ಮಾಹೇಶ್ವರನ ಐಕ್ಯಸ್ಥಲ - ಆತ್ಮಶುದ್ಧಿ
ಆಸೆ ರೋಷ ಹರುಷಾದಿಗಳೆಂಬ ಕರಣೇಂದ್ರಿಯವ ಮುಟ್ಟಲೀಯದೆ,
ಆಚಾರವ ಶಿವಾಚಾರವ ಮಾಡುವೆ;
ಭಯಭಕ್ತಿಯಿಂದ ತೋರುವೆ, ಮನದಲ್ಲಿ ವಂಚನೆಯಿಲ್ಲದೆ;
ಭಾವಶುದ್ಧ ಪೂಜೆಯ ಮಾಡುವೆ,
ಎನ್ನ ಪ್ರಾಣಶಕ್ತಿಯಿಂದ ಕೂಡಲಸಂಗಮದೇವರ.
Transliteration Āse rōṣa haruṣādigaḷemba karaṇēndriyava muṭṭalīyade,
ācārava śivācārava māḍuve;
bhayabhaktiyinda tōruve, manadalli van̄caneyillade;
bhāvaśud'dhapūjeya māḍuve,
enna prāṇaśaktiyinda kūḍalasaṅgamadēvara.
Manuscript
English Translation 2 I follow in the path divine,
Avoiding contact with the sensual lures-
Greed, anger, joy and all the rest;
Without deception in the mind, I show
Fear by the way of piety.
I do my worship with untainted heart,
And in the vigour of my life unite
With Lord Kūḍala Saṅgama.
Translated by: L M A Menezes, S M Angadi
Hindi Translation आशा, रोष, हर्ष नामक करणेंद्रियों से अलिप्त रहकर
आचार और शिवाचार करता हूँ,
मन से वंचना रहित हो भय भक्ति दिखाता हूँ ।
भावशुद्ध पूजा करता हूँ
निज प्राणशक्ति से कूडलसंगमदेव में ऐक्य हो जाता हूँ ॥
Translated by: Banakara K Gowdappa
Telugu Translation ఆళరోష హార్షము లను కరణేంద్రియముల ముట్టకుండ
ఆచారము శివాజారము సేతునయ్యా,
భయభక్తుల చూ పెద మది వంచనలేక
భావశుద్ధిని పూజించి ప్రాణశక్తి తో కూడెద సంగమదేవా!
Translated by: Dr. Badala Ramaiah
Tamil Translation ஆசை, சினம், மகிழ்ச்சி என்பவை புலன்களை
அணுகாது, அந்நெறியை சிவநெறியாகச் செய்வேன்
மனத்திலே வஞ்சனையின்றி பயபக்தியுடன்
இருத்தல் வேண்டும். தூய்மையான மனத்துடன்
பூசை புரிவேன், கூடல சங்கமதேவனை
என் பிராணசக்தியுடன் கூடுவேன்.
Translated by: Smt. Kalyani Venkataraman, Chennai
Marathi Translation
आशा, रोष, हर्ष, आदिना कर्णेद्रियापासून दूर ठेवावे.
आचार शिवाचार करीन, भयभक्तीने साधना करीन,
मनवंचनेविना भाव शुध्दीने पूजा करीन.
माझी प्राणशक्ती अर्पण करीन कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಈ ಜೀವನಸಮರದಲ್ಲಿ ಭಕ್ತನು –ತನಗಾಗಿ ಅಲ್ಲದೆ -ಶಿವನ ಕಿಂಕರನಾಗಿ ಹೋರುತ್ತಿರುವುದರಿಂದ ಅವನವೇ ಆದ ಆಶೆ-ರೋಷಗಳು ಅವನಿಗಿರುವುದಿಲ್ಲ. ಅವನಿಗೆ ಆಶೆಯಿದ್ದರೂ –ಅದು ಶಿವಸಾಮ್ರಾಜ್ಯವನ್ನು ಕಟ್ಟುವುದರಲ್ಲಿಯೇ ನಿಯೋಜಿತ, ರೋಷವಿದ್ದರೂ –ಅದು ಶಿವೇತರಕ್ಷತಿಗಾಗಿಯೇ ನಿಯೋಜಿತ, ಹರುಷವಿದ್ದರೂ –ಅದು ಶಿವಸಂಕಲ್ಪವೀಡೇರಿತಲ್ಲಾ ಎಂಬುದರಲ್ಲಿಯೇ ನಿಯೋಜಿತ. ಹೀಗೆ ಸಮರ್ಪಿತ ರಾಗಭಾವಗಳಿಂದ ಎಸಗಿದ ಭಕ್ತನ ಆಚರಣೆಗಳೆಲ್ಲವೂ ಶಿವಾಚಾರವಾಗುತ್ತವೆ.
ಇದರಂತೆಯೇ ಬಸವಣ್ಣನವರು ತಾವು ಕೈಗೊಂಡ ಕ್ರಿಯೆಗಳೆಲ್ಲವನ್ನೂ ಭಾವಶುದ್ಧಿಯಿಂದ ಮಾಡುವುದಲ್ಲದೆ –ಅದನ್ನು ಪ್ರಮಾಣೀಕರಿಸಿ ಶರಣರಿಗೆ ಮನವರಿಕೆ ಮಾಡಿಕೊಡುತ್ತೇನೆ –ಎನ್ನುತ್ತಿರುವರು.
ಅವರಿಗೆ ಮನಸ್ಸಿನಲ್ಲೊಂದು ಕೃತಿಯಲ್ಲೊಂದೆಂದು ಬಚ್ಚಿಡುವುದೇನೂ ಇರಲಿಲ್ಲ-ಶುದ್ದ ಹೃದಯದಿಂದ ಹೊರಹೊಮ್ಮಿದ ಶಾಖೋಪಶಾಖೆಗಳೇ ಆಗಿದ್ದವು ಅವರ ಹಸ್ತಪಾದ.
ದೀಪವಾರುವ ಮುನ್ನ –ಆ ದೀಪ ತನ್ನೆಲ್ಲ ಪ್ರಾಣಶಕ್ತಿಯಿಂದ ಪ್ರಜ್ವಲಿಸಿ ಉರಿಯುತ್ತದೆ. ಹಾಗೆ ಬಸವಣ್ಣನವರೂ ತಮ್ಮ ಪ್ರಾಣಶಕ್ತಿಯಿಂದ ಪ್ರಜ್ವಲಿಸಿ ಉರಿದು ನಿರ್ವಾಣವಾಗುತ್ತಾರೆ ಶಿವನಲ್ಲಿ. ಅಂಥವರೆಂದಿಗೂ ಬೂದಿಯಾಗಿ ಗುಡ್ಡೆ ಬಿದ್ದಿರುವುದಿಲ್ಲ ಮಷಾಣದಲ್ಲಿ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು