•  
  •  
  •  
  •  
Index   ವಚನ - 786    Search  
 
ಪ್ರಸಾದಿಯ ಮಾಹೇಶ್ವರಸ್ಥಲ - ಪ್ರಸಾದ
ಲಿಂಗಮುಖದಿಂದ ಬಂದ ಪ್ರಸಾದವಲ್ಲದೆ, ಕೊಂಡೆನಾದರೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ! ಲಿಂಗಾರ್ಪಿತವಲ್ಲದೆ ಉದಕವ ಮುಕ್ಕುಳಿಸಿದೆನಾದರೆ ಸಲ್ಲೆನು ನಿಮ್ಮ ಗಣಾಚಾರಕ್ಕಯ್ಯಾ! ಲಿಂಗಾರ್ಪಿತವಲ್ಲದೆ ಹಲ್ಲುಕಡ್ಡಿಯ ಕೊಂಡರೆ ಬಲ್ಲೆ, ಮುಂದೆ ಭವ ಘೋರನರಕವೆಂಬುದ! ನಿಮಗೆತ್ತಿದ ಕರದಲ್ಲಿ ಮತ್ತೊಂದಕ್ಕೆ ಕೈಯಾನೆನು: ಅಳವರಿಯದೆ ನುಡಿದೆನು- ಕಡೆ ಮುಟ್ಟಿ ಸಲಿಸದಿದ್ದರೆ ತಲೆದಂಡ! ಕೂಡಲಸಂಗಮದೇವಾ.
Transliteration Liṅgamukhadinda banda prasādavallade koṇḍenādare nim'māṇe, nim'ma pramatharāṇe! Liṅgārpitavallade udakava mukkuḷisidenādare sallenu nim'ma gaṇācārakkayya! Liṅgārpitavallade hallukaḍḍiya koṇḍare balle, munde bhava ghōranarakavembuda! Nimagettida karadalli mattondakke kaiyānenu: Āḷavariyade nuḍidenu- kaḍe muṭṭi salisadiddare taledaṇḍa! Kūḍalasaṅgamadēvā.
Manuscript
English Translation 2 If I take aught but what has come Through Liṅga 's mouth, Thy curse on me, Thy Pioneers curse! If I but rinse my mouth With any water but What has been offered unto Liṅga, I am no champion of Thy Faith! If I but put a toothpick in my mouth But what was offered unto Liṅga , I know there is in store for me A dwelling in your terrible hell! To none else I extend the hand That has been lifted in Thy worship: In ignorance of my strength I spoke: Should I not carry't to the end, Let my head pay the penalty, O Kūḍala Saṅgama Lord! Translated by: L M A Menezes, S M Angadi
Hindi Translation लिंग मुख से प्राप्त प्रसाद के सिवा और कुछ लूँ, तो तव सौगंध, तव प्रमथों की सौगंध है । लिंग को अनर्पित जल से कुल्ला करुँ, तो तव गणाचार के योग्य नहीं हूँ । लिंग को अनर्पित दतुवन का प्रयोग करुँ तो मैं जानता हूँ भविष्य में घोर नरक मिलेगा! तुम्हारे लिए उठाये हाथ और किसी के लिए नहीं उठाऊँगा । यह बिना जाने मैं ने कहा । अंत तक नहीं निभाऊँ, तो मेरा शिरच्छेद हो कूडलसंगमदेव॥ Translated by: Banakara K Gowdappa
Telugu Translation లింగ ముఖమున వచ్చు ప్రసాదమే గొందు తప్పితినా నీ యాన నీ ప్రమధుల ఆన లింగార్పితముగాని నీటిని పుక్కిలించిన చెల్లదు నీ గణాచారమునకయ్యా! లింగార్పితముగాని గడ్డిపుల్లను గొందునా కంటి ముందు భవ ఘోర నరకము కలదంచు; నీ కెత్తిన చేయి పరులకని చాచను; లోతు తెలయక పలికితి తుదిముట్ట సాగకున్న తలదండమిత్తురా దేవా! Translated by: Dr. Badala Ramaiah
Tamil Translation ஜங்கமப் பிரசாதமன்றி கொண்டேனெனின் உம்மாணை, உம் கணங்களின் மீதாணை இலிங்கத்திற்கு அர்ப்பிக்காத நீரைக் கொப்பளித்தால் உம்முடைய கண ஆசாரத்திற்குச் செல்லேன் இலிங்கத்திற்கு அர்ப்பிக்காது, பல்துலக்கும் குச்சியைக் கொண்டேன் எனின் பிறகு கொடுமையான பிறவி என்னும் நரகம் வரும் என்பதை அறிவேன் உம்மைப் பூசித்த கையினால் மற்றொன்றைத் தீண்டேன் ஐயனே எல்லையறியாது மொழிந்தேன், இறுதிவரை ஆற்றாதிருப்பின் தலைதண்டம் கூடல சங்கமதேவனே. Translated by: Smt. Kalyani Venkataraman, Chennai
Marathi Translation लिंगमुखातून आलेल्या प्रसादाविना काही घेतले तर तुमची शपथ, तुमच्या प्रमथांची शपथ! लिंगार्पित केल्याविना तोंडात पाणी घातले तर चालणार नाही तुमच्या गणाचारात देवा. लिंगार्पिताविना गवताची काही तोंडात घातली तर जाणतो पुढे घोर नरक आहे म्हणून. तुम्हाला जोडलले हात कोणापुढे पसरणार नाही. जाणल्याविना बोललो आणि पूर्ण केले नाही तर प्राणदंड, प्राणदंड कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಈ ವಚನದಲ್ಲಿ ಬಸವಣ್ಣನವರು ನಾಲ್ಕು ಪ್ರತಿಜ್ಞೆಗಳನ್ನು ಮಾಡಿ-ಅವಕ್ಕೆ ತಕ್ಕಂತೆ ನಡೆಯಲಾಗದಿದ್ದರೆ ಬದುಕಿರುವುದಿಲ್ಲವೆಂದು ದೇವರಲ್ಲಿ ನಿವೇದಿಸಿಕೊಳ್ಳುತ್ತಿರುವರು. ಪ್ರತಿಜ್ಞೆ : (1) ಲಿಂಗಪ್ರಸಾದವಲ್ಲದ ಬರೀ ಅನ್ನವನ್ನು ಉಣ್ಣುವುದಿಲ್ಲ. (2) ಲಿಂಗಾರ್ಪಿತವಲ್ಲದ ನೀರನ್ನು ಬಾಯಿಮುಕ್ಕುಳಿಸಲೂ ಬಳಸುವುದಿಲ್ಲ. (3) ಲಿಂಗಕ್ಕರ್ಪಿಸಿದ ಹಲ್ಲುಜ್ಜುವ ಕಡ್ಡಿಯನ್ನೂ ಬಾಯಲ್ಲಿಡುವುದಿಲ್ಲ. (4) ಶಿವನಿಗೆ ಜೋಡಿಸಿದ ಕೈಗಳನ್ನು ಏತಕ್ಕಾಗಲಿ ಇನ್ನೊಬ್ಬರ ಮುಂದೆ ಚಾಚುವುದಿಲ್ಲ. ವಿ : (1) ಲಿಂಗಮುಖದಿಂದ ಬಂದ ಪ್ರಸಾದವೆಂದರೆ ಯಾರ ಗಂಟನ್ನಾದರೂ ಲಿಂಗಕ್ಕರ್ಪಿಸಿದರೆ ಅದು ಲಿಂಗಪ್ರಸಾದವಾಗುವುದು –ಆ ಮೇಲೆ ಅದನ್ನು ನುಂಗಿಹಾಕಬಹುದೆಂದು ಭಾವಿಸಬಾರದು. ತನ್ನದಲ್ಲದುದೇನೂ ಲಿಂಗಾರ್ಪಿತಕ್ಕೆ ಯೋಗ್ಯವಲ್ಲ. ಅಂಥ ಅನರ್ಪಿತದಿಂದ ಲಿಂಗಪ್ರಸಾದ ನಿಷ್ಪನ್ನವಾಗುವುದಿಲ್ಲ. (2)ಗಣಾಚಾರವೆಂದರೆ ಶಿವಭಕ್ತರ ಸಮೂಹದಲ್ಲಿ ಬೆರೆಯಲು ಬೇಕಾದ ಆಚಾರಸಂಹಿತೆಯೆನ್ನಬಹುದು. ಬಸವಣ್ಣನವರದೆಂಬ ಷಟ್ಸ್ಥಲೇತರ ವಚನವೊಂದರಲ್ಲಿ ಇನ್ನೊಮ್ಮೆ ಈ ಗಣಾಚಾರವೆಂಬ ಪದ ಬಳಕೆಯಾಗಿದೆ -ನೋಡಿ ಬಸವನಾಳರ ಸಂಪಾದನೆ -131. (3) ಬಸವಣ್ಣನವರು ಮಾಡಿರುವ ಪ್ರತಿಜ್ಞೆಗಳಿಗೆ –ಅವರು ಒಬ್ಬ ಸಾಮ್ರಾಟನಲ್ಲಿ ಭಂಡಾರಿಯಾಗಿದ್ದರು ಎಂಬ ಸಂದರ್ಭದಲ್ಲಿ ವಿಶೇಷವಾದ ಅರ್ಥ ಒದಗುತ್ತದೆ. ಬಸವಣ್ಣನವರನ್ನು ನಾನಾ ವೇಷದಲ್ಲಿ ಸಂಪರ್ಕಿಸುತ್ತಿದ್ದ ಜನ ದುರಾಶಾವಂತರಾಗಿ –ಆ ತಮ್ಮ ಆಶೆಗಳನ್ನು ಈಡೇರಿಸಿಕೊಳ್ಳಲಿಕ್ಕಾಗಿಯೋ, ತಮ್ಮ ಪಾಪಗಳನ್ನು ಮರೆಸಿಕೊಳ್ಳುವುದಕ್ಕಾಗಿಯೋ ಬರುತ್ತಿದ್ದರಾದರೆ –ಅವರಿಗೂ ಒಂದು ಎಚ್ಚರಿಕೆ ದಿಗ್ದರ್ಶನ ಮತ್ತು ದೀಕ್ಷೆ ಈ ವಚನದಲ್ಲಿ ಅನುಕ್ತವಾಗಿಯೇ ಅನುರಣಿಸುತ್ತಿರುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು