು. ಈ ಅರ್ಥದಲ್ಲಿ ಬಸವಣ್ಣನವರು ನ್ಯಾಯನಿಷ್ಠುರಿ–ದಾಕ್ಷಿಣ್ಯಪರರಲ್ಲ.
ಅವರು ದ್ರವಿಸುವಲ್ಲಿ ಸಕ್ಕರೆಯಂತೆ ಕರಗುವ, ಕತ್ತರಿಸುವಲ್ಲಿ ವಜ್ರದಂತೆ ಗಡುಸಾಗುವ ಅಪೂರ್ವಜನ, ತಮ್ಮನ್ನು ತಮ್ಮ ನಿರ್ದಾಕ್ಷಿಣ್ಯ ನ್ಯಾಯನಿಷ್ಠುರ ಸದ್ಗುಣಕ್ಕಾಗಿಯೇ ಲೋಕವಿರೋಧಿ ಎಂದು ಯಾರಾದರೂ ಅಪಪ್ರಚಾರಮಾಡಿದರೆ ತಾವು ಅದಕ್ಕೆ ಹೆದರುವುದಿಲ್ಲವೆಂದು ಬಸವಣ್ಣನವರು ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಿರುವರು,
ಶರಣನು ಶಿವನಿಗೆ ಶರಣಾಗತನಾದವನಾಗಿ–ಅವನಿಗೆ ಆ ಶಿವನೇ ಸ್ವಾಮಿ, ಆ ಸ್ವಾಮಿಯ ಅಜ್ಞಾನುಸಾರವೇ ಸೇವೆ ಮಾಡುತ್ತಿರುವನು. ಈ ಸೇವಾಮಾರ್ಗದಲ್ಲಿ ನಿಂದನೆ ಆಪಾದನೆಗಳು ಬಂದರೂ ಎದೆಗುಂದನು. ಶಿವರಾಜಕಾರ್ಯದಲ್ಲಿ ನಿರತನಾಗಿರುವ ಶಿವರಾಜಪುರುಷನಿಗೆ ಯಾರದೇನು ಭಯ ?
ಬಸವಣ್ಣನವರು–ಎನಗಿಂತ ಕಿರಿಯರಿಲ್ಲವೆಂದ ಮಾತ್ರಕ್ಕೆ ಅವರ ಪ್ರತಿರೂಪವನ್ನು ಮೇಣದಲ್ಲಿ ಪಿಸುಕಿಯೇ ಮಾಡದೆ –ವಜ್ರದಲ್ಲಿಯೂ ಕಡೆದು ನಿಲ್ಲಿಸಿಕೊಳ್ಳಬೇಕು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು