•  
  •  
  •  
  •  
Index   ವಚನ - 777    Search  
 
ಪ್ರಸಾದಿಯ ಜ್ಞಾನಿಸ್ಥಲ - ಲಿಂಗಜಂಗಮ
ಅರ್ಪಿತ ಅರ್ಪಿತವೆಂದೆನುತಿಹಿರಿ: ಗುರುವಿಂಗೆ ಕೊಡುವುದು ಅರ್ಪಿತವೆ ಸವಿಸವಿದು ಕೊಡಬೇಕಲ್ಲದೆ? ಅರ್ಪಿತ ಅರ್ಪಿತವೆಂದೆನುತಿಹಿರಿ: ಲಿಂಗಕ್ಕೆ ಕೊಡುವುದು ಅರ್ಪಿತವೆ ಸವಿಸವಿದು ಕೊಡಬೇಕಲ್ಲದೆ? ಅರ್ಪಿತ, ಅರ್ಪಿತವೆನುತಿಹರೆಲ್ಲರೂ ಅರ್ಪಿತದ ಮುಖವನರಿಯರು, ನೋಡಾ. ಜಂಗಮಕ್ಕೆ ನೀಡಿ ಜಂಗಮಪ್ರಸಾದವ ಕೊಂಡರೆ ನಿನಗರ್ಪಿತ, ಕಾಣಾ, ಕೂಡಲಸಂಗಮದೇವಾ!
Transliteration Arpita arpitavendenutihiri: Guruviṅge koḍuvudu arpitave savisavidu koḍabēkallade? Arpita arpitavendenutihiri: Liṅgakke koḍuvudu arpitave savisavidu koḍabēkallade? Arpita, arpitavenutiharellaru arpitada mukhavanariyaru, nōḍā. Jaṅgamakke nīḍi jaṅgamaprasādava koṇḍare ninagarpita, kāṇā, kūḍalasaṅgamadēvā!
Manuscript
English Translation 2 You talk of offerings and offerings: But is it offering To give a Guru unless You offer while tasting it? You talk of offerings and offerings: But is it offering To give Liṅga unless You offer while tasting it? All talk of offerings and offerings: But, mind you, do not know The meaning of an offering. If serving a Jaṅgama, mark you, Prāsāda from a Jaṅgama, mark you, That is an offering to Thee, Kūḍala Saṅgama Lord! Translated by: L M A Menezes, S M Angadi
Hindi Translation अर्पण, अर्पण, कहते हो; स्वाद लिए बिना गुरू को देना अर्पण है? अर्पण, अर्पण कहते हो स्वाद लिए बिना लिंग को देना अर्पण है? सब कहते हैं, अर्पण, अर्पण, किंतु वे अर्पण का मुँह तक नहीं जानते। जंगम को देकर जंगम का प्रसाद लेने पर वह तुम्हारे लिए अर्पित है कूडलसंगमदेव॥ Translated by: Banakara K Gowdappa
Telugu Translation అర్పిత మనర్పితమనుచుంటిరి; గురుని కల్పించుట అర్పితమే? రుచిచూచి యీదగునుగాని; అర్పిత మనర్పితమనుచుంటిరి లింగమున కిచ్చుట అర్పితమే; చవిచూచి యీ దగునుగాని అర్పిత మనర్పితమను చుంటిరి; అర్పించు చెట్టులో తెలియదు; జంగమున కిచ్చి జంగమ ప్రసాదమందుకొనుటే నీ కర్పితమగురా కూడల సంగమదేవా! Translated by: Dr. Badala Ramaiah
Tamil Translation காணிக்கை, காணிக்கை என்று கூறுவீர் குருவிற்கு ஈவது காணிக்கையோ? தேயத்தேய ஈயவேண்டுமன்றோ காணிக்கை காணிக்கை என்று கூறுவீர் இலிங்கத்திற்கு ஈவது காணிக்கையோ? தேயத்தேய ஈயவேண்டுமன்றோ காணிக்கை, காணிக்கை எனக்கூறுமனைவரும் காணிக்கையின் இயல்பினை அறியார், காணாய் ஜங்கமத்திற்கு ஈந்து, ஜங்கமபிரசாதத்தைக் கொளின், அது உமக்கு காணிக்கையாம் காணாய் கூடல சங்கமதேவனே. Translated by: Smt. Kalyani Venkataraman, Chennai
Marathi Translation अर्पित अर्पित म्हणता आपणः गुरुला दिलेले अर्पित आहे? सेवन केल्याविना दिले पाहिजे. अर्पित अर्पित म्हणता आपणः मनाने लिंगाला दिलेले अर्पित आहे ? सेवन केल्याविना दिले पाहिजे. अर्पित अर्पित म्हणतात सगळे अर्पिताचे मर्म हे जाणत नाहीत. जंगमाला देवून जंगमप्रसाद घेतला तर आपण तुला अर्पित होतो पहा कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಗುರುವಿಗೆ ತನುವನ್ನು ಅರ್ಪಿಸಿದೆವೆನ್ನಬಹುದು-ಆ ಗುರು ಆ ತನುವನ್ನು ಕಿತ್ತುತಿನ್ನುವುದಿಲ್ಲ-ಆದ್ದರಿಂದ ಯಾರಾದರೂ ಗುರುವಿಗೆ ತನುವನ್ನು ಅರ್ಪಿಸಿದೆವೆನ್ನಬಹುದು-ನಷ್ಟವಿಲ್ಲ. ಲಿಂಗಕ್ಕೆ ಮನವನ್ನು ಅರ್ಪಿಸಿದೆವೆನ್ನಬಹುದು-ಲಿಂಗ ಆ ಮನವನ್ನು ಹುರಿದು ಮುಕ್ಕುವುದಿಲ್ಲ –ಆದ್ದರಿಂದ ಯಾರಾದರೂ ಲಿಂಗಕ್ಕೆ ಮನವನ್ನು ಅರ್ಪಿಸಿದೆವೆನ್ನಬಹುದು -ನಷ್ಟವಿಲ್ಲ. ಅರ್ಪಿತ ಅರ್ಪಿತವೆಂದು ಹೀಗೆ ಬೊಬ್ಬೆಹಾಕುವುದು ಅರ್ಪಿತವಲ್ಲ. ಅರ್ಸಿಸುವುದಾದರೆ ಸ್ವೀಕರಿಸುವಂತಿರಬೇಕು. ಈ ಅರ್ಪಿತವೇನೆಂದು ತಿಳಿಯಬೇಕಾದರೆ ಊಟದ ಪೀಳಿಗೆ ಹಸಿದು ಬಂದ ಜಂಗಮಕ್ಕೆ ಅಟ್ಟಿದ್ದನ್ನು ನೀಡಬೇಕು –ಮರಳಿ ಆ ಜಂಗಮ ಕೊಟ್ಟಿದ್ದನ್ನು ಪ್ರಸಾದವೆಂದು ಹೊಟ್ಟೆಯಲ್ಲಿ ಭಂಡಾರಿಸಬೇಕು –ಅದು ಅರ್ಪಿತ -ಶಿವಾರ್ಪಿತವಾಗುವುದೂ ಅದೇ ! ಮಾತು ಗಾಳಿಪಾಲಾಗುವುದು –ಅದನ್ನು ಶಿವ ಮುಟ್ಟುವುದಿಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು