•  
  •  
  •  
  •  
Index   ವಚನ - 780    Search  
 
ಪ್ರಸಾದಿಯ ಭಕ್ತಸ್ಥಲ - ಶರಣ
ಸಜ್ಜನ ಶರಣರ ಕಂಡು ಎನ್ನ ಮನ ಉಬ್ಬಿತ್ತು ನೋಡಿರಯ್ಯಾ! ಶ್ರೀಗುರುಪಾದವ ಹಿಡಿದು ಪಾವನವಾದೆನಯ್ಯಾ. ಪಾದೋದಕ ಪ್ರಸಾದದಿಂದ ಭವಗೆಟ್ಟೆನು, ಕೂಡಲಸಂಗಮದೇವಾ.
Transliteration Sajjana śaraṇara kaṇḍu enna mana ubbittu nōḍirayyā! Śrīgurupādava hiḍidu pāvananādenayyā. pādōdaka prasādadinda bhavageṭṭenu, kūḍalasaṅgamadēvā.
Manuscript
English Translation 2 Mark ye all! seeing the gentleŚaraṇās, , My spirit swells! Holding the Guru's holy feet I, Sir, was blessed. Through Prāsāda and Pādōdaka I overcame my wheel of births, O Kūḍala Saṅgama Lord! Translated by: L M A Menezes, S M Angadi
Hindi Translation सज्जन-शरणों को देख मेरा मन प्रफुल्लित हुआ; श्री गुरु-चरण ग्रहण कर मैं पवित्र हुआ। पादोदक प्रसाद से भव-मुक्त हुआ, कूडलसंगमदेव॥ Translated by: Banakara K Gowdappa
Telugu Translation సజ్జన శరణుల చూడ నామది పొంగునయ్యా; శ్రీ గురుపాదముల బట్టి పవిత్రుడ నై తినయ్యా; పాదోదక ప్రాసాదమున భవముచెడె సంగయ్యా! Translated by: Dr. Badala Ramaiah
Tamil Translation நெறியுடைய சரணரைக் கண்டு எம் மனம் பூரித்தது, காணாய் ஐயனே ஸ்ரீகுருவின் திருவடிகளைப் பிடித்து புனித மானவன் ஆனேன் ஐயனே திருவடித் திருநீர் பிரசாதத்தினால் பிறவி அகன்றது கூடல சங்கம தேவனே. Translated by: Smt. Kalyani Venkataraman, Chennai
Marathi Translation सज्जन शरणांना पाहून माझे मन आनंदले पहा देवा. श्रीगुरु चरण स्पर्शाने पावन झालो मी देवा. पादोदक प्रसादाने भवबंधन तुटले कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಬಸವಣ್ಣನವರಿಗೆ ದೊರೆತ ಆಧ್ಯಾತ್ಮಿಕ ಸಂಪತ್ತಿಗೆ ಶರಣರ ಸಹವಾಸವೇ ಮೂಲಧನವಾಯಿತು. ಸಜ್ಜನರಾದ ಆ ಶರಣರ ಸಂಗದಿಂದ ಪ್ರೇರಿತರಾಗಿ –ಅವರು ಶಿವದೀಕ್ಷೆಯನ್ನು ಪಡೆಯಲು ಕೂಡಲಸಂಗಮದ ಸದ್ಗುರುವಿನ ಬಳಿ ಹೋದರು. ಅವನ ಸೇವೆ ಮಾಡಿ ಜನ್ಮಕ್ಕೆ ಅಂಟಿಬಂದಿದ್ದ ವೈದಿಕಕರ್ಮಕೋಟಲೆಗಳಿಂದ ಸಂಪೂರ್ಣ ಬಿಡುಗಡೆ ಪಡೆದರು -ಭವಗೆಟ್ಟು ಭಕ್ತರಾದರು. ಭಗವಾನ್ ಬಸವಣ್ಣನವರು ತಮ್ಮ ಹುಟ್ಟೂರಾದ ಬಾಗೇವಾಡಿಯಲ್ಲಿ ಬಾಲಕರಾಗಿದ್ದಾಗಲೇ-ಚೆನ್ನಯ್ಯ ಕಕ್ಕಯ್ಯ ಕೇಶಿರಾಜ ದಾಸಿಮಯ್ಯ ಮುಂತಾದವರು ಊರ್ಜಿತಗೊಳಿಸಿದ್ದ ಶರಣಪಂಥದೊಡನೆ ನಿಕಟ ಸಂಪರ್ಕವಿಟ್ಟುಕೊಂಡಿಡಿದ್ದರೆನ್ನಲು ಈ ವಚನ ಸಾಕ್ಷಿಯಾಗಿದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು