•  
  •  
  •  
  •  
Index   ವಚನ - 788    Search  
 
ಪ್ರಸಾದಿಯ ಪ್ರಾಣಲಿಂಗಿಸ್ಥಲ - ಭಕ್ತ
ಕಾಯದ ಕರಣದ ಕೈಯಲ್ಲಿ ಪದಾರ್ಥವ ಹಿಡಿವಲ್ಲಿ ನಿಮಗೆ ಕೊಡುವ ಭರದ ಭೀತಿಯಿಂದಾನರಿಯದಿಪ್ಪೆನಾಗಿ, ಎನ್ನ ನೀನರಿದು ಸಲಹುತ್ತಿಪ್ಪೆಯಯ್ಯಾ. ಕೂಡಲಸಂಗಮದೇವಾ.
Transliteration Kāyada karaṇada kaiyalli padārthava hiḍivalli nimage koḍuva bharada bhītiyindānariyadippenāgi, enna nīnaridu salahuttippeyayya. kūḍalasaṅgamadēvā.
Manuscript
English Translation 2 Whenever I hold a thing In my body's sensual hand As I am one who know not, From fear arising from my eagerness, To give to you, you, knowing me, Protect me, Lord Kūḍala Saṅgama! Translated by: L M A Menezes, S M Angadi
Hindi Translation काय-करण-कर से वस्तु ग्रहण कर तुम्हें आर्पित करने की शीघ्रता में भय से भूलूँ, तो मुझे जानकर मेरी रक्षा करें। कूडलसंगमदेव॥ Translated by: Banakara K Gowdappa
Telugu Translation దేహేంద్రియ కరమున పదార్ధము పట్టినపుడు ;óతిచే నీకు సమర్పించుట నే నెరుగకున్న నన్ను దెలిసి నీవు రక్షింతువు కదయ్యా సంగయ్యా. Translated by: Dr. Badala Ramaiah
Tamil Translation உடல், புலன்களுடன், கையில் பொருட்களைப் பிடித்திருக்கையில் இதனை இழப்போம் என்னும் அச்சமானது மனத்தி லிருப்பினும் என்னை நீ அறிந்து அருளிக் கொண்டுள்ளாய், கூடல சங்கம தேவனே. Translated by: Smt. Kalyani Venkataraman, Chennai
Marathi Translation काया करणांच्या हाताने पदार्थ घेऊन तुम्हाला अर्पण करण्याच्या गडबडीत तन्मय होतो तुमच्यामध्ये मला सामावून रक्षण करावे कूडलसंगमदेवा Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಹಿಡಿದ ಕೈ ಮುಷ್ಟಿಬಿಚ್ಚಿ ಕೊಡಲೊಲ್ಲದು -ಹೇಳಿಕೇಳಿ ಆ ಕೈಯಿ ದೇಹಗುಣದ ಒಂದು ಗೊಂಚಲೇ ಆಗಿದೆಯಾಗಿ –ಅದು ಹಿಡಿದ ಪದಾರ್ಥವನ್ನು ‘ಶಿವಾರ್ಪಿತ’ ಎಂದು ಕೊಡೋಣವೆಂದಾಗ –ಕೊಟ್ಟದ್ದು ನಷ್ಟವಾಗುತ್ತದೆಯೆಂಬ ಭೀತಿ ನನ್ನನ್ನು ಆವರಿಸುತ್ತದೆ. ನಾನು ದಿಗ್ಭ್ರಾಂತನಾಗುತ್ತೇನೆ. ನನ್ನನ್ನು ಈ ಪಿಶುನಸ್ಥಿತಿಗೆ ದೂಡಿದ್ದು ಈ ದೇಹವೇ ಹೊರತು ಅನ್ಯವಲ್ಲ. ಈ ನನ್ನ ಲೋಭವನ್ನು ಅರಿತೂ ನೀನು ನನ್ನನ್ನು ಕೃಪೆಯಿಂದ ಕಾಪಾಡುತ್ತಲೇ ಇರುವೆ-ಎನ್ನುತ್ತಿರುವರು ಕೃಪಾಕರ ಶಿವನನ್ನು ಕುರಿತು ಬಸವಣ್ಣನವರು. ದೇಹವಿಲ್ಲದ ಶಿವನು ಪರೀಕ್ಷಕನಾಗುವುದು ಸುಲಭ-ಆದರೆ ದೇಹವಿರುವ ಭಕ್ತನು ಆ ಪರೀಕ್ಷೆಗೊಳಗಾಗುವುದು ಸುಲಭವಲ್ಲ. ಈ ಸಂಬಂಧವಾಗಿ ದೇವರ ದಾಸಿಮಯ್ಯನ ವಚನವೊಂದನ್ನು ನೋಡಬಹುದು : “ಒಡಲುಗೊಂಡವ ಹಸಿವ, ಒಡಲುಗೊಂಡವ ಹುಸಿವ ; ಒಡಲುಗೊಂಡವನೆಂದು ನೀನೆನ್ನ ಜಡಿದು ನುಡಿಯದಿರಾ ! ನೀನು ಎನ್ನಂತೊಮ್ಮೆ ಒಡಲುಗೊಂಡು ನೋಡಾ ರಾಮನಾಥ” (ನನ್ನ ದೇವರ ದಾಸಿಮಯ್ಯನ ವಚನಗಳು 100). ಇದನ್ನು ಬಲ್ಲ ಶಿವನು ಭಕ್ತನ ಅಲ್ಪಸ್ವಲ್ಪ ಕುಂದುಕೊರತೆಗಳನ್ನು ಗಣನೆಗೆ ತಾರದೆ ಅವನ ಮೇಲೆ ತನ್ನ ಕೃಪಾಕಟಾಕ್ಷವನ್ನು ನಟ್ಟೇ ಇರುತ್ತಾನೆ. (ಭಕ್ತ)ಜೀವನ ಮಹಿಮೆ ಗೊತ್ತಾಗುವುದೂ ಅವನು ದೇಹಸಹಿತವಾಗಿದ್ದಾಗಲೇ -ನದಿಯೊಂದರ ಪಾತ್ರಬದ್ಧ ಪ್ರವಾಹದಂತೆ. ಸಮುದ್ರ ಸೇರಿದ ಮೇಲೆ ಎಲ್ಲವೂ ಅಪರಂಪಾರವೇ !

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು