ಮಾಹೇಶ್ವರನ ಶರಣಸ್ಥಲ - ಭಕ್ತಿ
ದಾಸನಂತೆ ತವನಿಧಿಯ ಬೇಡುವನಲ್ಲ;
ಚೋಳನಂತೆ ಹೊನ್ನಮಳೆಯ ಕರೆಸೆಂಬವನಲ್ಲ;
ಅಂಜದಿರು! ಅಂಜದಿರು! ಅವರಂದದವ ನಾನಲ್ಲ!
ಎನ್ನ ತಂದೆ, ಕೂಡಲಸಂಗಮದೇವಾ,
ಸದ್ ಭಕ್ತಿಯನೆ ಕರುಣಿಸೆನಗೆ.
Transliteration Dāsanante tavanidhiya bēḍuvanalla;
cōḷanante honnamaḷeya karesembavanalla;
an̄jadiru! An̄jadiru! Avarandadava nānalla!
Enna tande, kūḍalasaṅgamadēvā,
sad bhaktiyane karuṇisenage.
Manuscript
English Translation 2 I am not one to beg, like Dāsa,
For the treasure without end;
I am not one to ask, like Cōḷa ,
You should bring down a rain of gold;
Be not afraid! be not afraid!
I am not of their kind!
O Father, Kūḍala Saṅgama Lord,
Give me true devotion only.
Translated by: L M A Menezes, S M Angadi
Hindi Translation मैं दास समान अक्षय निधि-नहीं माँगता,
चोळ समान स्वर्ण-वृष्टि की चाह नहीं करता,
डरो मत, डरो मत मैं उनका जैसा नहीं हूँ ।
हे मेरे पिता कूडलसंगमदेव
मुझे सद्भक्ति प्रदान करो॥
Translated by: Banakara K Gowdappa
Telugu Translation దాసునివలె తవనిధి కోరనయ్యా!
చోళునివలె కనక వర్షము వేడనయ్యా,
వెఱవకు వెఱవకు వీరివలె నేగాను
అయ్యా: సంగయ్యా సద్భక్తినే ప్రసాదింపు మయ్యా!
Translated by: Dr. Badala Ramaiah
Tamil Translation தாசனனைய அழியா அருளை வேண்டுவோனல்ல
சோழனனைய பொன்மழையைப் பொழிவாய் என்போனல்ல
அஞ்சாய், அஞ்சாய் அவரனையவன் நானன்று
என் தந்தை கூடல சங்கமதேவனே.
உயர்ந்த பக்தியையே எனக்கருள்வாய்
Translated by: Smt. Kalyani Venkataraman, Chennai
Marathi Translation
दासय्याप्रमाणे अक्षयनिधी मागणारा नाही.
चोळाप्रमाणे सुवर्णवर्षा मागणारा नाही.
भिऊनको ! भिऊनका!
त्यांच्या सम मी नाही! मम पिता कूडलसंगमदेवा,
सद्भक्तीची मजवर कृपा करावी.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ದವಸ-ಧಾನ್ಯಕ್ಕಾಗಿ ಚಿನ್ನಬೆಳ್ಳಿಗಾಗಿ ದೇವರನ್ನು ಪೂಜಿಸುವುದೊಂದು ಮೌಢ್ಯ. ಈ ದವಸಧಾನ್ಯ ಮತ್ತು ಚಿನ್ನ ಬೆಳ್ಳಿ ಮುಂತಾದ ಎಲ್ಲ ಸೌಭಾಗ್ಯ ತುಂಬಿರುವ ಈ ಪ್ರಕೃತಿಯನ್ನೇ ದೇವರು ನಮಗಾಗಿ ನಮ್ಮ ತಳಗೆಮೇಲೆ ಹಿಂದೆಮುಂದೆ ಎಡಕ್ಕೆಬಲಕ್ಕೆ ವಿಸ್ತರಿಸಿಕೊಟ್ಟಿರುವನಲ್ಲಾ ! ಅದನ್ನು ವಿಂಗಡಿಸಿ ಬಳಸುವ ಪುರುಷಕಾರವನ್ನೂ ನಮ್ಮಲ್ಲಿ ತುಂಬಿ ಕಳಿಸಿರುವನಲ್ಲಾ ಆ ದೇವರು ! ಮತ್ತೇಕೆ ಅವನನ್ನು ಗೋಧಿ ಕೊಡು, ಕಬ್ಬು ಕೊಡು, ಹಾಲು ಕೊಡು, ಬಂಗಾರ ಕೊಡು ಎಂದು ಗೋಗರೆಯುವುದು ? ಅವನನ್ನು ಕುರಿತು ನಾವು ಕೇಳಿಕೊಳ್ಳಬೇಕಾದ್ದು –ಎಲೆ ಶಿವನೇ, ಈ ಎಲ್ಲ ಸಂಪತ್ತನ್ನೂ ಕಿತ್ತಾಡದೆ ಅನುಭವಿಸಲು ಬೇಕಾದ ವಿಶ್ವಪ್ರೇಮವನ್ನು ಕೊಡು –ಎಂದಷ್ಟೆ. ಆ ವಿಶ್ವಪ್ರೇಮವೇ ಸದ್ಭಕ್ತಿ.
ಒಂದು ಮತೀಯ ಪರಿಭಾಷೆಯಲ್ಲಿ ಹೇಳುವುದಾದರೆ -ಭಕ್ತನು ಆಚಾರಲಿಂಗವನ್ನು ಉಪಾಸಿಸುವ ಶ್ರದ್ಧಾನ್ವಿತ ಒಲವೇ ಸದ್ಭಕ್ತಿ ಎಂದು ಹೇಳಬಹುದು. ಇಲ್ಲಿ ಭಾಷೆ ಬೇರಾಯಿತೇ ಹೊರತು -ಭಾವ ಬದಲಾಗಲಿಲ್ಲ. ಆಚಾರಲಿಂಗವೆಂದರೆ -ಶರಣಧರ್ಮದಂಥ ವಿಶ್ವಧರ್ಮಕ್ಕೆ ಸಿದ್ಧವಾಗುವ ಸಾಧಕನ ಕ್ರಿಯಾಕಲಾಪಗಳು –ಅವುಗಳಿಂದ ಪಡೆಯುವ ಉತ್ತಮ ಭಾವಫಲಿತಾಂಶವೇ ವಿಶ್ವಪ್ರೇಮ. ಅದೇ ನಮ್ಮನ್ನು ಶರಣಧರ್ಮದೊಳಕ್ಕೆ ಬಿಟ್ಟುಕೊಳ್ಳುವ ಪರವಾನಗಿ.
ಮಗ್ಗದ ಕಾಯಕದ ಜೇಡರ ದಾಸಿಮಯ್ಯನಿಗೆ –ಆ ತನ್ನ ಕಾಯಕದಿಂದಲೇ ಅಂದಂದಿನ ಭತ್ಯ ಬರುತ್ತಿದ್ದಾಗ -ಭಕ್ತಿಗೆ ಮೆಚ್ಚಿಬಂದ ಶಿವನನ್ನು ತವನಿಧಿಯನ್ನು ಕೊಡೆಂದು ಕೇಳಬಾರದಾಗಿತ್ತು. ಮತ್ತು ಚೋಳನು ಸ್ವತಃ ರಾಜನಾಗಿ ಭೂಮಂಡಲದ ಹೊನ್ನಿಗೆಲ್ಲಾ ತಾನೇ ಒಡೆಯನಾಗಿದ್ದಾಗ -ಭಕ್ತಿಗೆ ಮೆಚ್ಚಿ ಬಂದ ಶಿವನನ್ನು ಹೊನ್ನಿನ ಮಳೆ ಕರೆಸೆಂದು ಕೇಳಬಾರದಾಗಿತ್ತು. ಇಂಥ ಭಕ್ತರನ್ನು ಕಂಡ ಶಿವನಿಗೆ ಭಕ್ತರೆಂದರೆ ಬೇಡುವವರೆಂಬ ಕಲ್ಪನೆ ಬಂದು –ಅವನೀಗ ತಮಗೆ ಪ್ರಸನ್ನನಾಗಲು ತಡಮಾಡುತ್ತಿರುವನೋ ಎಂಬ ಸಂಶಯ ಬಸವಣ್ಣನವರಿಗೆ. ಆದುದರಿಂದಲೇ ಅವರು –ತಮಗೆ ಭಕ್ತಿಯೊಂದನ್ನು ಬಿಟ್ಟು ಮತ್ತೇನೂ ಬೇಕಾಗಿಲ್ಲವೆಂದೂ, ಕಿರಿಕಿರಿಯಿಲ್ಲದೆ ದರ್ಶನ ಕೊಡಬೇಕೆಂದೂ -ಶಿವನಲ್ಲಿ ಬಸವಣ್ಣನವರು ಸರಸವಾಡುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು