•  
  •  
  •  
  •  
Index   ವಚನ - 759    Search  
 
ಮಾಹೇಶ್ವರನ ಶರಣಸ್ಥಲ - ಪ್ರಸಾದ
ಮಾಡುವ ನೀಡುವ ಭಕ್ತನ ಕಂಡರೆ ನಿಧಿ ನಿಧಾನವ ಕಂಡಂತಾಯಿತ್ತು, ಪಾದೋದಕ-ಪ್ರಸಾದಜೀವಿಯ ಕಂಡರೆ ಹೋದ ಪ್ರಾಣ ಬಂದಂತಾಯಿತ್ತು. ಅನ್ಯರ ಮನೆಗೆ ಹೋಗಿ, ತನ್ನುದರವ ಹೊರೆಯದ ಅಚ್ಚ ಶರಣರ ಕಂಡರೆ ನಿಶ್ಚಯವಾಗಿ ಕೂಡಲಸಂಗಯ್ಯನೆಂಬೆನು.
Transliteration Māḍuva bhaktana kaṇḍare nidhi nidhānava kaṇḍantāyittu, pādōdaka-prasādajīviya kaṇḍare hōda prāṇa bandantāyittu. An'yara manege hōgi, tannudarava horeyada acca śaraṇara kaṇḍare niścayavāgi kūḍalasaṅgayyanembenu.
Manuscript
English Translation 2 Whenever I see a devotee Rendering service and serivng food, It is as if I saw A hidden hoard. Whenever I see one living of Prasāda and Pādōdaka , It is as if Departed breath had come again. Whenever I see a perfect Śaraṇa Not visiting other's houses to keep himself I call him Lord Kūḍala Saṅgama,forsooth! Translated by: L M A Menezes, S M Angadi
Hindi Translation करने और देनेवाले भक्तों को देखने पर निधि-निधान देखने के समान होता है। पादोदक-प्रसाद जीवी को देखने पर मृत प्राणों के लौटने के समान होते है। औरों के द्वार जाकर अपना उदर पोषण नहीं करनेवाले सच्चे शरणों को देखने पर निश्चय ही उन्हें कूडलसंगमदेव कहता हूँ॥ Translated by: Banakara K Gowdappa
Telugu Translation పెట్టి పోషించు భక్తునిగన నిధి నిధానము చూచినట్ల గునయ్యా, పాదోదక ప్రసాదము చూచిన పోయిన ప్రాణము వచ్చినట్ల గునయ్యా: పర గృహమున కేగి తన పొట్టనింపు కొనని శరణుని జూచిన అచ్చము నా సంగడే యని పల్కెదనయ్యా Translated by: Dr. Badala Ramaiah
Tamil Translation செய்யும், ஈயும் பக்தனைக்காணின் செல்வப்புதையலைக் கண்டதனையதாயிற்று ஜங்கமருக்கு உணவீந்து பிரசாதமாக உண்பவனைக் காணின் அகன்ற உயிர் வந்ததனையதாயிற்று பிறர் மனைக்குச் சென்று, தன் வயிற்றை வளர்க்காத உண்மையான அடியாரைக் காணின் உறுதியாக கூடல சங்கமதேவன் என்பேன் Translated by: Smt. Kalyani Venkataraman, Chennai
Marathi Translation अर्पण करणाऱ्या भक्ताला पाहता, गुप्तधन पाहिल्यासम पादोदक, प्रसाद जीवीला पाहता गेलेले प्राण परत आल्याप्रमाणे होते. दुसऱ्यांच्या घरी जाऊन आपले पोट न भरणाऱ्या सत्य शरणाला पाहता खरोखर कूडलसंगमदेवाचे दर्शन वाटते. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಯಾವನು ತನ್ನ ಐಶ್ವರ್ಯವನ್ನು ಭಕ್ತರ ಕಷ್ಟಕಾರ್ಪಣ್ಯದ ನಿವಾರಣೆಗಾಗಿ ವೆಚ್ಚಮಾಡುವನೋ ಅವನು ಸಮಾಜದ ಒಂದು ಜೀವಂತನಿಧಿ. ನೆಲದಲ್ಲಿ ಬಚ್ಚಿಟ್ಟ, ಸರ್ಪಕಾವಲಿರುವ, ಅಗಿಸಿಕೊಳ್ಳುವ ರಕ್ತಕಕ್ಕಿಸಿಕೊಳ್ಳುವ, ಬಲಿಕೇಳುವ ನಿಷಿದ್ಧ ನಿಧಿಯಲ್ಲವದು. ನೆಲದ ಮೇಲೆಯೇ ಪ್ರಕಟವಾಗಿರುವ, ಬಂದವರಿಗೆಲ್ಲ ಭಾಗ್ಯವಾಗುವ, ಇಲ್ಲದವರಿಗೆಲ್ಲ ಸಲ್ಲುವ (ದಾಸೋಹಿ ಎಂಬ) ಈ ಜೀವಂತನಿಧಿ -ಸ್ವಯಂ ದಾನಶೀಲವುಳ್ಳುದು. ಅದನ್ನು ಕಾಣುವುದೇ ಒಂದು ಪುಣ್ಯವಿಶೇಷ. ಹಸಿದು ಮನೆಗೆ ಬಂದವರಿಗೆ ನೀಡಿ ಉಪಚರಿಸಿ-ಉಳಿದುದೇ ತನಗೆ ಪ್ರಸಾದವೆಂದು ಪ್ರಸನ್ನ ಚಿತ್ತವಾಗಿರುವ ಆ ಚೇತನವನ್ನು ಕಂಡರೆ –ಎಂಥ ಹತಾಶನೂ ಆತ್ಮಹಂತಕನೂ -ಬದುಕಿಗೊಂದು ಘನತೆಯಿದೆಯೆಂದು ಅರಿತುಕೊಂಡು –ದಾನಶೀಲವಾದೊಂದು ಬದುಕನ್ನು ಬದುಕಬೇಕೆಂದು ಉತ್ತೇಜಿತನಾಗುತ್ತಾನೆ. ಹೀಗೆ ಇದ್ದುದನ್ನು ಹಂಚಿತಿನ್ನುವ, ಅದೇ ಪ್ರಸಾದವೆನ್ನುವ, ಯಾರ ಹಂಗಿನಲ್ಲೂ ಬದುಕೆನೆನ್ನುವ ಜೀವ-ಭೂಮಿಯ ಮೇಲೆ ತಿರುಗಾಡುವ ಶಿವಸ್ವರೂಪ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು

C-401 

  Wed 29 Nov 2023  

 ಕನ್ನಡ ಭಾಷೆ





Pm
  Manoj
???????