•  
  •  
  •  
  •  
Index   ವಚನ - 779    Search  
 
ಪ್ರಸಾದಿಯ ಪ್ರಸಾದಿಸ್ಥಲ - ಲಿಂಗಜಂಗಮ
ದಾಸೋಹವೆಂಬ ಸೋಹೆಗೊಂಡು ಹೋಗಿ ಗುರುವ ಕಂಡೆ, ಲಿಂಗವ ಕಂಡೆ, ಜಂಗಮವ ಕಂಡೆ, ಪ್ರಸಾದವ ಕಂಡೆ. ಇಂತೀ ಚತುರ್ವಿಧಸಂಪನ್ನನಾದೆ, ಕಾಣಾ, ಕೂಡಲಸಂಗಮದೇವಾ.
Transliteration Dāsōhavemba sōhegoṇḍu hōgi guruva kaṇḍe, liṅgava kaṇḍe, jaṅgamava kaṇḍe, prasādava kaṇḍe. Intī caturvidhasampannanāde, kāṇā, kūḍalasaṅgamadēvā.
Manuscript
English Translation 2 As I went taking humility as my sign, I realised Guru, I realised Liṅga, I realised Jaṅgama and Prāsāda, And look! I was possessed Of all these four, O Kūḍala Saṅgama Lord! Translated by: L M A Menezes, S M Angadi
Hindi Translation दासोह नामक लांछन धारण कर मैंने गुरू को देखा, लिंग को देखा, जंगम को देखा, प्रसाद को देखा। यों मैं चतुर्विध संपन्न बना, कूडलसंगमदेव॥ Translated by: Banakara K Gowdappa
Telugu Translation దాసోహపు సోహామును బట్టిపోయి గురునిగంటి లింగమునుగంటి జంగమునిగంటి ప్రసాదముగంటి ఇట్లీ చతుర్విధ సంపన్నుడనైతి, సంగమదేవా! Translated by: Dr. Badala Ramaiah
Tamil Translation ஜங்கமவிருந்து எனும் சின்னத்தை எடுத்துச்சென்று குருவைக் கண்டேன் இலிங்கத்தைக் கண்டேன், ஜங்கமரைக் கண்டேன், பிரசாதத்தைக் கண்டேன் இவ்விதம் ஐந்து வகைகளில் செல்வந்தன் ஆனேன், காணாய், கூடல சங்கமதேவனே. Translated by: Smt. Kalyani Venkataraman, Chennai
Marathi Translation दासोहाची साधना केल्याने गुरुला पाहिले, लिंगाला पाहिले, जंगमाला पाहिले, प्रसाद मिळाला. अशाप्रकारे चतुर्विध संपन्न झालो पहा कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಹಿಂದಿನ ವಚನದಲ್ಲಿ ಹೇಳಿದ ಪಾದೋದಕ ಪ್ರಸಾದಗಳಿಗೆ ಗುರುಲಿಂಗಜಂಗಮವೇ ತಲಕಾವೇರಿ. ಅಲ್ಲಿಗೆ ದಾಸೋಹವೇ ದಾರಿ, ಆ ದಾರಿ ಹಿಡಿದು ಹೋಗಿ ತಾವು ಗುರುಲಿಂಗಜಂಗಮಪ್ರಸಾದವನ್ನು ಕಂಡು ಪಡೆದು ಕೃತಾರ್ಥರಾದುದಾಗಿ ಬಸವಣ್ಣನವರು ಅರಿಕೆ ಮಾಡಿಕೊಳ್ಳುತ್ತಿರುವರು. ಭಕ್ತಿಯ ಫಲಿತಾಂಶವಾದ ಮನಃಪ್ರಸನ್ನತೆ ಬೇಕಾದರೆ ಗುರುಲಿಂಗಜಂಗಮದ ಸೇವೆಯೊಂದೇ ಸಾಧನವೆಂಬುದಭಿಪ್ರಾಯ. ಈ ಸೇವೆಗೆ ದಾಸೋಹವೆನ್ನುವರು ಶರಣಧರ್ಮದಲ್ಲಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು