ಪ್ರಸಾದಿಯ ಭಕ್ತಸ್ಥಲ - ಭಕ್ತಿಮಾರ್ಗ
ಸಯಿಧಾನವ ತಂದು ನೀಡುವೆನಲ್ಲದೆ
ಸಂಬಂಧಿ ನಾನಲ್ಲಯ್ಯಾ.
ಕರ್ತಂಗೆ ಭೃತ್ಯಾಚಾರವ ಮಾಡಿ, ಒಕ್ಕುದ ಕೊಂಡಿಪ್ಪೆನಯ್ಯಾ.
ಭೋಗಾದಿಭೋಗವ ಸಮವಾಗಿ ಭೋಗಿಸಲು
ಅಘೋರ ನರಕದಲ್ಲಿಕ್ಕುವ
ಕೂಡಲಸಂಗಮದೇವ.
Transliteration Sāyidānava tandu nīḍuvenallade
sambandhi nānallayya.
Kartaṅge bhr̥tyācārava māḍi, okkuda koṇḍippenayyā.
Bhōgādibhōgava samavāgi bhōgisalu
aghōranarakadallikkuva
kūḍalasaṅgamadēva.
Manuscript
English Translation 2 I gather various gifts for sacrifice
And, serving them, myself am unconcerned.
I'am one who, having served my lord,
Receive whatever is given back.
Should i enjoy all kinds of boons
Upon an equal footing, Lord Kūḍala Saṅgama
Will cast me into a terrible hell!
Translated by: L M A Menezes, S M Angadi
Hindi Translation उपादान लाकर उपस्थित करता हूँ
न कि उससे संबंध रखता हूँ,
कर्ता की भृत्यवृत्ति कर प्रसाद पाता हूँ
भोगादिभोगों को समान रूप से भोगूँ,
तो मुझे घोर नरक में रखेंगे कूडलसंगमदेव ॥
Translated by: Banakara K Gowdappa
Telugu Translation సయిదము దెచ్చి వడ్డింతుగాని సంబంధినే గానయ్యా,
కర్తకు భృత్యాచారముచేసి ప్రసాదము గొందునయ్యా
భోగాది భోగము సమముగా భోగింప; ఘోరనరకమున
దొక్కక మానడు కూడల సంగమ దేవుడు.
Translated by: Dr. Badala Ramaiah
Tamil Translation உணவுப் பொருட்களை அளிப்பேனன்றி
நான் உறவினன் அல்ல ஐயனே
உடையருக்குத் தொண்டாற்றி, பிரசாதம்
பெற்றுக் கொண்டு இருப்பேன் ஐயனே
துய்ப்பனவற்றைச் சமமாகத் துய்ப்பின்
கூடல சங்கமதேவன் கொடிய
நரகத்தில் இடுவான்.
Translated by: Smt. Kalyani Venkataraman, Chennai
Marathi Translation
पदार्थ आणून अर्पण करतो पण त्याच्याशी संबंध नाही.
कर्त्याला भृत्याचार करुन शेषप्रसाद घेतो देवा
कर्त्यासम उपभोगण्याची इच्छा केली
तर अघोर नरकात घालेल कूडलसंगा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಅಕ್ಕಿ ಬೇಳೆ ಮುಂತಾದ ಲವಾಜಮೆಯನ್ನು ಸಂಪಾದಿಸಿ ತಂದು ಅಡುಗೆಮಾಡಿ ಕರ್ತ(ಒಡೆಯ)ರಿಗೆ ನೀಡಿ ಮಿಕ್ಕುದನ್ನು ಉಂಡು –ಚಾಕರಿಮಾಡಿಕೊಂಡಿರುವ ಸೇವಕ ನಾನು. ಮಾಡಿ ನೀಡುವುದು ನನ್ನ ಕರ್ತವ್ಯವೇ ಹೊರತು –ಆ ದಾಸೋಹದಿಂದ ಬರುವ ಫಲಕ್ಕೂ ನನಗೂ ಸಂಬಂಧವಿಲ್ಲ. ಫಲದಲ್ಲಿ ಪಾಲುಕೇಳುವ ಸಮಾನ ಯಜಮಾನಿಕೆಯನ್ನು ಶಿವನು ಸಹಿಸುವುದಿಲ್ಲ.
ಬಸವಣ್ಣನವರು ಮಾಡುವ ದಾಸೋಹದ ಲಕ್ಷಣವನ್ನು ಈ ವಚನ ಬಹಳ ಸುಂದರವಾಗಿ (ಸ್ವಾಮಿ -ಸೇವಕ ವಿಧಾನದಲ್ಲಿ) ಸೂತ್ರೀಕರಿಸಿರುವುದು.
“ಕರ್ಮ”ವೆಂಬ ಪದಕ್ಕೆ ದಾಸೋಹವೆಂಬ ಅರ್ಥವನ್ನು ತಾತ್ಕಾಲಿಕವಾಗಿಯಾದರೂ ಆರೋಪಿಸುವುದಾದರೆ -ಭಗವದ್ಗೀತೆಯಲ್ಲಿ ಸಂವಾದಿಯಾದ ಒಂದು ಶ್ಲೋಕವಿದೆ :
“ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾ ಚ ನ | ಮಾ ಕರ್ಮಫಲಹೇತುರ್ಭೂಃ ಮಾ ತೇ ಸಂಗೋ ಸ್ತ್ವಕರ್ಮಣಿ” (2-47) ನಿನಗೆ ಅಧಿಕಾರವಿರುವುದು ದಾಸೋಹ ಮಾಡುವುದರಲ್ಲಿಯೇ ಹೊರತು – ಎಂದಿಗೂ ಅದರ ಫಲಗಳ ಮೇಲಲ್ಲ. ದಾಸೋಹವನ್ನು ಮಾಡಿ-ಅದರ ಫಲಿತಾಂಶಕ್ಕೆಲ್ಲಾ ನಾನೇ ಕಾರಣನೆಂದು ಭಾವಿಸಲೂ ಬೇಡ, ಮತ್ತು ಫಲ ನನಗಿಲ್ಲದ ಮೇಲೆ ನಾನೇಕೆ ಮಾಡಲೆಂದು ದಾಸೋಹವನ್ನು ನಿಲ್ಲಿಸಲೂ ಬೇಡ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು