•  
  •  
  •  
  •  
Index   ವಚನ - 758    Search  
 
ಮಾಹೇಶ್ವರನ ಶರಣಸ್ಥಲ - ನಡೆ-ನುಡಿ
ಆಪ್ಯಾಯನಕ್ಕೆ ನೀಡುವೆ, ಲಾಂಛನಕ್ಕೆ ಶರಣೆಂಬೆ: ಲಾಂಛನಕ್ಕೆ ತಕ್ಕ ಆಚರಣೆ ಇಲ್ಲದಿದ್ದರೆ ಕೂಡಲಸಂಗಮದೇವಾ, ನೀ ಸಾಕ್ಷಿಯಾಗಿ ಚಿಃ ಎಂಬೆ!
Transliteration Āpyāyanakke nīḍuve, lān̄chanakke śaraṇembe: Lān̄chanakke takka ācaraṇe illadiddare kūḍalasaṅgamadēvā, nī sākṣiyāgi chī embe!
Manuscript
English Translation 2 I offer food and bow To those who were the garb: But when I witness deeds That do not fit the garb, I say - You witness it, Kūḍala saṅgama Lord- - ‘Fie! Fie ! ‘ Translated by: L M A Menezes, S M Angadi
Hindi Translation आप्यायनार्थ अन्न देता हूँ, लाँछन को प्रणाम करता हूँ । लाँछन के योग्य आचरण न हो, तो कूडलसंगमदेव तुम साक्षी हो मैं “छी” कहूँगा ॥ Translated by: Banakara K Gowdappa
Tamil Translation மகிழ்ச்சிக்காக அளிப்பேன், திருச்சின்னம் தரித்தோனுக்குத் தஞ்சம் என்பேன் திருச்சின்னமணிந்தோனுக்குத் தக்க நடை இல்லைஎனின் கூடல சங்கமதேவனே உம் சாட்சியாக, “சீ” என்பேன். Translated by: Smt. Kalyani Venkataraman, Chennai
Marathi Translation दुखियांना वाढीन चिन्हांसि वंदीन त्यापरी आचरण, कळो योता आचार न दिसता, वेषधारीयांचा धिःक्कार तयांचा, करीन मी कूडलसंगमदेवा! साक्षिते तुझिया छी: म्हणेन तया कृतीहीना अर्थ : या वचनात महात्मा बसवेश्वर आचार महतीच श्रेष्ठ ठरवितात. ते म्हणतात. मी दुःखियांनाच वाढीन. इष्टलिंग धारियासच मी शरण म्हणेन आणि तसेच लिंगतत्वानुसार वर्तन नसेल तर हे कूडलसंगमदेवा! तुझ्या साक्षिने मी त्यांना छी म्हणेन. इत्यर्थ असा की, इष्टलिंग हे बिंदूत सिंधू प्रमाणे एक चिन्हच होय. महात्मा बसवेश्वरांनुमते केवळ चिन्ह स्विकारल्याने शरणत्व येत नसते. यास्तव ते म्हणतात. चिन्हांची यथार्थ जाणीव करून न घेता धारण केलेले इष्टलिंग लांछनास्पदच होय. जाणीव पूर्वक केलेली क्रियाच इष्ट होय. यास्तव महात्मा बसवेश्वर कूडलसंगमदेवास साक्ष ठेवून मी दुःखितांना वाढीन म्हणजे परमेश्वर प्राप्तीची भूक असणाऱ्यांनाच तृप्त करीन असे स्पष्ट म्हटले आहे छी या शब्दाद्वारे दांभिक चिन्ह धरियांची निर्भत्सना केली आहे. वचनवाङमयाचा व लिंगतत्वांचा नीट मनःपूर्वक अभ्यास न केल्यामुळे सदविचार वा सदाचार घडत नसतो. आचारहीन चिन्हधारीयांची त्यांना किळस येते. मनाचे चांचल्य व बुद्धीतील तर्क परते सारुन शुद्ध मन-बुद्धी देहासकट प्रभूची प्रसन्नता क्वचितच प्राप्त होते. लिंगतत्व जाणल्याशिवाय शरणसेवा कशी संभवेल. शिवशरणांचा शिवयोग साधनेमुळे व सदाचारामुळे त्यांनी धारण केलेल्या इष्टलिंगास व्यापक स्वरूप येते. इष्टलिंग हे केवळ दर्शनी चिन्ह न उरता इहलोकीचे परमोच्च शिखर ठरते. Translated by Rajendra Jirobe, Published by V B Patil, Hirabaug, Chembur, Mumbai, 1983 इष्टलिंगाला अर्पितो, इष्टलिंगाला वंदन करतो. इष्टलिंगाला अनुरुप आचरण नसेल तर कूडलसंगमदेवा, तुमच्या साक्षीने धिक्कार करतो. Translated by Shalini Sreeshaila Doddamani
Urdu Translation میںاپنی شادمانی کےلیےخیرات کرتا ہوں لباسِِ پاک ہوجوروبروتوسرجھکاتا ہوں نہ ہوں اعمال لیکن جب لباس ِپاک کی مانند مذمّت ہوگی میری کوڈلا سنگم کی جانب سے Translated by: Hameed Almas
ಕನ್ನಡ ವ್ಯಾಖ್ಯಾನ ಕ್ರಾಂತಿಗೆ ಅನುಗುಣವಾಗಿ ತಾನೂ ಸಿದ್ಧನಾಗುವುದು ಮೊದಲ ಮಾತಾದರೆ–ಮುಂದಿನ ಮಾತು–ಆ ಕ್ರಾಂತಿಯಲ್ಲಿ ಪಾಲ್ಗೊಂಡ ಅನುಯಾಯಿಗಳೆಲ್ಲರೂ-ನಂಬಿಸುವ ನಟುವರಾಗದೆ -ನಿಜಾಯತಿಯ ಸಹೃದಯರಾಗಿರಬೇಕೆಂದು ಬಸವಣ್ಣನವರ ನಿಷ್ಠುರ ನಿರೀಕ್ಷೆ. ಅನುಯಾಯಿಗಳ ಅವಶ್ಯಕತೆಗಳೆನಿದ್ದರೂ ಅವನ್ನು ಮರ್ಯಾದೆಯಿಂದಲೇ ಪೂರೈಸುವ ಹೊಣೆಹೊತ್ತ ಬಸವಣ್ಣನವರಿಗೆ ಶರಣರು ಸ್ವತಃ ಹೊಣೆಗೇಡಿಗಳಾದರೆ ಕಿಂಚಿತ್ತೂ ಸಹಿಸುತ್ತಿರಲಿಲ್ಲ. ಮತ್ತು ಅವರು ವೇಷಧಾರಿಗಳಾದ ಭಕ್ತರಿಗೋ ಶರಣರಿಗೋ ಜಂಗಮರಿಗೋ -ಸಮಾಜಹಿತವನ್ನು ಒತ್ತೆಯಿಟ್ಟು –ಅಡ್ಡಬೀಳುವುದು ಭಕ್ತಿಯೆಂದು ತಿಳಿದಿರಲಿಲ್ಲ. ದೊಡ್ಡದೊಂದನ್ನು ಸಾಧಿಸಲು ದೊಡ್ಡ ಗುಣಗಳ ದೊಡ್ಡ ಪಡೆಯನ್ನು ಕಟ್ಟಿ ಅದರ ನೇತಾರರಾಗಿದ್ದ ಬಸವಣ್ಣನವರ ಜವಾಬ್ದಾರಿಗಳು ಪುಸಕಲು ಭಕ್ತಿಸೂತ್ರಗಳಿಂದ ನಿರ್ವಾಹವಾಗಬಲ್ಲುವೇನು ? ಯದ್ಯದಾಚರತಿ ಶ್ರೇಷ್ಠಃ ತ್ತತ್ತದೇವೇತರೋ ಜನಃ ಸಯತ್ ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ (ಭಗವದ್ಗೀತೆ 3-21) ಶ್ರೇಷ್ಠರಾದವರು ಮಾಡಿದ್ದನ್ನೇ ಇತರರೂ ಅನುಕರಿಸಿ ಮಾಡುತ್ತಾರೆ. ಅವರು ಯಾವುದನ್ನು ಆದರ್ಶವೆನ್ನುತ್ತಾರೋ ಅದನ್ನೇ ಆ ಜನಸಾಮಾನ್ಯರೂ ಆದರ್ಶವೆಂದು ಅನುಸರಿಸುತ್ತಾರೆ. ಸಮಾಜದಲ್ಲಿ ಪ್ರತಿಷ್ಠಿತರಾದವರ ಮತ್ತು ಶಿಷ್ಟರ ನಡೆವಳಿಯ ಬಗ್ಗೆ ಬಸವಣ್ಣನವರಿಗೆ ಕಾತರವಿದ್ದುದು ಈ ಕಾರಣಕ್ಕಾಗಿಯೇ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು