ಪ್ರಸಾದಿಯ ಪ್ರಾಣಲಿಂಗಿಸ್ಥಲ - ಪ್ರಸಾದ
ಮೌನದಲುಂಬುದು ಆಚಾರವಲ್ಲ. ಲಿಂಗಾರ್ಪಿತವ ಮಾಡಿದ ಬಳಿಕ,
ತುತ್ತಿಗೊಮ್ಮೆ 'ಶಿವಶರಣೆ'ನ್ನುತ್ತಿರಬೇಕು.
ಕರಣವೃತ್ತಿಗಳಡಗುವುವು, ಕೂಡಲಸಂಗನ ನೆನೆಯುತ್ತ ಉಂಡರೆ.
Transliteration Maunadalumbudu ācāravalla. Liṅgārpitava māḍida baḷika,
tuttigom'me'śivaśaraṇe'nnuttirabēku.
Karaṇavr̥ttigaḷaḍaguvudu, kūḍalasaṅgana neneyutta uṇḍare.
Manuscript
English Translation 2 To eat in silence is no discipline:
Once you have made an offering
To Liṅga, you must say,
At every morsel, 'To Śiva I bow'.
The body's attributes would be shed
If you would eat remembering
Kūḍala Saṅga..
Translated by: L M A Menezes, S M Angadi
Hindi Translation मौन में भोजन करना आचार नहीं
लिंगार्पित करने के पश्चात प्रत्येक ग्रास के लिए
कहना चाहिए, ‘शिव को प्रणाम’
कूडलसंगमदेव का स्मरण करते भोजन करो,
तो करण-वृत्तियाँ शांत होंगी॥
Translated by: Banakara K Gowdappa
Telugu Translation మౌనముగా భుజించు టాచారముగాదు
లింగార్పితమైన వెనుక కడికడికి శివశివా!
శరణు శరణను చుండవలె; అంతఃకరణ ప్రవృత్తులు
తొలగునయ్యా సంగని దలచుచూ భుజియింప!
Translated by: Dr. Badala Ramaiah
Tamil Translation மௌனமாக உண்பது நெறியன்று
இலிங்கத்திற்கு அர்ப்பித்தபின்
ஒவ்வொரு கவளத்திற்கும் சிவனே
தஞ்சம் எனக் கூற வேண்டும்
கூடல சங்கம தேவனை நினைத்து உண்டால்
புலன்களின் செயல்கள் அடங்கும்.
Translated by: Smt. Kalyani Venkataraman, Chennai
Marathi Translation
मौन राहून भोजन करणे आचार नाही.
लिंगार्पित केल्यानंतर प्रत्येक घासाला शिवशरण म्हणाले पाहिजे.
कर्मेंद्रिय प्रवृत्ती नष्ट होतील,
कूडलसंगाचे स्मरण करीत जेवल्याने.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಯಾವಾಗಲೂ ದೇವರ ಧ್ಯಾನದಲ್ಲಿರು
ಆಹಾರ ಕಾಯಕದ (ದುಡಿಮೆಯ) ಪ್ರತಿಫಲ. ಇಲ್ಲಿ ನಾನು ದುಡಿದು ತಂದ ಆಹಾರವೆಂದು ಭಕ್ತನಲ್ಲಿ ಅಹಂಕಾರದಿಂದ ಬೀಜವು ಮೊಳಕೆಯೊಡೆಯಲು ಸಾಧ್ಯ. ಆದ್ದರಿಂದಲೇ ಅಣ್ಣ ಇದನ್ನು ಭಕ್ತನು ಮಾಡಿದ ಕಾಯಕದ ಪ್ರತಿಫಲ ರೂಪದಲ್ಲಿ ದೇವರು ನೀಡುವ ಪ್ರಸಾದವೆಂದು ಗಣಿಸಿದ್ದಾನೆ. ಇಲ್ಲಿ ನಾನು ದುಡಿದು ತಂದೆನೆನ್ನುವುದಕ್ಕೆ ಅವಕಾಶವೇ ಇಲ್ಲ. ಎಲ್ಲವೂ ಕರುಣಿಸಿದುದೇ. ಈ ಸಿದ್ಧಾಂತವನ್ನು ಪ್ರಯೋಗದಲ್ಲಿ ತರಲು ಅಣ್ಣ, ಲಿಂಗಕ್ಕೆ ಅರ್ಪಿಸಿ ಊಟ ಮಾಡಬೇಕೆನ್ನುತ್ತಾನೆ. ಲಿಂಗಕ್ಕೆ ಅರ್ಪಿಸಿದಾಗ ತನ್ನದಾಗಿ ಏನೂ ಉಳಿಯಲಿಲ್ಲ, ಅರ್ಪಿಸಿದ ಮೇಲೆ ಭುಂಜಿಸಿದಾಗ ಅದು ತಾನು ದುಡಿದುದನ್ನು ಉಂಡಂತಾಗಲಿಲ್ಲ; ದೇವರು ಪ್ರಸಾದ ರೂಪವಾಗಿ ಕರುಣಿಸಿದುದನ್ನು ಉಂಡಂತಾಯಿತು ಇದನ್ನೇ ಅಣ್ಣ ಮತ್ತೊಂದೆಡೆ 'ಲಿಂಗಮುಖದಿಂದ ಬಂದ ಪ್ರಸಾದ' ಎನ್ನುತ್ತಾನೆ.
ಯಾರಾದರೂ ಕಷ್ಟದಲ್ಲಿ ನೆರವಾದರೆ ಉಪಕೃತನಾದ ವ್ಯಕ್ತಿ ಅವರನ್ನು ಆಗಾಗ್ಯೆ ಸ್ಮರಿಸುವುದನ್ನೂ ಅವರ ಗುಣಗಾನ ಮಾಡುವುದನ್ನೂ ನಾವು ಲೌಕಿಕ ಜೀವನದಲ್ಲಿ ಕಾಣುತ್ತೇವೆ. ಮೇಲೆ ತಿಳಿಸಿರುವಂತೆ ಪ್ರತಿಯೊಂದು ತುತ್ತೂ ದೇವರ ಪ್ರಸಾದ. ಇಂತಿರುವಾಗ ನಾವು ದೇವರಿಂದ ಉಪಕೃತರಾದಂತೆಯೇ. ಅಂದ ಮೇಲೆ ನಾವು ಅವನಿಗೆ ಕೃತಜ್ಞರಾಗಿರಬೇಕಲ್ಲವೇ? ಆದ್ದರಿಂದಲೇ ಬಸವಣ್ಣ "ತುತ್ತಿಗೊಮ್ಮೆ 'ಶಿವಶರಣೆ'ನ್ನುತ್ತಿರಬೇಕು....." ಎನ್ನುತ್ತಾನೆ. ಪ್ರತಿಯೊಂದು ತುತ್ತನ್ನು ಬಾಯಲ್ಲಿಡುವಾಗಲೂ ದೇವರನ್ನು ಸ್ಮರಿಸುತ್ತಿರಬೇಕು. ಅವನನ್ನು ನೆನೆಯುತ್ತಾ ಊಟ ಮಾಡಬೇಕು. ಇದು ನೀನು ಕರುಣಿಸಿದ ಪ್ರಸಾದ ಎನ್ನುತ್ತಿರಬೇಕು. ಆಗಲೇ ಆಹಾರ ಆಹಾರವಾಗಿ ಉಳಿಯದೆ ಪ್ರಸಾದವಾಗಿ ಮೈಯ ಕಣಕಣದಲ್ಲಿ ಸೇರುವುದು. ಆಹಾರದಿಂದ ಪುಷ್ಟಿಗೊಂಡ ಇಂದ್ರಿಯಗಳು ವಿಕಾರಕ್ಕೊಳಗಾಗಬಹುದು. ಆದರೇ ಅದೇ ಆಹಾರವು ಪ್ರಸಾದವಾದಾಗ ಅವು ವಿಕಾರಕ್ಕೊಳಗಾಗಲಾರವು (ಕರಣವೃತ್ತಿಗಳಡಗುವುವು).
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.