ಕಂಡುದಕ್ಕೆಳಸೆನೆನ್ನ ಮನದಲ್ಲಿ, ನೋಡಿ ಸೋಲೆನೆನ್ನ ಕಣ್ಗಳಲ್ಲಿ,
ಆಡಿ ಹುಸಿಯೆನೆನ್ನ ಜಿಹ್ವೆಯಲ್ಲಿ.
ಕೂಡಲಸಂಗಮದೇವಾ,
ನಿಮ್ಮ ಶರಣನ ಪರಿ ಇಂತುಟಯ್ಯಾ.
Transliteration Kaṇḍudakkeḷasenenna manadalli, nōḍi sōlenenna kaṇgaḷalli,
āḍi husiyenenna jihveyalli.
Kūḍalasaṅgamadēvā,
nim'ma śaraṇana pari intutayyā.
Manuscript
English Translation 2 My mind disdains to crave
Whatever thing I see;
My eyes do not succumb
To every thing they look upon;
My tongue does not belie
It’s promised word.
O Kūḍala saṅgama Lord,
Such are Thy Śaraṇa !
Translated by: L M A Menezes, S M Angadi
Hindi Translation जो देखता हूँ उसकी इच्छा
मेरे मन में नहीं होती,
देखकर मेरी आँखें नहीं हारतीं
वचन से मेरी जिह्वा मुकर नहीं जाती
कूडलसंगमदेव, तव शरणों की रीति ऐसी है॥
Translated by: Banakara K Gowdappa
Telugu Translation చూచిన కడయెల్లా నా మదిసోలదు
నా కండ్లు వాలవు; పల్కి నా నాల్క బొంకదు;
సంగా; నీ శరణుని పథ మిట్టులయ్యా?
Translated by: Dr. Badala Ramaiah
Tamil Translation கண்டதையெல்லாம் மனதில் விரும்பேன்
என் கண்களால் கண்டு தோற்பதில்லை
சொல்லிப் பொய்ப்பதில்லை என் நாவினால்
கூடல சங்கமதேவனே
உம் சரணரின் வழி இத்தகையது ஐயனே.
Translated by: Smt. Kalyani Venkataraman, Chennai
Marathi Translation
मन व्याकुळता काय
नयन चंचलता काय
जिव्हेसी मिथ्या ते काय
न जाणती शरण
कूडलसंगमदेवा माझ्या
शरणांची ऐसी रीती
व्याकूळ चंचल ना होती
तेचि शिवशरण
अर्थ - हे कूडलसंगमदेवा! (परशिवा) तुझ्या शरणांची रीतच काही जगावेगळी होय. ते कधी व्याकूळ होत नाहीत. त्यांचे नयन कधी चंचल होत नाहीत. त्यांची जिव्हा कधीही खोटे बोलत नाही हे मी तुझ्या शपथेवर सांगतो.
Translated by Rajendra Jirobe, Published by V B Patil, Hirabaug, Chembur, Mumbai, 1983
मन व्याकुल करीत नाही. पाहून चंचलता नयनात आणू नको.
खोटे बोल जीभेने बोलवू नको.
कूडलसंगमदेवा, तुमच्या शरणांची ही रीत आहे देवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಈ ಲೋಕದ ಸಂಪತ್ಸಮೃದ್ದಿಯು ಮಾನವನಿಗೆ ಪ್ರಕೃತಿಯು ಕೊಟ್ಟಿರುವೊಂದು ವರವಾದರೆ–ಅದನ್ನು ಪ್ರತಿಯೊಬ್ಬರೂ ಸ್ವಂತ ಆಸಕ್ತಿಯನ್ನಾಗಿ ಮಿತಿಮೀರಿ ಆಕ್ರಮಿಸಿಕೊಳ್ಳುವ ರಭಸದಲ್ಲಿರುವುದು, ಆ ರಭಸದಲ್ಲಿ ಪರಸ್ಪರ ಘನತೆ ಗೌರವಗಳಿಗೆ ಎರವಾಗುತ್ತಿರುವುದು, ಆ ಮೂಲಕವೇ ಈ ಸುಂದರಲೋಕವನ್ನು ವಿಕಾರಗೊಳಿಸುತ್ತಿರುವುದು ಮಾನವ ಬುದ್ಧಿಯ ಜುಜುಬಿತನವನ್ನು ತೋರಿಸುತ್ತದೆ. ಆಗ ಯಾವನಾದರೊಬ್ಬ ವಿಚಾರಪರನು ಮಧ್ಯೆ ಪ್ರವೇಶಿಸಿ-ಜನರನ್ನು ಬೋಧಿಸುವ ಎಚ್ಚರಿಸುವ ಶಿಕ್ಷಿಸುವ ನಿಷ್ಠುರ ಜವಾಬ್ದಾರಿಯನ್ನು ಹೊರಲು ಮುಂದಾಗುತ್ತಾನೆ. ಆ ಮಾನವ ಚೇತನವನ್ನೇ ಅವತಾರವೆನ್ನುವರು. ಈ ಅರ್ಥದಲ್ಲಲ್ಲದೆ ಇತರಾವತಾರದ ಭ್ರಾಂತಿಯವರಲ್ಲ ಬಸವಣ್ಣನವರು. ಅವರು ವಿಚಾರದ ಮತ್ತು ಕ್ರಾಂತಿಯ ಅವತಾರ. ಎಲ್ಲ ಕ್ರಾಂತಿಗೂ ಮೊದಲ ಜಿಗಿಮಣೆ ತಮ್ಮ ಎದೆಯಾಗಲೆಂದು ಅದನ್ನು ಒಡ್ಡಿಕೊಂಡವರು ಮಹಾತ್ಮ ಬಸವಣ್ಣನವರು.
ಆದುದರಿಂದ ಅವರು ಕಂಡುದು ಏನಾಗಲಿ ಯಾವನದಾಗಲಿ ಅದೆಲ್ಲವೂ ನನ್ನದೇ ನನಗಾಗಬೇಕೆಂದು ಕಾಂಕ್ಷಿಸೆನೆಂಬ, ಆ ಮೂಲಕ ಯಾರನ್ನೂ ದುಃಖಕ್ಕೆ ಒಳಗುಮಾಡೆನೆಂಬ, ಆ ಮಾತಿಗೆ ಬದ್ಧವಾಗಿ ಸತತವೂ ಶ್ರಮಿಸುವೆನೆಂಬ ಮೂರು ಹಂತದ ಒಂದು ಸೂತ್ರವನ್ನು ತಮಗೂ ಅನ್ವಯಿಸಿಕೊಂಡು –ಎಲ್ಲರಿಗೂ ವಿಧಾಯಕ ಮಾಡುತ್ತಿರುವರು ಬಸವಣ್ಣನವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು