ಪ್ರಸಾದಿಯ ಜ್ಞಾನಿಸ್ಥಲ - ಪೂಜೆ
ಹಸಿವಾಯಿತ್ತೆಂದು ಅರ್ಪಿತವ ಮಾಡುವರಯ್ಯಾ:
ತೃಷೆಯಾಯಿತ್ತೆಂದು ಮಜ್ಜನಕ್ಕೆರೆವರಯ್ಯಾ:
ಹಸಿವು-ತೃಷೆ-ವಿಷಯಕ್ಕೆ ಬಳಲುವರಯ್ಯಾ!
ಹಸಿವೆಯಾಯಿತ್ತೆಂದು ಅರ್ಪಿತವ ಮಾಡಲಿಲ್ಲ;
ತೃಷೆಯಾಯಿತ್ತೆಂದು ಮಜ್ಜನಕ್ಕೆರೆಯಲಿಲ್ಲ:
ಇದು ಕಾರಣ, ಕೂಡಲಸಂಗನ ಪೂಜಿಸಿ,
ಪ್ರಸಾದವ ಹಡೆವರೊಬ್ಬರೂ ಇಲ್ಲ!
Transliteration Hasivāyittendu arpitava māḍuvarayya:
Tr̥ṣeyāyittendu majjanakkerevarayya:
Hasivu-tr̥ṣe-viṣayakke baḷaluvarayya!
Hasiveyāyitendu arpitava māḍalilla;
tr̥ṣeyāyittendu majjanakkereyalilla:
Idu kāraṇa, kūḍalasaṅgana pūjisi,
prasādava haḍevarobbarū illa!
Manuscript
English Translation 2 Being hungry, he makes an offering;
Being thirsty, pour water for the wash:
What pother this to gratify the sense-
For hunger and for thirst!
Not for your hunger's sake
They offered it, nor for your thirst
They poured the water for the wash.
Therefore, there be not even one
Who, worshipping Kūḍala Saṅgama, has
Obtained the grace.
Translated by: L M A Menezes, S M Angadi
Hindi Translation भूख लगने पर अर्पित करते हैं,
प्यास लगने पर मज्जन करते हैं
भूख, प्यास वासना से थकते हैं
किंतु तुम्हें भूख लगने पर अर्पित नहीं किया,
प्यास लगने पर मज्जन नहीं किया,
अतः ऐसा एक भी नहीं जिसने
कूडलसंगमदेव को पूजकर प्रसाद पाया हो ॥
Translated by: Banakara K Gowdappa
Telugu Translation ఆకలియని అర్పింతురు; దప్పియని స్నానము సేతురయ్యా!
ఆకలి దప్పుల విషయముల కాయాసపడుదురయ్యా!
ఆకలియని యర్పణ సేయక; దప్పియని త్రాగక
సంగని పూజించి ప్రసాదము పడయువాడొక్కడూ లేడు
Translated by: Dr. Badala Ramaiah
Tamil Translation பிரசாதித்தலம்
பிரசாதியின் ஞானித்தலம்
பசியாயிற்று என அர்ப்பிப்பர் ஐயனே
வேட்கையாயிற்று எனத் திருமஞ்சனம் செய்வர் ஐயனே
பசி, வேட்கை, புலனின்பமென சோர்வுறுவ ரையனே.
பசியாயிற்று என அர்ப்பிக்கவில்லை
வேட்கையாயிற்று எனத் திருமஞ்சனம் செய்யவில்லை
எனவே கூடல சங்கமதேவனைப் பூசித்து
பிரசாதம் கொள்வோர் எவரும் இல்லை ஐயனே.
Translated by: Smt. Kalyani Venkataraman, Chennai
Marathi Translation
लागे भूक पोटाला, अर्पिती तुजला
तैसेचि तहानेला, अभिषेक
क्षुधा तृष्णालागी, मना माजी वासना
करती लिंगार्चना, पोटार्थी ते
कूडलसंगमदेवा ! तुज तृप्त करूनि
मिळविले का कोणी, शेषप्रसाद ?
अर्थ - स्वतःचे पोट भरुन घेण्यासाठी, तहान भागविण्यासाठी हे देवा ! तुझी पूजा-अर्चा व नैवेद्य अर्पण करतात. आपली तहान भागविण्यासाठी तुला अभिषेक करतात. अशा दंभाचारी लोकांना काय म्हणावे? ते पोटार्थी खादाड व विषय वासनेचे भोक्ते होते. हे कूडलसंगमदेवा! (परमात्मा) निष्ठेने श्रम करुन त्यातून मिळविलेले धन-संपत्ती दासोहात अर्थात गुरु-लिंगजंगम याना समर्पण भावे अर्पण करणारे व खऱ्या अर्थाने तुला तृप्त करणारे व शेष प्रसाद सेवन करणारे माझे पितामह डोहर कक्कय्या व मातंग चन्नय्या शिवाय इतर कोणालाही मी पाहिले नाही.
Translated by Rajendra Jirobe, Published by V B Patil, Hirabaug, Chembur, Mumbai, 1983
भूक लागली म्हणून नैवेद्य दाखवितात देवा.
तहान लागली म्हणून मज्जन करतात देवा.
भूक तृष्णा विषयसुखा साठी तळमळतात देवा.
भूक लागली म्हणून नैवेद्य दाखविला नाही.
तहान लागली म्हणून अभिषेक केला नाही.
म्हणून कूडलसंगमदेवाची पूजा करुन
प्रसाद मिळविणारे कोणी नाही.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ದಿನನಿತ್ಯದ ಹಸಿವಾದಾಗ ಲಿಂಗದ ನೆನಪು –ಆಗ ಲಿಂಗಕ್ಕೆ ಪೂಜೆ, ಲಿಂಗಕ್ಕೆ ನೈವೇದ್ಯ! ವ್ರತನೇಮದ ದಿನಗಳಲ್ಲಿಯೂ ಬಾಯಾರಿಕೆಯಾದಾಗ ಮಾತ್ರ ಲಿಂಗದ ನೆನಪು-ಆಗ ಲಿಂಗಕ್ಕೆ ಅಭಿಷೇಕ! ಉಳಿದಂತೆ ಲಿಂಗದೇವನೆಲ್ಲೋ ಅವರೆಲ್ಲೋ!
ಹೀಗೆ ಒಡಲ ಹಸಿವೆಗಾಗಿ ತೃಷೆಗಾಗಿ ತೆವಲಿಗಾಗಿ ಮಾಡುವ ಕಾಟಾಚಾರದ ಲಿಂಗಾಭಿಷೇಕ ಮತ್ತು ಲಿಂಗಾರ್ಪಿತ ಲಿಂಗಕ್ಕೆ ಸಲ್ಲುವುದಿಲ್ಲ. ಈ ಕ್ರಮದಲ್ಲಿ ತಮ್ಮ ಹಸಿವು ಬಾಯಾರಿಕೆಗಾಗಿ ಕೋಟಲೆಗೊಂಡಂತಾಯಿತಲ್ಲದೆ -ನಿಜಲಿಂಗೋಪಾಸನೆಯಿಂದ ಪಡೆಯುವ ಪ್ರಸಾದಪ್ರಸನ್ನಾಂತಃಕರಣದ ದಿವ್ಯಾನುಭೂತಿಯ ಲಭ್ಯ ಅವರಿಗಿಲ್ಲ.
ದೇಹದ ಕೆಸರಲ್ಲಿ ಹೂತುಹೋಗಿರುವ ಜನದ ಇಂಥ ಶಿವೋಪಾಸನೆಯೆಲ್ಲ ವ್ಯರ್ಥಹವ್ಯಾಸ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು