ಪ್ರಸಾದಿಯ ಜ್ಞಾನಿಸ್ಥಲ - ಲಿಂಗ-ಜಂಗಮ
ಸೂಳೆಗೆ ಮೆಚ್ಚಿ ಸೂಳೆಯ ಬಂಟರೆಂಜಲ ತಿಂಬುದೀ ಲೋಕ,
ಅಡಗ ಮೆಚ್ಚಿ ಸೊಣಗನೆಂಜಲ ತಿಂಬುದೀ ಲೋಕವೆಲ್ಲ!
ಲಿಂಗವ ಮೆಚ್ಚಿ ಜಂಗಮಪ್ರಸಾದವ ಕೊಂಬವರ
ನೋಡಿ ನಗುವವರ ಕುಂಭೀಪಾತಕ ನಾಯಕ ನರಕದಲ್ಲಿಕ್ಕುವ
ಕೂಡಲಸಂಗಮದೇವ.
Transliteration Sūḷege mecci sūḷeya baṇṭaren̄jala timbudī lōka,
aḍaga macci soṇaganen̄jala timbudī lōkavella!
Liṅgava mecci jaṅgamaprasādava kombavara
nōḍi naguvavara kumbhīpātaka nāyaka narakadallikkuva
kūḍalasaṅgamadēva.
Manuscript
English Translation 2 Loving a harlot, this world
Eats with a harlot's drudge;
In love with flesh, all worlds
Eat what is left by dogs.
Lord Kūḍala Saṅgama puts in the lowest hell
Those who will laugh at sight of them
Who, loving Liṅga , receive
Prasāda from a Jaṅgama !
Translated by: L M A Menezes, S M Angadi
Hindi Translation वेश्यानुरागी होकर वेश्या-दास का
जूठन खाता है यह लोक ।
मांस की आश से श्वान का
जूठन खाता है सारा लोक।
लिंगानुरागी होकर जंगम प्रसाद
पानेवालों को देखकर जो हँसते हैं
उन्हें कुंभीपाक नरक में
रखेंगे, कूडलसंगमदेव ॥
Translated by: Banakara K Gowdappa
Telugu Translation లంజను మెచ్చి లంజ తట్టలో నెంగిలి తినులోకము
పొలసు మెచ్చి కుక్క యెంగిలితిను నీలోకము
లింగము మెచ్చి జంగమ ప్రసాదము గొనువారిని చూచి గేలిసేయు
వారిని కుం;óపాతకమున దొక్కకమానునే సంగమదేవుడు
Translated by: Dr. Badala Ramaiah
Tamil Translation பரத்தயை நயந்து, அவள் ஊழியனின்
மிச்சிலை இவ்வுலகம் உண்ணும்
புலாலை நயந்து, நாயின் மிச்சிலை
இவ்வுலகம் உண்ணும், இலிங்கத்தை நயந்து
ஜங்கம பிரசாதத்தைக் கொள்வோரைக் கண்டு
நகைப்போரை கொடிய நரகத்தில் இடுவன்
கூடல சங்கம தேவன்.
Translated by: Smt. Kalyani Venkataraman, Chennai
Marathi Translation
वेश्येवर मोहीत होऊन, वेश्येच्या सेवकाचे उष्टे खातात लोक.
मांसावर मोहीत होऊन, कुत्र्याचे उष्टे खातात लोक.
लिंगावर मोहीत होऊन, जंगमप्रसाद घेणाऱ्यांना पाहून
हसणाऱ्यांना कुंभीपाकी घोर नरकात घालतात कूडलसंगमदेव.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಜನ ಸೂಳೆಯನ್ನು ಮೆಚ್ಚಿಸಲು ಆ ಸೂಳೆಯ ತಲೆಹಿಡುಕರ ಎಂಜಲನ್ನು ತಿಂದೂ ಅನುಸರಣೆ ಮಾಡುತ್ತಾರೆ. ಮಾಂಸವನ್ನು ಮೆಚ್ಚಿದವರು –ಅದು ನಾಯ ಎಂಜಲಾದರೂ ತಿನ್ನುತ್ತಾರೆ (ಬೇಟೆಯ ನಾಯಿ ಕಚ್ಚಿಹಿಡಿದ ಮೊಲ ಮುಂತಾದ ಪ್ರಾಣಿಗಳ ಮಾಂಸವನ್ನು ತಿನ್ನುವರೆಂಬುದು ಇಂಗಿತ). ಹೀಗೆ ಸೂಳೆಗಾರಿಕೆಯಲ್ಲಿ ಮಾಂಸಾಹಾರದಲ್ಲಿ ತೊಡಗಿರುವ ಜನ ಜಂಗಮಪ್ರಸಾದವನ್ನು ಸ್ವೀಕರಿಸುವ ಸದ್ಭಕ್ತರನ್ನು ಕಂಡು ಅಪಹಾಸ್ಯ ಮಾಡಿದರೆ ಬಸವಣ್ಣನವರಿಗೆ ಕೋಪಬರದೇನು?
ಸರ್ವಜ್ಞನು ತನ್ನದೊಂದು ತ್ರಿಪದಿಯಲ್ಲಿ-“ಕಾಳೆಯ ಮೊಗವು ಶುದ್ಧ| ಸೂಳೆಯ ತುಟಿ ಶುದ್ಧ” ಎಂದಿರುವನು –ಅಷ್ಟೇ ಅಲ್ಲ –“ಬೆಲೆವೆಣ್ಣಿನ ಬಾಯಿ ಹಲರೆಂಜಲೆನಬೇಡ”ವೆಂದೂ ಬುದ್ಧಿ ಹೇಳಿರುವನು (ಪರಮಾರ್ಥ-699, 701).
ಹೀಗೆ ಕಾಮುಕರ ಕೊಳಕರ ನಾಯಿನರಿಗಳ ಹೇಯವನ್ನು ಚಪ್ಪರಿಸುವ ಜನ-ಒಬ್ಬ ಶಿವಯೋಗಿ ತನ್ನ ತಟ್ಟೆಯಿಂದೆತ್ತಿ ಕೊಟ್ಟ ತುತ್ತನ್ನ ಪ್ರಸಾದವನ್ನು ಎಂಜಲೆಂದು ಅಪಹಾಸ್ಯಮಾಡಬಾರದು.
ಇಲ್ಲಿ ಗಮನಿಸಬೇಕಾದ ಒಂದು ಮುಖ್ಯವಾದ ಅಂಶವೆಂದರೆ-ಜಂಗಮವೆಂದರೆ ಒಬ್ಬ ಶಿವಯೋಗಿಯೇ ಹೊರತು -ಹಾದಿಬೀದಿಯ ಒಬ್ಬ ಸಂಸಾರೀ ಜಾತಿಜಂಗಮನಲ್ಲ.
ವಿ : ಪ್ರಸಾದವನ್ನು ಸ್ವೀಕರಿಸುವುದು ಎಲ್ಲ ಧರ್ಮದಲ್ಲಿಯೂ ಇದ್ದದ್ದೇ-ತಾಯಿ ಮಗುವಿಗೆ ತನ್ನ ಬಾಯ ತಂಬೂಲವನ್ನು ಕೊಡುವಂತೆ ಅದು ವಾತ್ಸಲ್ಯದ ಸಂಕೇತ ಕೂಡ. ಹಿಂದಿನ ಕಾಲದಲ್ಲಿ ಲೌಕಿಕಕ್ಕಾಗಿಯೂ ಪ್ರಸಾದ ಸಂಪ್ರದಾಯವಿತ್ತು, ಅಂದು ವೀರಯೋಧರು ತಮ್ಮ ರಾಜನ ಬಾಯ ತಂಬುಲವನ್ನು ಹಸಾದ (<ಪ್ರಸಾದ)ವೆಂದು ತಿನ್ನುತ್ತಿದ್ದರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು