•  
  •  
  •  
  •  
Index   ವಚನ - 770    Search  
 
ಪ್ರಸಾದಿಯ ಜ್ಞಾನಿಸ್ಥಲ - ಲಿಂಗ-ಜಂಗಮ
ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ? ಕುಲವುಂಟೆ ಜಂಗಮವಿದ್ದೆಡೆಯಲ್ಲಿ? ಎಂಜಲುಂಟೆ ಪ್ರಸಾದವಿದ್ದೆಡೆಯಲ್ಲಿ? ಅಪವಿತ್ರದ ನುಡಿಯ ನುಡಿವ ಸೂತಕವೇ ಪಾತಕ! ನಿಷ್ಕಳ ನಿಜೈಕ್ಯ, ತ್ರಿವಿಧನಿರ್ಣಯ, ಕೂಡಲಸಂಗಮದೇವಾ, ನಿಮ್ಮ ಶರಣರಿಗಲ್ಲದಿಲ್ಲಾ.
Transliteration Holeyuṇṭe liṅgaviddeḍeyalli? Kulavuṇṭe jaṅgamaviddeḍeyalli? En̄jaluṇṭe prasādaviddeḍeyalli? Apavitrada nuḍiya nuḍiva sūtakavē pātaka! Niṣkaḷa nijaikya, trividhanirṇaya, kūḍalasaṅgamadēvā, nim'ma śaraṇarigalladillā.
Manuscript
English Translation 2 Can there be filth where Liṅga is? Can there be caste where Jaṅgama is? Can there be offal where Prasāda is? The impurity of speaking unholy words Is sin! The Formless, the united with Reality, The triple consummation, O Lord Kūḍala Saṅgama, Is only for Thy Śaraṇās ! Translated by: L M A Menezes, S M Angadi
Hindi Translation लिंग के यहाँ मालिन्य हो सकता है? जंगम के यहाँ जाति हो सकती है? प्रसाद के यहाँ झूठन हो सकता है? अपवित्र बातें बोलने का सूतक ही पातक है। तव शरणों के सिवा दूसरों के लिए निष्कलंक निजैक्यता, त्रिविध निर्णय नहीं हैं कूडलसंगमदेव॥ Translated by: Banakara K Gowdappa
Telugu Translation మైలకలదే లింగమున్న చోట; కులమున్నదే జంగమమున్న చోట? అపవిత్రముపలుకు పలుకు సూతకమే పాతకము; నిష్కళ ని జైక్యత్రివిధ నిర్ణయము నీ శరణులు గాని వారికి లేదురా కూడల సంగమదేవా! Translated by: Dr. Badala Ramaiah
Tamil Translation இலிங்கம் உள்ள இடத்தில் அழுக்கு உண்டோ? ஜங்கமர் உள்ள இடத்தில் குலம் உண்டோ? பிரசாதம் உள்ள இடத்தில் மிச்சில் உண்டோ? புனிதமற்ற சொல்லைக் கூறும் தீட்டுதான் பாவம் களங்கமற்ற ஞானம், நியமம், அனுபவம் எனும் மூவித நிர்ணயம் சரணனுக்கின்றி மற்றோருக்கு இல்லையன்றோ. Translated by: Smt. Kalyani Venkataraman, Chennai
Marathi Translation जेथे लिंग आहे तेथे अस्पश्यता असेल का? कुळ असेल जंगमा ठायी? उष्टे असेल प्रसादा ठायी? अपवित्र वाणीचे शब्दसुतक पातक आहे. निष्कलंक निजैक्य, निरुपम हे त्रिविध निर्णय कूडलसंगमदेवा, तुमच्या शरणाविना कोणास नाही. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಲಿಂಗವೆಲ್ಲಿರಲಿ ಅಲ್ಲಿ ಹೊಲೆಯಿಲ್ಲ -ಲಿಂಗವಿದ್ದೆಡೆ ಹೊಲೆಗೇರಿಯಾದರೇನು ಅದು ಹೊಲೆಗೇರಿಯಲ್ಲ -ಶಿವಪುರ. ಮತ್ತು ಲಿಂಗಧಾರಿಯು ಹೊಲೆಯನಾದರೇನು ಅವನು ಹೊಲೆಯನಲ್ಲ -ಶಿವಭಕ್ತ. ಯಾವ ಜಾತಿಯವನಾಗಿರಲಿ ಜಂಗಮ(ಶಿವಯೋಗಿ ಶ್ರೇಷ್ಠ)ನು ಪೂಜ್ಯನು –ಕೇವಲ ಜಾತಿಯಿಂದ ಜಂಗಮನೆನಿಸಿದವನಲ್ಲ. (ನೀಡಿ) ಪಡೆದ ಪ್ರಸಾದವೆಂದಿಗೂ ಎಂಜಲಲ್ಲ –ಗುರುವಿಗಾಗಲಿ ಲಿಂಗಕ್ಕಾಗಲಿ ಜಂಗಮಕ್ಕಾಗಲಿ ಅರ್ಪಿಸದೆ ಹೊಟ್ಟೆಯ ಪಾಡಿಗೆ ಉಂಡುದು ಮಾತ್ರ ಹಲವೆಂಜಲು. ಲಿಂಗವಿದ್ದೆಡೆ ಹೊಲೆಯೆಂದರೆ, ಜಂಗಮನ ಜಾತಿ ಅದು ಇದು ಎಂದರೆ, ಪ್ರಸಾದ ಎಂಜಲೆಂದರೆ –ಈ ಮೂರು ಮಾತಿಗಿಂತ ಹೊಲಸು ಮಾತು ಇನ್ನೊಂದಿಲ್ಲ. ಹೀಗೆ ಲಿಂಗ ಜಂಗಮ ಪ್ರಸಾದಗಳನ್ನು ಕುರಿತಂತೆ ನಿರ್ದುಷ್ಟವೂ ನೈಜವೂ ಆದ ಮೂರು ನಿರ್ಣಯಗಳು ಯಾವನಿಗೆ ಅಳವಟ್ಟಿವೆಯೋ ಅವನೇ ಶಿವಶರಣನು. ಕುಲವುಂಟೇ ಜಂಗಮವಿದ್ದೆಡೆಯಲ್ಲಿ ಎಂದು ಪ್ರಶ್ನಿಸುವ ಬಸವಣ್ಣನವರ ಪ್ರಕಾರ ಈ ಮುಂದಿನ ತೀರ್ಮಾನಗಳಿಗೆ ನಾವು ಬರಬಹುದು : (1) ಜಂಗಮ ಎನ್ನುವುದು ಒಂದು ಜಾತಿಯಲ್ಲ, (2) ಜಾತಿಯಿಂದ ಜಂಗಮರೆನಿಸಿಕೊಂಡವರು ಬಸವಣ್ಣನವರ ಚಳುವಳಿಗೆ ಸೇರಿದವರಲ್ಲ (3) ಯಾವನಾಗಲಿ ಭಕ್ತಿಜ್ಞಾನ ವೈರಾಗ್ಯಗಳು ತ್ರಿವೇಣಿಯಾಗಿ ಸಂಗಮಿಸಿ ಪರಿವ್ರಾಜಕನಾದ ಲಿಂಗವಂತನು ಜಂಗಮನೆನಿಸುವನು. ಈ ಜಂಗಮನು ಲಿಂಗವಂತರ ಸಮಾಜಕ್ಕೆ ತನ್ನ ಆಧ್ಯಾತ್ಮಿಕಜ್ಞಾನವನ್ನು ಉಪದೇಶಿಸುತ್ತ ಸಂಚರಿಸುತ್ತ – ಇಡಿಯಾಗಿ ಆ ಸಮಾಜದ ಶುದ್ಧೀಕರಣಕ್ಕೆ,ಸಂಘಟನೆಗೆ, ಅಭಿವೃದ್ಧಿಗೆ ಕಟಿಬದ್ಧನಾಗಿರುವನು. (4) ಸಂಸಾರ ಮಾಡಿಕೊಂಡಿರುವವನು ಜಂಗಮನೆನಿಸನು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು