•  
  •  
  •  
  •  
Index   ವಚನ - 760    Search  
 
ಮಾಹೇಶ್ವರನ ಶರಣಸ್ಥಲ - ಅಹಂಕಾರ
ಗುರುಭಕ್ತಿಯ ಮಾಡಬಹುದಲ್ಲದೆ, ಲಿಂಗಭಕ್ತಿಯ ಮಾಡಬಾರದು. ಲಿಂಗಭಕ್ತಿಯ ಮಾಡಬಹುದಲ್ಲದೆ, ಜಂಗಮಭಕ್ತಿಯ ಮಾಡಬಾರದು. ಜಂಗಮಭಕ್ತಿಯ ಮಾಡಬಹುದಲ್ಲದೆ, ಸಮಯಭಕ್ತಿಯ ಮಾಡಬಾರದು. ಸಮಯಭಕ್ತಿಯ ಮಾಡಬಹುದಲ್ಲದೆ, ಸಮಯ ಸಂತೋಷವ ಮಾಡಬಾರದು. ಇವೆಲ್ಲವ ಮಾಡಬಹುದಲ್ಲದೆ ತನ್ನ ತಾನರಿಯಬಾರದು ! ತನ್ನ ತಾನರಿದೆನೆಂಬ ಅಹಂಕಾರವುಳ್ಳರೆ ನಿಮ್ಮವರಿಗೆ ದೂರ, ಎಲೆ ದೇವಾ. ಅನ್ಯಕ್ಕೆ ಆಸೆ ಮಾಡಿದೆನಾದರೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ! ಕೂಡಲಸಂಗಮದೇವಾ.
Transliteration Gurubhaktiya māḍabahudallade, liṅgabhaktiya māḍabāradu. Liṅgabhaktiya māḍabahudallade, jaṅgamabhaktiya māḍabāradu. Jaṅgamabhaktiya māḍabahudallade, samayabhaktiya māḍabāradu. Samayabhaktiya māḍabahudallade, samaya santōṣava māḍabāradu. Ivellava māḍabahudallade tanna tānariyabāradu! Tanna tānaridenemba ahaṅkāravuḷḷare nim'mavarige dūra, ele dēvā. An'yakke āse māḍidare, nim'māṇe, nim'ma pramatharāṇe! Kūḍalasaṅgamadēvā.
Manuscript
English Translation 2 One can love Guru, but not Liṅga ; One can love Liṅga, but not Jaṅgama; One can love Jaṅgama, but not the Brotherhood; One can love the Brotherhood, but not please it; One can do all these things, and yet Not know oneself; but should there be The proud sense that one know onself, O God, Thou art withdrawn from them. O Kūḍala Saṅgama Lord, Thy curse on me, Thy Pioneers' curse, Should I desire aught else! Translated by: L M A Menezes, S M Angadi
Hindi Translation गुरुभक्ति कर सकते हैं न कि लिंग-भक्ति, लिंग-भक्ति कर सकते हैं न कि जंगम-भक्ति, जंगम-भक्ति कर सकते हैं न कि धर्म-भक्ति, समय-भक्ति कर सकते हैं न कि समय-संतुष्टि ये सब कर सकते हैं न कि निज को जान सकते हैं । निज को जान लिया-यह अहंकार हो, तो तव जनों से मैं दूर होऊँगा। हे देव, मैं अन्य की आशा करूँ, तो तव सौगंध है, तव प्रमथों की सौगंध कूडलसंगमदेव॥ Translated by: Banakara K Gowdappa
Telugu Translation గురు భక్తి సేయదగుగాని లింగ భక్తి సేయ కష్టము లింగ భక్తి నెఱపినా! జంగమ భక్తి సాధ్యముకాదు; జంగమ భక్తి సాధించినా సమయ భక్తి అలవడదు సమయ భక్తి అలవడినా సమయ సంతసము పొసగదు ఇవి యెల్ల చేయనేర్చినా తన్నుతా తెలియకాదు తన్నుతా తెలిసితి నన్న అహంకారమున్న నీ వారికి దూరమురా అన్యమాసింతునా ! నీయాన! నీ ప్రమథుల ఆన! సంగమ దేవా Translated by: Dr. Badala Ramaiah
Tamil Translation குருபக்தியை ஆற்றவியலுமே தவிர இலிங்கமபக்தியை ஆற்றவியலாது இலிங்கபக்தியை ஆற்றவியலுமோ தவிர ஜங்கம பக்தியை ஆற்றவியலாது ஜங்கம பக்தியை ஆற்றவியலுமே தவிர இறைபக்தியை ஆற்றவியலாது இறைபக்தியை ஆற்றவியலுமே தவிர மனித குலத்திற்கு அன்பை அளிக்கவியலாது இவ்வனைத்தையும் ஆற்றவியலுமே தவிர தன்னைத்தானே ஆறியவியலாது தன்னை உணர்ந்தேன் எனும் செருக்கு இருப்பின் உம்மவருக்குத் தொலைவு இறைவா மற்றதை விரும்பினேன் எனின் உம்மாணை, உம் கணங்களின் மீதாணை கூடல சங்கமதேவனே. Translated by: Smt. Kalyani Venkataraman, Chennai
Marathi Translation गुरुभक्ती करता येईल, लिंगभक्ती करता येत नाही. लिंगभक्ती करता येईल, जंगमभक्ती करता येत नाही. जंगमभक्ती करता येईल, समरसभक्ती करता येत नाही. समरस भक्ती करता येईल, साक्षात्कार करता येत नाही. हे सर्व करता येईल पण आपणास जाणून घेता येत नाही. आपणास जाणून घेतले असा अहंकार आला तर तुमच्यापासून दूर असे देवा. अन्यांची आशा केली तर तुमची शपथ, तुमच्या प्रमथांची शपथ कूडलसंगमदेवा Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಗುರುಲಿಂಗಜಂಗಮಭಕ್ತಿಗಿಂತ, ಇಡಿಯಾಗಿ ಎಲ್ಲ ಧರ್ಮಾಚರಣೆಗಿಂತ –ಕಷ್ಟಕರವಾದುದೆಂದರೆ ತನ್ನನ್ನು ತಾನರಿಯುವುದು. ತನ್ನನ್ನು ತಾನು ಅರಿಯುವುದೆಂದರೆ ದಾಸೋಹಂಭಾವಿಯಾಗಿರುವುದು. ಈ ದಾಸೋಹಂಭಾವವಿಲ್ಲದೆ ಮಾಡುವುದರಿಂದ –ಆದ ವೆಚ್ಚವೆಲ್ಲಾ ವ್ಯರ್ಥವಾಗಿ. ಸಮಾಜವೂ ವಿಘಟಿಸಿಹೋಗುತ್ತದೆಯೆನ್ನುತ್ತ ಬಸವಣ್ಣನವರು ವಿನಯಸಂಪನ್ನರಾಗಿಯೇ ಸೇವಾಮಾರ್ಗದಲ್ಲಿ ಬದುಕುವುದಾಗಿ ಪ್ರತಿಜ್ಞೆ ಮಾಡುತ್ತಿರುವರು. ವಿ : ಸಮಯಭಕ್ತಿ -ಸಮಯಸಂತೋಷ: ಒಂದು ಧರ್ಮವನ್ನು ಪ್ರೀತಿಸುವುದಕ್ಕೂ, ಒಂದು ಧರ್ಮಕ್ಕೆ ಸೇರಿದವರನ್ನೆಲ್ಲ ಪ್ರೀತಿಸುವುದಕ್ಕೂ –ಕನಸುನನಸಾಗಿರುವಷ್ಟು ದೂರವಿದೆ. ಒಂದು ಧರ್ಮವನ್ನು ಪ್ರೀತಿಸಬಹುದು-ಆದರೆ ಆ ಧರ್ಮಕ್ಕೆ ಸೇರಿದವರನ್ನೆಲ್ಲ ಒಂದೆಂದು ಪ್ರೀತಿಸುವುದು ದುರ್ಲಭ, ಈ ದುರ್ಲಭ ಅಖಂಡ ಮಾನವಪ್ರೇಮವೇ ಸಮಯಸಂತೋಷ –ಈ ಸಮಸಂತೋಷವಿಲ್ಲದ ಬರೀ ಬಳಿಯುವ ತೊಳೆಯುವ ಬೆಳಗುವ ಸ್ವಧರ್ಮಚಾಕರಿಯೇ ಸಮಯಭಕ್ತಿ. ಸಮಯಭಕ್ತಿಯೆಂದು ಗುರುಲಿಂಗಜಂಗಮವನ್ನು ತನ್ನ ಅಹಂಕಾರದ ವೈಭವಕ್ಕಾಗಿಯೇ ಪೂಜಿಸುವುದುಂಟು. ಆದರೆ ಆ ಪರಿಕ್ರಮದಿಂದ ಸಮಯಸಂತೋಷ ಪರಿಣಮಿಸುವುದಿಲ್ಲ. ಆಗ ದೀಕ್ಷೆಕೊಟ್ಟ ಗುರು, ಪೂಜಿಸಿಕೊಂಡ ಲಿಂಗ, ಉಂಡ ಜಂಗಮ – ಮೂರೂ ದಂಡ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು