ಪ್ರಸಾದಿಯ ಭಕ್ತಸ್ಥಲ - ತನುಮನ
ಶುದ್ಧವ ಗುರುವಿಂಗೆ ಕೊಟ್ಟು, ಶುದ್ಧವಾಯಿತ್ತೆಂಬೆನಯ್ಯಾ,
ಸಿದ್ಧವ ಲಿಂಗಕ್ಕೆ ಕೊಟ್ಟು, ಸಿದ್ಧವಾಯಿತ್ತೆಂಬೆನಯ್ಯಾ.
ಪ್ರಸಿದ್ಧವ ಜಂಗಮಕ್ಕೆ ಕೊಟ್ಟು, ಪ್ರಸಿದ್ಧವಾಯಿತ್ತೆಂಬೆನಯ್ಯಾ.
ಗುರುಲಿಂಗಜಂಗಮವ ಏಕತ್ರಯವಾಗಿ ಕಾಣಲರಿಯದಿದ್ದರೆ
ಶುದ್ಧ ಸಿದ್ಧ ಪ್ರಸಿದ್ಧ ಒಡನೆ ನಗುತ್ತಿದಾವೆ!
ತನುಮನಧನವ ನಿವೇದಿಸಲರಿಯೆನಾಗಿ
ಕೂಡಲಸಂಗಮದೇವ, ಒಲಿಯೆಂದೊಡೆಂತೊಲಿವ?
Transliteration Śud'dhava guruviṅge koṭṭu, śud'dhavāyittembenayyā,
sid'dhava liṅgakke koṭṭu, sid'dhavāyittembenayyā,
prasid'dhava jaṅgamakke koṭṭu,prasid'dhavāyittembenayyā.
Guruliṅgajaṅgamava ēkatrayavāgi kāṇalariyadiddare
śud'dha sid'dha prasid'dha oḍane naguttidāve!
Tanumanadhanava nivēdisalariyenāgi
kūḍalasaṅgamadēva, oliyendoḍentoliva?
Manuscript
English Translation 2 Giving the Pure to Guru, I say
It has turned pure;
Giving the Perfect to Liṅga, I say
It has turned perfect;
Giving the Renowned to Jaṅgama, I say
It has become renowned.
If one, when serving, does not know
That Guru, Liṅga and Jaṅgama are three in one,
The Pure, the Perfect and Renowned
Shall forthwith laugh at him!
As I know not
To dedicate all that I was and had,
How can Lord Kūḍala Saṅgama
Love me if I ask Him?
Translated by: L M A Menezes, S M Angadi
Hindi Translation गुरु को शुद्ध वस्तु देकर कहूँग, वह शुद्ध हुआ;
लिंग को सिद्धि देकर कहूँग, वह सिद्ध हुआ;
जंगम को प्रसिद्धि देकर कहूँगा वह प्रसिद्ध हुआ।
गुरु, लिंग, जंगम में अभेद में देखना न जानूँ,
तो शुद्धि, सिद्धि, प्रसिद्धि तुरंत हँसेंगी।
मैं तन, मन,धन निवेदन करना नहीं जानता
अतः मेरी प्रार्थना मात्र से कूडलसंगमदेव कैसे प्रसन्न होंगे?
Translated by: Banakara K Gowdappa
Telugu Translation శుచి గురున కర్పించి శుచి నై తినందునయ్యా,
సిద్ధి లింగమున కర్పించి సిద్ధి కల్గెనందునయ్యా,
ప్రసిద్ధము జంగమున కిచ్చి ప్రసిద్ధమయ్యె నందునయ్యా
గురులింగ జంగమ మేకత్రయమైయుంట తెలియకున్న
శుద్ధ సిద్ధ ప్రసిద్ధిములపుడే నవ్వుచుండె
తను మన ధనముల నివేదింప తెలియమి
సంగని మెచ్చమన్న యెట్లు మెచ్చునయ్యా!
Translated by: Dr. Badala Ramaiah
Tamil Translation சுத்த பிரசாதத்தை குருவிற்கு ஈந்து தூய்மையாயிற்றென்பேன்
சித்த பிரசாதத்தை இலிங்கத்திற்கு ஈந்து சித்தமாயிற்றென்பேன்
பிரசித்த பிரசாதத்தை ஜங்கமருக்கு ஈந்து பிரசித்தமாயிற்றென்பேன்
குரு, இலிங்க, ஜங்கமத்தை ஒன்றாகக் காணலறியாதிருப்பின்
சுத்த, சித்த, பிரசித்தபிரசாதம் நகுவதல்லவோ!
உடல், மனம், செல்வத்தை அர்ப்பிக்க அறியாது
கூடல சங்கமதேவனே, ஏற்பாய் எனின் எங்ஙனம் ஏற்பான்?
(பிரசாதங்களில் சுத்த, சித்த, பிரசித்த என்று மூன்று வகைகள் உள்ளன. பொருளை இஷ்டலிங்கத்திற்கு அர்ப்பித்து ஏற்றுக் கொள்வது சுத்தபிரசாதமாகும். சுவையைப் பிராணலிங்கத்திற்கு அர்ப்பித்து ஏற்பது சித்த பிரசாதமாகும். சுவையினால் வந்த நிறைவு மற்றும் இன்பத்தை பாவலிங்கத்திற்கு அர்ப்பிப்பது பிரசித்த பிரசாதமாகும்)
Translated by: Smt. Kalyani Venkataraman, Chennai
Marathi Translation
शुध्द प्रसाद गुरुला अर्पण करुन शुध्द झालो देवा.
सिध्द प्रसाद लिंगार्पण करुन सिध्द झालो देवा.
प्रसिध्द प्रसाद जंगमार्पण करुन प्रसिध्द झालो
देवा. गुरु-लिंग-जंगमाला एकच समजलो नाही तर
शुध्द-सिध्द- प्रसिध्द सगळेच हसतील.
तनमनधन अर्पण करणे जाणले नाही तर
प्रसन्न हो म्हणण्याने कसा प्रसन्न होईल कूडलसंगमदेवा?
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ತನುವನ್ನು ಗುರುವಿಗೇ ಕೊಟ್ಟು ಆ ತನು ಶುದ್ಧವಾಯಿತು, ಮನವನ್ನು ಲಿಂಗಕ್ಕೇ ಕೊಟ್ಟು ಆ ಮನ ಸಿದ್ಧವಾಯಿತು. ಧನವನ್ನು ಜಂಗಮಕ್ಕೆ ಕೊಟ್ಟು ಆ ಧನ ಪ್ರಸಿದ್ಧವಾಯಿತು ಎನ್ನಬೇಡ. ಹೀಗೆ ತನು-ಮನ-ಧನವನ್ನು ವಿಂಗಡಿಸಿ ಕೊಟ್ಟೇನೆಂದರೆ –ಆ ಗುರು-ಲಿಂಗ-ಜಂಗಮ ಬೇರೆಬೇರೆಯಲ್ಲ. ಅದು ಒಂದೇ ಗೆಣ್ಣಿನಲ್ಲಿ ಎರಡಲೆ ಒಂದು ಹೂವಾದ ಅಖಂಡ ಪರಶಿವವಸ್ತು. ಆ ಕಾರಣಕ್ಕಾಗಿಯೇ ದಾಸೋಹಿಯಾದವನು ತನು-ಮನ-ಧನವನ್ನು ಏಕಮಾಡಿ ಗುರು-ಲಿಂಗ-ಜಂಗಮಕ್ಕೆ ಏಕವಾಗಿ ಅರ್ಪಿಸಬೇಕು. ಇಲ್ಲದಿದ್ದರೆ ಬುಡಕ್ಕೆ ಮಣ್ಣು ಕಾಂಡಕ್ಕೆ ನೀರು, ಎಲೆ ಹೂ ಹಣ್ಣಿಗೆ ಗೊಬ್ಬರವೆಂದು ವಿಂಗಡಿಸಿ ಹಾಕಿದಂತೆ ಹಾಸ್ಯಾಸ್ಪದವಾಗುತ್ತದೆ.
ಗುರುವಿಗೆ ಕೊಟ್ಟು ಬರೀ ದೇಹ ಹೆಣವಾಗುತ್ತದೆ. ಲಿಂಗಕ್ಕೆ ಕೊಟ್ಟ ಬರೀ ಮನ ಸಿನೆಬಂಜೆ, ಜಂಗಮಕ್ಕೆ ಕೊಟ್ಟ ಬರೀ ಧನ ಸಲ್ಲದ ನಾಣ್ಯವಾಗುತ್ತದೆ. ತನುಮನಧನವನ್ನು ಇಡಿಯಾಗಿ ಗುರುಲಿಂಗ ಜಂಗಮಕ್ಕೆ ತೆತ್ತುಕೊಂಡು ನಿರ್ದೇಹಿ ನಿರಹಂಕಾರಿ ನಿರ್ಮಮನಾಗಬೇಕು. ಆಗ ಶಿವನಿಗೆ ಶಿವನೊಲಿಯುವನು.
ವಿ : (1) ತ್ರಿವಿಧದಾಸೋಹವನ್ನು ಪ್ರತ್ಯೇಕಿಸಿ ತಪ್ಪಾಗಿ ಅರ್ಥೈಸುವುದನ್ನು ಬಸವಣ್ಣನವರು ಈ ವಚನದ ಮೂಲಕ ಖಂಡಿಸಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು