•  
  •  
  •  
  •  
Index   ವಚನ - 756    Search  
 
ಹೋಗಬಿಟ್ಟು, ಮರಳಿ ಹಿಂದ ನೋಡಿ, ಮತ್ತಾಗಬೇಕೆಂಬ ಸಂದೇಹವುಳ್ಳನ್ನಕ್ಕ ಅದೆ ಪಾರದ್ವಾರ ನಾಯಕನರಕ, ತಪ್ಪದು! ಅನ್ಯವಧುವೆಂಬುದು ನಿಮ್ಮ ರಾಣಿವಾಸ: ಇದೇ ದಿಬ್ಯ, ಕೂಡಲಸಂಗಮದೇವಾ.
Transliteration Hōgabiṭṭu, maraḷi hindakke nōḍi, mattāgabēkemba sandēhavuḷḷannakka adē pāradvāra nāyakanaraka, tappadu! An'yavadhuvembudu nim'ma rāṇivāsa: Ide dibya, kūḍalasaṅgamadēvā.
Manuscript
English Translation 2 As long as, letting go, you look behind Once more, and hesitate In your desire to wed, That is adultery : it’s certain hell This is my test,O Kūḍala saṅgama Lord: Another’s wife is Thine own queen! Translated by: L M A Menezes, S M Angadi
Hindi Translation जाने देना, पीछे मुडकर देखना, संदेह करना ही परनारी संग है। नायक नरक अनिवार्य है परस्त्री तव रनिवास है यही प्रमाण है कूडलसंगमदेव॥ Translated by: Banakara K Gowdappa
Telugu Translation పోవిడిచి మరల పొందదలచి ముందు చూచుచు మది శంకించు దాక రౌరవ నరకము తప్పదురా! పరకాంత యన్నది ప్రభుని రాణివాసము దివ్యమిదే కూడల సంగమ దేవా! Translated by: Dr. Badala Ramaiah
Tamil Translation அகலச்செய்து, மீண்டும் திரும்பிப் பார்த்து மீண்டும் வேண்டும் எனும் ஐயம் உள்ளவரை அது பரத்தமை, கீழான நரகம் தப்புமோ? பிறன்மனை என்பது உம் அந்தப்புறமன்றோ இதுவே ஆணை கூடல சங்கமதேவனே. Translated by: Smt. Kalyani Venkataraman, Chennai
Marathi Translation त्याग करुन, नंतर आपले करण्याची आशंका राहीपर्यंत त्याला परद्वार घोर नरक मिळेल, चुकणार नाही. अन्य वधू आपका राणीवास आहे. हेच प्रमाण कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಈ ವಚನದಲ್ಲಿ ಪರದಾರಗಮನ(ಪಾರದಾರ್ಯ)ವನ್ನು ನಿಷೇಧಿಸಲಾಗಿದೆ. ಇನ್ನೊಬ್ಬರ ಹೆಂಡಿರನ್ನು ಕಣ್ಣೆತ್ತಿ ನೋಡದಿರುವುದು-ಅಕೆಯೊಂದು ತ್ಯಾಜ್ಯವಸ್ತುವೆಂಬ ಅಸ್ಪೃಶ್ಯಭಾವದಿಂದಲ್ಲ–ಅವಳು ಶಿವ(ಭಕ್ತ)ನ ಸತಿ ಪಾರ್ವತೀದೇವಿಯೆಂಬ ಪರಮಪೂಜ್ಯಭಾವದಿಂದ ! ಗಂಡಹೆಂಡಿರ ಜೋಡಿಯು ಮೈಥುನದ ಮಿಥುನ ಮಾತ್ರವಲ್ಲ–ಅದು ಜಗದ ತಾಯಿ ತಂದೆ, ಈ ಮಹಾನುಭಾವದಿಂದಲೇ ಒಂದು ಜೋಡಿಯಲ್ಲಿ ಒಂದು ಇನ್ನೊಂದರ ಘನತೆಗೆ ಕುಂದುಂಟಾಗುವ ಯಾವ ನಡವಳಿಕೆಯನ್ನೂ ನಡೆಯಲಾಗದು. ಈ ಒಪ್ಪಂದದ ಮೇಲೆಯೇ ಮದುವೆಯಾಗುವುದು ಮತ್ತು ಮದುವೆಯನ್ನು ಮಾಡಿಸುವುದು. ವೇಶ್ಯಾವೃತ್ತಿಯನ್ನು ಕುರಿತ ವಾತ್ಸ್ಯಾಯನನ ಕಾಮಸೂತ್ರದಲ್ಲಿಯೂ ಪಾರದಾರ್ಯವನ್ನು ಘೋರವಾದೊಂದು ಪಾಪವೆಂದು (ಸಾಮಾನ್ಯವಾಗಿ) ಪರಿಗಣಿಸಲಾಗಿದೆ. ಈ ಪಾರದಾರ್ಯವು ಕೇವಲ ದೈಹಿಕವಾಗಿಯಷ್ಟೇ ಅಲ್ಲ –ಮಾನಸಿಕವಾಗಿಯೂ ನಿಷಿದ್ಧ. ಒಬ್ಬ ಗರತಿಯನ್ನು ಕಾಮದ ಕಣ್ಣಿಂದ ನೋಡುವುದೇನು –ಮರುಘಳಿಗೆ ಸಲ್ಲದೆಂದು ಸುಮ್ಮನಾಗುವುದೇನು –ಮರಳಿ ಮನ ಚಂಚಲಿಸಿ ಬಯಸುವುದೇನು –ಈ ನೋಟಬೇಟವೂ ಮನಬೇಟವೂ ಕೂಟಬೇಟದಷ್ಟೇ ಪಾತಕ. ತೋಳುತೊಡೆಗಳಿಂದಾಗುವುದಕ್ಕಿಂತ ಹೀನಾಯವಾದ ಅತ್ಯಾಚಾರ–ಕೇವಲ ಕೆಕ್ಕರಿಸಿದ ಕಣ್ಣುಗಳಿಂದಲೇ ಮಾನಿನಿಯೊಬ್ಬಳಿಗಾಗದೇನು ? ಈ ಸೂಕ್ಷ್ಮಜ್ಞತೆಯಿಂದ -ಸಹಜೀವಿಗಳ ಪವಿತ್ರಸಂಬಂಧವನ್ನು ರಕ್ಷಿಸಿದರೆ –ಅದೂ ನಮ್ಮನ್ನು ರಕ್ಷಿಸುತ್ತದೆ. ಎಂಬ ಈ ವ್ರತವನ್ನು ತಮ್ಮ ಮಾನದ ಮೇಲೆ ಪ್ರಾಣದ ಮೇಲೆ ಆಣೆಯಿಟ್ಟು ಪಾಲಿಸುವುದಾಗಿ ಪ್ರತಿಜ್ಞೆ ಮಾಡುತ್ತಿದ್ದಾರೆ ಬಸವಣ್ಣನವರು. ವಿ : ದಿಬ್ಯದ ವಿವರಕ್ಕೆ ನೋಡಿ ವಚನ 237, 336 ಮತ್ತು 647. ದೃಢವ್ರತವಿಲ್ಲದೆ ಚಂಚಲ ಮನಸ್ಕನಾಗುವುದೂ ಪಾರದಾರ್ಯವೇ ಎನ್ನುತ್ತಿರುವರು ಬಸವಣ್ಣನವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು