•  
  •  
  •  
  •  
Index   ವಚನ - 785    Search  
 
ಒಡಲ ಕಳವಳಕ್ಕೆ, ಬಾಯ ಸವಿಗೆ ಬಯಸಿ ಉಂಡೆನಾದರೆ ನಿಮ್ಮ ತೊತ್ತಿನ ಮಗನಲ್ಲಾ! ಬೇಡೆ, ಬೇಡೆ, ನಿಮ್ಮ ನಂಬಿದ ಸದ್ಭಕ್ತರ: ಅವರೊಕ್ಕುದ ಉಂಬೆ, ಅವರೆಂದಂತೆ ಎಂಬೆ. ಎನ್ನೊಡೆಯ ಕೂಡಲಸಂಗಮದೇವನೊಲ್ಲದವರ ಹಿಡಿದೆನಾದಡೆ ನಿಮ್ಮ ಪಾದದಾಣೆ!
Transliteration Oḍala kaḷavaḷakke, bāya savige bayasi uṇḍenādare nim'ma tottina maganallā! Bēḍa, bēḍa, nim'ma nambida sadbhaktara: Avarokkuda umbe, avarendante embe. Ennoḍeya kūḍalasaṅgamadēvanolladavara hiḍidenādaḍe nim'ma pādadāna!
Manuscript
English Translation 2 Should I desire to eat To still my body's pain or please my tongue, I am not fit to be Your handmaid's son! I will not, will not beg Of real devotees who trust in Thee: I eat what they have left, I speak even as they speak. Let Thy feet witness it, Should I hold on to such as deny Lord Kūḍala Saṅgama, my lord! Translated by: L M A Menezes, S M Angadi
Hindi Translation उदर-क्लेशार्थ, जिह्वा-स्वादार्थ चाहकर खाऊँ, तो मैं तव दासी का पुत्र नहीं हूँ । नहीं माँगूँगा, नहीं माँगूँगा, तव विश्वस्त सद्भक्तों से, उनका प्रसाद खाऊँगा; उनकी बोली बोलूँगा; मेरे स्वामी कूडलसंगमदेव के अवांछित का आश्रय पाऊँ, तो तव चरणों की सौगंध है ॥ Translated by: Banakara K Gowdappa
Telugu Translation ఒడలి కలవరమున నోటిరుచిని ఆశించి తిందునా ! నీ తొత్తుకొడుకు గాకుందునే? నిన్ను నమ్మిన సద్భక్తుల వేడి వేడి వారి ప్రసాదము కొందు; వారన్నట్టులందు; నా స్వామి సంగయ్య మెచ్చని వారిని పట్టిన నీ పాదమే సాక్షి Translated by: Dr. Badala Ramaiah
Tamil Translation பிரசாதியின் மாகேசுவரத்தலம் உடலின் வேதனைக்கு, வாய்ச்சுவைக்கு விரும்பி உண்டேன்எனின், உம் தொண்டனின் மகனன்று, வேண்டாம் வேண்டாம், உம்மை நம்பிய நல்ல பக்தரேற்ற பிரசாதத்தை உண்பேன் என்பதனைய ஒழுகுவேன் என் உடையன், கூடல சங்கமதேவனை விரும்பாதோரை ஏற்றேன் எனின் உம் திருவடியின் மீது ஆணை Translated by: Smt. Kalyani Venkataraman, Chennai
Marathi Translation भूकेने व्याकूळ होऊन, जीभेच्या रुचीसाठी, जेवलो तर तव सेवकाचा पुत्र नाही. मागत नाही, मागत नाही तुमच्या सद्भक्तांना. त्यांचा शेषप्रसाद खाऊन त्यांची वाणी बोलतो. माझे मालक कूडलसंगमदेवाविना अन्य संग केला तर तुमच्या चरणाची शपथ, Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಬಸವಣ್ಣನವರು ತಮ್ಮನ್ನು “ಎನಗಿಂತ ಕಿರಿಯರಿಲ್ಲ”(ವಚನ 336) ಎಂದ ನಿರಹಂಕಾರದ ಮಾತಿನಲ್ಲಿ ಅಹಂಕಾರಭಾರದಿಂದ ಕುಸಿಯುತ್ತಿರುವ ಅಡಕಿಲುಜನಾಂಗಗಳ ವಿಲಯದ ತಳಹದಿಯನ್ನು ಲಯಮಾಡಿ ಅದರ ಮೇಲೆ ಹೊಸದೊಂದು “ಭಕ್ತಿಸ್ಥಾನ”ವನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯಿತ್ತು. ಆ ಕನಸನ್ನು ನಿಜವಾಗಿಸಲೆಂದೇ ಅವರು ಒಡಲ ಕಳವಳಕ್ಕಾಗಿ ಏನನ್ನೂ ಮಾಡಲೊಪ್ಪಲಿಲ್ಲ, ಈ ಮೂಲಕ –ಎಲ್ಲ ತ್ಯಾಗಕ್ಕೂ ಸಿದ್ಧವಾದೊಂದು ಜೀವಸಮೂಹ ಲೋಕಕಲ್ಯಾಣಕ್ಕಾಗಿ ಶ್ರಮಿಸಲು ವ್ಯೋಹಗೊಂಡೀತೆಂಬುದು ಅವರ ನಿರೀಕ್ಷೆಯಾಗಿತ್ತು. ಆದುದರಿಂದಲೇ ಶಿವಭಕ್ತರಿಗೆ ಸೇವೆಮಾಡಿ –ಆ ಸೇವೆಗೆ ಕೂಲಿಯೆಂಬಂತೆ –ಅವರಿಂದ ಒಂದು ತುತ್ತನ್ನವನ್ನೂ ಕೇಳುವುದಿಲ್ಲವೆಂದರು ಬಸವಣ್ಣನವರು (ಭಕ್ತರು ಬಿಟ್ಟುದನ್ನು ಉಣ್ಣುವೆನೆಂಬುದಾದರೂ ಪ್ರಸಾದಕ್ಕಾಗಿಯೇ ಹೊರತು ಅನ್ನಕ್ಕಾಗಿಯಲ್ಲ). “ಬೇಡ ಬೇಡ” ನಿಮ್ಮ ನಂಬಿದ ಸದ್ಭಕ್ತರ-ಅವರೊಕ್ಕುದನುಂಬೆ”-ಎಂದಿರುವ ಅವರ ಮಾತನ್ನು ಗಮನಿಸಿರಿ. ಬಸವಣ್ಣನವರಿಗೆ ಶಿವಭಕ್ತರ ಸೇವೆ ಬೇಕು, ಅವರ ಹಂಗು ಬೇಡ. ಒಬ್ಬರ ಹಂಗಿಲ್ಲದೆ –ಆದರೂ ಪರಸ್ಪರ ವಿನಯವಾಗಿ ತನಗೆ ತಾನಾಗಿ ಕಟ್ಟಿಕೊಳ್ಳುವ ಒಂದು ಸ್ವತಂತ್ರ ಸಮಾಜದ ನಿರ್ಮಾಣಕ್ಕಾಗಿ ಅವರು ದುಡಿಯುತ್ತಿದ್ದರು. ಅಂದಮೇಲೆ ಅವರಿಗೆ ಬೀದಿಯ ಗುಂಡರ ಒಡನಾಟದಿಂದೇನಾಗಬೇಕಾಗಿತ್ತು?

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು