ಪ್ರಸಾದಿಯ ಭಕ್ತಸ್ಥಲ - ಲಿಂಗಜಂಗಮ
ಲಿಂಗಪ್ರಸಾದಿಗಳಲ್ಲದವರ ಸಂಗ
ಭಂಗವೆಂದುದು ಗುರುವಚನ.
ಲಿಂಗಪ್ರಸಾದಿಗಳಲ್ಲದವರ ಸಂಗ
ಪಂಚಮಹಾಪಾತಕವೆಂದುದು ಲಿಂಗವಚನ:
'ಆಸನೇ ಶಯನೇ ಯಾನೆ| ಸಂಪರ್ಕೇ ಸಹಭೋಜನೇ
ಸಂಚರಂತಿ ಮಹಾಘೋರೇ| ನರಕೇ ಕಾಲಮಕ್ಷಯಂ'||
ಇಂತೆಂದುದಾಗಿ, ಕೂಡಲಸಂಗಮದೇವಾ,
ನಿಮ್ಮ ಶರಣರಿಗೆ ಶರಣೆಂದು ಶುದ್ಧನಯ್ಯಾ.
Transliteration Liṅgaprasādigaḷalladavara saṅga
bhaṅgavendu guruvacana.
Liṅgaprasādigaḷalladavara saṅga
pan̄camahāpātakavendu liṅgavacana:
'Āsanē śayanē yānē| samparkē sahabhōjanē
san̄caranti mahāghōrē| narakē kālamakṣayaṁ'||
intendudāgi, kūḍalasaṅgamadēvā,
nim'ma śaraṇarige śaraṇendu śud'dhanayyā.
Manuscript
English Translation 2 The Guru's word says
Your intercourse with such
As share not Liṅga's grace
Is utter loss;
The Liṅga 's word says
Your intercourse with such
As share not Liṅga's grace
Is the great fivefold sin:
He who sits, sleeps walks
And interdines with them shall go
For endless time to terrific hell'
Since this is so, O Kūḍala Saṅgama Lord,
By saying Hail! to Thy Śaraṇas ,
I have been purified!
Translated by: L M A Menezes, S M Angadi
Hindi Translation गुरु वचन है, जो लिंग-प्रसादी नहीं
उनका संग भंगकारी है ।
लिंग वचन है, जो लिंग-प्रसादी नहीं
उनका संग पंचमहापातक हैं।
“असने शयने याने संपर्के सह भोजने ।
संचरंति महाघोरे नरके कालमक्षयम् “॥
अतः कूडलसंगमदेव, तव शरणों को
प्रणाम कर मैं पवित्र हुआ॥
Translated by: Banakara K Gowdappa
Telugu Translation లింగ ప్రసాదులుగాని వారి సంగము భంగమనె; గురువచనము;
లింగ ప్రసాదులుగాని వారి సంగమును మహా పాతకమనె లింగవచనము?
‘‘ఆశ నే-శయనేయానే సంపర్కే సహభోజనే
సంచరంతి మహా ఘోరే నరకే కాలమక్షయం’’ కాన
సంగా నీ శరణులకు శరణని శుచినౌదునయ్యా!
Translated by: Dr. Badala Ramaiah
Tamil Translation இலிங்கபிரசாதம் பெறாதோரின் தொடர்பு
கேடு என்று குருமொழி கூறுகிறது
இலிங்க பிரசாதம் பெறாதோரின் தொடர்பு
ஐம்பெரும்பாவமென இலிங்கமொழி
கூறுகிறது “அஸனே சயனே யானே
ஸம்பர்கே ஸஹபோஜனே ஸஞ்சரந்தி
மஹாகோரே நரகே காலமக்ஷயம்”
என்பதால் கூடல சங்கமதேவனே
உம் அடியாருக்குத் தஞ்சமானவன்
தூயோன் ஐயனே.
Translated by: Smt. Kalyani Venkataraman, Chennai
Marathi Translation
लिंगप्रसादी नसलेल्यांचा संग म्हणजे
भंग आहे गुरुवचनाचा.
लिगप्रसादी नसलेल्यांचा संग म्हणजे
पंचमहापातक होईल लिंगवचनाचा.
आसने शयने याने संपर्क सहभोजने ।
संचरंति महाघोरे नरके कालमक्षयं ।
असे म्हणतात कूडलसंगमदेवा,
तव शरणांना शरण जाऊन शुध्द झाला
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ವಚನ 712 ನೋಡಿ. ಅಲ್ಲಿಯ ವಿವರದಿಂದ ಈ ವಚನ ಪ್ರಕ್ಷಿಪ್ತವೆಂಬುದು ಮನವರಿಕೆಯಾಗುವುದು. “ಹೊಲೆಯರ ಮನೆಯ ಹೊಕ್ಕು ಸಲೆ ಕೈಕೂಲಿಯ ಮಾಡಿಯಾದರೆಯೂ ನಿಮ್ಮ ನಿಲವಿಂಗೆ ಕುದಿವೆನಲ್ಲದೆ ಎನ್ನೊಡಲವಸರಕ್ಕೆ ಕುದಿದೆನಾದರೆ ತಲೆದಂಡ ಕೂಡಲ ಸಂಗಮದೇವ” ಎಂಬ ಮಾತಿನ ಓಘದಲ್ಲಿ ಕಾಣುವ ಜೀವನ ಶ್ರದ್ಧೆ, ತತ್ತ್ವನಿಷ್ಠೆ, ಮಾನವಸಂಬಂಧಗಳ, ಸುರಸಮೀಮಾಂಸೆ ಬಸವಣ್ಣನವರ ವ್ಯಕ್ತಿತ್ವಕ್ಕೆ ನೈಜವಾಗಿದ್ದು –ಅವು ಈ ವಚನದಲ್ಲಿ ಲೋಪವಾಗಿವೆ.
ಬಸವಣ್ಣನವರ ಮತಾತೀತವಾದ ಧೀರನಿಲುವನ್ನು ಸನಾತನಿಗಳು ಅಲ್ಲಗಳೆಯಲು ಮಾಡಿದ ಹಲವು ಪ್ರಯತ್ನಗಳಲ್ಲಿ ಈ ವಚನವೂ ಒಂದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು