ಪ್ರಸಾದಿಯ ಜ್ಞಾನಿಸ್ಥಲ - ಭಕ್ತ
ಮುತ್ತು ನೀರಲ್ಲಿ ಹುಟ್ಟಿ ಮತ್ತೆ ನೀರಪ್ಪುದೆ?
ಗುರುಕಾರುಣ್ಯವ ಹಡೆದ ಭಕ್ತನು ಹಿಂದಣ ಪೂರ್ವಾಶ್ರಯವ ಬೆರಸಿದರೆ,
ಗುರುದ್ರೋಹ, ಲಿಂಗದ್ರೋಹ, ಜಂಗಮದ್ರೋಹ,
ಆಚಾರದ್ರೋಹ, ಪ್ರಸಾದದ್ರೋಹ!
ಇಂತೀ ಪಂಚಮಹಾಪಾತಕಂಗಳು
ಭಕ್ತಂಗಲ್ಲದೆ ಭವಿಗೆಲ್ಲಿಯದೋ?
ಗುರುವಿದು, ಲಿಂಗವಿದು, ಜಂಗಮವಿದು,
ಆಚಾರವಿದು, ಪ್ರಸಾದವಿದೆಂದರಿಯದಿದ್ದರೆ
ಕುಂಭೀಪಾತಕ ನಾಯಕನರಕ!
ಕೂಡಲಸಂಗಮದೇವಾ.
Transliteration Muttu nīralli huṭṭi matte nīrappude?
Gurukāruṇyava haḍeda bhaktanu hindaṇa pūrvāśrayava berasidare,
gurudrōha, liṅgadrōha, jaṅgamadrōha,
ācāradrōha, prasādadrōha!
Intī pan̄camahāpātakaṅgaḷu
bhaktaṅgallade bhāvilliyadō?
Guruvidu, liṅgavidu, jaṅgamavidu,
ācāravidu, prasādavidendariyadiddare
kumbhīpātaka nāyakanaraka!
Kūḍalasaṅgamadēvā.
Manuscript
English Translation 2 Does a pearl born of water turn
To water agaiu?
Should a bhakta who has gained
The Guru's grace
Relapse to his former state,
It's treason against Guru Liṅga, ,Jaṅgama ,
Against discipline and grace!
These five great sins
Are for the devotees;
How can they be for worldlings too?
If one knows not
This is Guru, this Liṅga, this Jaṅgama
This discepline, this grace,
It's hell for him-
The lowest hell, arch-hell
O Kūḍala Saṅgama Lord!
Translated by: L M A Menezes, S M Angadi
Hindi Translation मोती जल से उत्पन्न होकर
फिर जल बनता है?
गुर-कारुण्य प्राप्त भक्त
गत पूर्वाश्रय में सम्मिलित हो,
तो वह गुरुद्रोह, लिंगद्रोह,
जंगमद्रोह,आचारद्रोह और प्रसाद द्रोह है।
ये पंचमहापातक भक्त के लिए न हों,
तो भवि के लिए कहाँ?
यह गुरू है, यह लिंग है, यह जंगम है,
यह आचार है,यह प्रसाद है आदि बातें
नहीं जानने पर कुंभीपाक नरक मिलेगा
कूडलसंगमदेव॥
Translated by: Banakara K Gowdappa
Telugu Translation నీట పుట్టిన ముత్యము మరలా నీరగునే?
గురు+N770లంజను మెచ్చి లంజ తట్టలో నెంగిలి తినులోకము
పొలసు మెచ్చి కుక్క యెంగిలితిను నీలోకము
లింగము మెచ్చి జంగమ ప్రసాదము గొనువారిని చూచి గేలిసేయు
కరుణ పొందు భక్తుడు మఱల పూర్వాశ్రమము చేరినచో
గురుద్రోహము; లింగద్రోహము; జంగమద్రోహము;
ఆచారద్రోహము ప్రసాద ద్రోహమిట్లీ పంచ మహాపాతకములు
భక్తునకుగాని భవికి లేదు; గురుడిది లింగమిది
జంగమ మిది ఆచారమిది ప్రసాదమిది యని తెలియకున్న
కుం;óపాత ఘోరనరకములు తప్పవురా కూడల సంగమదేవా!
Translated by: Dr. Badala Ramaiah
Tamil Translation முத்து நீரில் தோன்றி மீண்டும் நீராகுமோ?
குருவின் அருளைப்பெற்ற பக்தன், மீண்டும்
உலகியலை நாடின், அது குரு துரோகம்
இலிங்க துரோகம், ஜங்கம துரோகம்
ஆசார துரோகம், பிரசாத துரோகம்
இந்த ஐம்பெரும் பாவங்கள்
பக்தனுக்கன்றி, நெறியிலிக்கு உண்டோ?
இது குரு, இது இலிங்கம், இது ஜங்கமம்
இது ஆசாரம், இது பிரசாதம் என உணராது
இருப்பின் மிகக்கீழான நரகம் ஐயனே
கூடல சங்கம தேவனே.
Translated by: Smt. Kalyani Venkataraman, Chennai
Marathi Translation
मोती पाण्यापासून बनल्यावर पुन्हा तो पाणी होईल ?
गुरुकृपा मिळविलेला भक्त पूर्वाश्रयात राहिला तर
गुरुद्रोह, लिंगद्रोह, जंगमद्रोह, आचारद्रोह, प्रसादद्रोह!
ही पंचमहापातके भक्तासाठी आहेविना, ती भवीसाठी असती का?
गुरु हाच, लिंग हेच, जंगम हेच, आचार हेच प्रसाद असे जाणले नाही तर
कुंभीपाकी घोरनरक मिळेल कूडलसंगा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಭವಬದ್ಧಜೀವನು ಗುರುದೇವನ ಕೃಪೆಯಿಂದ ಭಕ್ತನಾಗಿ ರೂಪಗೊಳ್ಳುತ್ತಾನೆ, ಲಿಂಗವೃತ್ತವನ್ನೂ ಲಿಂಗಕಾಂತಿಯನ್ನೂ ಅಂಗೀಕರಿಸಿಕೊಳ್ಳುತ್ತಾನೆ, ತಿರುಗಾಡುವ ಶಿವನಂತಿರುವ ಜಂಗಮದ ಪಾದಾಭರಣನಾಗುತ್ತಾನೆ. ಅಲ್ಲಿಂದಾಚೆಗೆ ಅವನು ಕರ್ತವ್ಯಕ್ರಿಯೆಗಳಲ್ಲಿ ಮಗ್ನನಾಗಿಯೂ ಸ್ವಾತ್ಮಾನಂದದಲ್ಲಿ ನಿಮಗ್ನವಾಗುತ್ತಾನೆ.
ಅಧಃಪಾತವಾದ ಮಳೆಯ ಹನಿಯೊಂದು ಚಿಪ್ಪಿನ ಅಪ್ಪಿಗೊಳಗಾಗಿ ಘನವಾಗಿ ಮಿನುಗಾಗಿ ಮುತ್ತಿನ ಮಣಿಯಾಗುವುದು ಹೇಗೋ ಹಾಗೆ -ಭಕ್ತನು ಭವಿಯಾಗುತ್ತಾನೆ. ಆ ಮೇಲೆ ಆ ಮುತ್ತು ನೀರಿನ ಪೈಕಿಯಲ್ಲ, ಅದು ಮತ್ತೆ ನೀರಾಗುವುದಿಲ್ಲ. ಭವದ ಜಡತೆಯನ್ನು ನೀಗಿಕೊಂಡು ಅಭವನಾದ ಭಕ್ತನೂ ಮತ್ತೆ ಭವಿಯಾಗಬಾರದು. ಕಣ್ಣೀರಲ್ಲಿ ತೊಳೆದುಹೋಗುವ ಭವದ ಸುಣ್ಣದ ಬಣ್ಣದ ವಿವಿಧಾಕೃತಿಗೆ ಭಕ್ತನು ಆಕರ್ಷಿತವಾಗಬಾರದು.
ಭಕ್ತನಾದ ಮೇಲೆ ಅವನ ಪ್ರಯತ್ನ ಐದು ವಿಧ –ಅವುಗಳಲ್ಲಿ ವಿಫಲನಾದರೆ ಪಡೆಯುವ ಪಾತಕವೂ ಐದು ವಿಧ ; ಶಿಷ್ಯನ ಮೇಲೆ ಗುರುವಿಟ್ಟ ವಿಶ್ವಾಸ ವಿಘಟಿಸಬಾರದು –ವಿಘಟಿಸಿದರೆ ಗುರುದ್ರೋಹವಾಗುವುದು, ಅಂಗೈಗೆ ಬಂದ ಶಿವಲಿಂಗದ ಕೃಪಾವತರಣ ದೂಡಲ್ಪಡಬಾರದು –ದೂಡಲ್ಪಟ್ಟರೆ ಲಿಂಗದ್ರೋಹವಾಗುವುದು, ಶಿವಭಕ್ತಸಮೂಹಕ್ಕೆ ತನ್ನನ್ನು ಸ್ವಾಗತಿಸಿ ಗೌರವಿಸಿದ ಜಂಗಮದ ನಿರೀಕ್ಷೆ ನಿರರ್ಥವಾಗಬಾರದು -ನಿರರ್ಥವಾದರೆ ಜಂಗಮದ್ರೋಹವಾಗುವುದು, ಕಂಗೊಳಿಸಿದ ಆಚಾರವು ದೃಢತೆಯ ತಳಪಾಯ ಕುಸಿದು ಶಿಥಿಲವೆನಿಸಬಾರದು -ಶಿಥಿಲವೆನಿಸಿದರೆ ಆಚಾರದ್ರೋಹವಾಗುವುದು. ನಿಸ್ತರಂಗ ನಿರಾಳ ಹೃದಯಸರಸಿಯಲ್ಲಿ ನುಗ್ಗಿದ ಮದಗಜದಿಂದ ಕೆಸರೇಳಬಾರದು –ಕೆಸರೆದ್ದರೆ ಪ್ರಸಾದದ್ರೋಹವಾಗುವುದು. ಈ ಪಂಚಮಹಾದ್ರೋಹಗಳ ಪಂಚಮಹಾಪಾತಕಗಳ ಭಯವು ಭಕ್ತನಾದವನಿಗೇ ಹೊರತು ಭವಿಗೆಲ್ಲಿದೆ? ಆದ್ದರಿಂದ ಭಕ್ತನು ಗುರು-ಲಿಂಗ-ಜಂಗಮ-ಆಚಾರ-ಪ್ರಸಾದಗಳ ಗರಿಮೆಯನ್ನು ತಿಳಿದು –ಅತ್ಯುನ್ನತವಾದ ಶಿವ(ಶರಣ)ಧರ್ಮದಲ್ಲಿ ಶ್ರದ್ದೆಜಾರದೆ ಸಾಹಸಿಯಾಗಿ ನಡೆಯಬೇಕು.
ಸರ್ವಜೀವದಯಾಪಾರಿಯಾದ ಈ ಸರಳ ಶರಣಧರ್ಮದಲ್ಲಿ ನೀಸಲಾರದವನು ಪಾಪವನ್ನು ಎಡವಿ ನರಕದಲ್ಲಿ ಬೀಳುವನು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು