ಮಾಹೇಶ್ವರನ ಶರಣಸ್ಥಲ - ನಿರ್ಭಿಡೆ
ಊರ ಮುಂದೆ ಹಾಲ ಹಳ್ಳ ಹರಿಯುತ್ತಿರಲು,
ಓರೆಯಾವಿನ ಬೆನ್ನಲ್ಲಿ ಹರಿಯದಲೇಕಯ್ಯಾ?
ಲಜ್ಜೆಗೆಡಲೇಕೆ? ನಾಣುಗೆಡಲೇಕೆ?
ಕೂಡಲಸಂಗಮದೇವಯ್ಯನ್ನುಳ್ಳನ್ನಕ್ಕ
ಬಿಜ್ಜಳನ ಭಂಡಾರವೆನಗೇಕಯ್ಯಾ?
Transliteration Munde hāla haḷḷa hariyuttiralu,
ōreyāvina bennalli hariyadalēkayyā?
Lajjegeḍalēke? Nāṇugeḍalēke?
Kūḍalasaṅgamadēvayyanannuḷḷannakka
bijjaḷana bhaṇḍāravenagēkayyā?
Manuscript
English Translation 2 When a stream of milk flows past
The village, why should I pursue
A cow reluctant to give milk?
Why should I lose all shame and decency?
So long as Lord Kūḍala saṅgama
Is within me , why should I care
For Bijjaḷa’s treasured hoard?
Translated by: L M A Menezes, S M Angadi
Hindi Translation गाँव के पास जब दूध की नदी बहती है,
तो बाँझ गाय का पीछा क्यों करूँ?
क्यों निर्लज्ज होऊँ? अपमानित होऊँ?
कूडलसंगमदेव के रहते मुझे बिज्जळ का भंडार क्यों?
Translated by: Banakara K Gowdappa
Telugu Translation ఊరిముందు పాలవాగు పారుచుండగ
గొడ్డుటావు వెంట నురక నేల?
లజ్జ చెడనేల? నాన చెడనేల? సంగడుండునందాక
బిజ్జలుని భండారము నా కేలనయ్యా?
Translated by: Dr. Badala Ramaiah
Tamil Translation ஊரின் முன்பு பால்புனல் பாயும்பொழுது
முரட்டப்பசுவை நாடுவது ஏன் ஐயனே
நாணம் கெடுவது எதற்கு? வெட்கம் கெடுவதெதற்கு?
கூடல சங்கமதேவன் உள்ளவரையில்
பிஜ்ஜளனின் கருவூலம் எனக்கு எதற்கு ஐயனே.
Translated by: Smt. Kalyani Venkataraman, Chennai
Marathi Translation
अमृतमय दुर्लभ गंगा
गावा शेजारी वाहते
वांझ गाय शोधू का ते
कूडलसंगमेशा
तुझ्या कृपे पूर्ण होता
लज्जीत मी कैसे व्हावे
का बिज्जळ भांडारी जावे
कूडलसंगमेशा
अर्थ : हे कूडलसंगमदेवा ! (परमेश्वरा) तुझी पूर्ण कृपारूपी अमृतमय नदी अगदी माझ्या जवळून वाहत असताना मी निर्लज्जपणे बिज्जळ राजाच्या (बिज्जळ हा कल्याणचा राजा होता व बसवेश्वर हे त्याचे महामंत्री होते) भांडाराची अपेक्षा का करावी ? आणि विनाकारण का अपमानीत व्हावे? परशिवलिंगा मला तुझी एकमेव कृपादृष्टी पुरे आहे.
Translated by Rajendra Jirobe, Published by V B Patil, Hirabaug, Chembur, Mumbai, 1983
गावासमोर दूधाची नदी वाहताना
दगडी गायीच्या मागे कशाला धावू देवा?
निर्लज का होऊ? अपमानीत का होऊ ?
कूडलसंगमदेव असेपर्यंत बिजळाचे भांडार मला कशाला?
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಬಸವಣ್ಣನವರು ಬಿಜ್ಜಳನ ಭಂಡಾರವನ್ನು ಸ್ವಂತಕ್ಕಾಗಲಿ ಸ್ವಧರ್ಮಕ್ಕಾಗಲಿ ದುರುಪಯೋಗ ಮಾಡಿಕೊಂಡಿಲ್ಲವೆಂದು ಹೇಳಿರುವುದನ್ನು ಕಂಡರೆ-ಸಮಕಾಲದಲ್ಲಿ ಇಂಥ ಆರೋಪಣೆಯನ್ನು ವಿರೋಧಿಗಳು ಅವರ ಮೇಲೆ ಹೊರಿಸಿರಬೇಕೆಂಬುದು ಸ್ಪಷ್ಟವೇ ಇದೆ. ಆ ವಿರೋಧಿಗಳ ಆರೋಪಣೆಯನ್ನು ಸಮರ್ಥಿಸುವಂತೆ-ಶಿವಶರಣರ ಸಮಾರಾಧನೆಗಳಿಗೆ ಬಸವಣ್ಣನವರು ಅಪಾರ ರಾಜಧನವನ್ನು ವೆಚ್ಚ ಮಾಡಿದುದಾಗಿಯೂ –ಅದನ್ನು ತಿಳಿದು ಬಿಜ್ಜಳನು ಭಂಡಾರವನ್ನು ತನಿಖೆ ಮಾಡಿಸಿದಾಗ –ಆ ವೆಚ್ಚವಾಗಿದ್ದುದೆಲ್ಲ ಮತ್ತೆ ಭರ್ತಿಯಾಗಿದ್ದುದಾಗಿಯೂ ಕಟ್ಟಿರುವ ಪುರಾಣದ ಪವಾಡ ಕಥೆಗಳಿವೆ. ಸಾರ್ವಜನಿಕ ಹಣವನ್ನು ಅಪವ್ಯಯ ಮಾಡದಿರುವ ನಿಯತ್ತೇ ಒಂದು ದೊಡ್ಡ ಪವಾಡವೆಂದರಿಯದ ದಡ್ಡಪುರಾಣಿಕರು ತಮ್ಮ ಮತಾಚಾರ್ಯನು ಮಹಿಮಾನ್ವಿತನಾಗಿ ತೋರಲೆಂದು-ಇಂಥ ಅವಿವೇಕಗಳನ್ನು ಹಿಗ್ಗಾಮುಗ್ಗ ನೆಯ್ದಿರುವುದು ಶೋಚನೀಯ. ಈ ಪುರಣಗಳನ್ನೇ ಹಿಡಿದು ಯಾವನಾದರೊಬ್ಬ ವಿಮರ್ಶಕ-ಬಸವಣ್ಣನವರು ಬಿಜ್ಜಳನ ಭಂಡಾರವನ್ನು ದುರುಪಯೋಗಪಡಿಸಿಕೊಂಡಿದ್ದರೂ ಇರಬಹುದೆಂದರೆ-ಅದು ಆ ವಿಮರ್ಶಕನ ಆತ್ಮವಿಮರ್ಶೆಯೇ ಆದೀತು !
ಮನೆಯ ಮುಂದೆಯೇ ಹಾಲು ಪ್ರವಾಹವಾಗಿ ಹರಿಯುತ್ತಿರುವಾಗ -ನಾನೇಕೆ ಒದೆಯುವ ಹಸುವಿನ ಹಿಂದೆ ಪಾತ್ರೆ ಹಿಡಿದು ಹೋಗಲಿ ? ಅದರ ಕೆಚ್ಚಲಿಗೆ ಕೈಹಾಕಿ ಒದೆಸಿಕೊಂಡು ನಾನೂ ಭಂಗಪಟ್ಟು –ಇತರರಿಂದಲೂ ನಗಿಸಿಕೊಳ್ಳಲಿ ? ನನ್ನ ಮಹದ್ಯೋಜನೆಗಳೆಲ್ಲವೂ ಶಿವನ ಕರುಣೆಯಿಂದ ಸುಸೂತ್ರವಾಗಿ ನಡೆಯುತ್ತಿರುವಾಗ -ಬಿಜ್ಜಳನ ಭಂಡಾರ ನನಗೇಕೆ ಬೇಕು –ಎಂಬ ಬಸವಣ್ಣನವರ ಮಾತಿನಲ್ಲಿ ಹಸ್ತಶುದ್ಧಿಯಿದೆ, ರಾಜಧನವನ್ನು ನಿಗದಿಯಾದುದಕ್ಕಲ್ಲದೆ ಅನ್ಯಕ್ಕೆ ಉಪಯೋಗಿಸಿಕೊಳ್ಳುವುದು ಲಜ್ಜಾಸ್ಪದವೆಂಬ ಪ್ರಜ್ಞೆಯಿದೆ. ತನ್ನ ಅಗತ್ಯಗಳನ್ನು ಪೂರೈಸಿಕೊಡುವ ಮೂಲವು ರಾಜಕೀಯೇತರವಾದ ಧರ್ಮಕ್ಷೇತ್ರದಲ್ಲಿ ದೈವೇಚ್ಛೆಯನುಸಾರ ಯಥೇಚ್ಛವಾಗಿಯೆಂಬ ಹಾರ್ದಿಕ ಬಿನ್ನಪವಿದೆ –ಎಂದಮೇಲೆ-ಮರ್ಯಾದಸ್ತರು ಮತ್ತು ಮರ್ಯಾದಸ್ತ ವಿಮರ್ಶಕರು ಅದನ್ನು ನಂಬಬೇಕು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು