•  
  •  
  •  
  •  
Index   ವಚನ - 789    Search  
 
ಪ್ರಸಾದಿಯ ಪ್ರಾಣಲಿಂಗಿಸ್ಥಲ - ಪ್ರಸಾದ
ಆಳಿಕಾರನೆನಗೊಬ್ಬ ಮಗ ಹುಟ್ಟಿದನೆಂದು ಆಳಿಕೆಯ ಕೆಡಲೀಸದೆ ನಡೆಸುವ ನಮ್ಮಯ್ಯ. ಪಂಚಭೂತ ಕಾಯವ ಭವಿಯೆಂದೆನಲೀಯದೆ ಪ್ರಸಾದಕಾಯ ಮಾಡಿ ಸಲಹುವ ನಮ್ಮಯ್ಯ. ಆಳಿ ಸಾವಲ್ಲಿ ಅವಧಾನಿಯಾಗಿರ್ದರೆ ಆಳ್ದನು ನಮ್ಮ ಕೂಡಲಸಂಗಮದೇವ.
Transliteration Āḷikāranenagobba maga huṭṭidanendu āḷikeya keḍalīsade naḍesuva nam'mayya. Pan̄cabhūtakāyava bhāviyendenalīyade prasādakāya māḍi salahuva nam'mayya. Āḷi sāvalli avadhāniyāgirdare āḷdanu nam'ma kūḍalasaṅgamadēva.
Manuscript
English Translation 2 Because his own begotten son Is an imposter, my Father makes All things run smooth, nor leaves The management to fail By disallowing the charge of worldliness To body fashioned of the five elements, Our Lord protects me when he turns My body to a heavenly gift. If a servant is careful only how to eat, Our Lord Kūḍala Saṅgama Himself shall rule. Translated by: L M A Menezes, S M Angadi
Hindi Translation मेरा एक पाखंडी पुत्र पैदा हुआ समझ, मेरे स्वामी शासन को नष्ट होने न देकर स्वयं चलाते हैं । पंचभूतात्मक-काय को ‘भवि’ कहलाने न देकर उसे प्रसाद-काय बनाकर मेरे स्वामी रक्षा करते हैं सेवक प्रसाद सेवन में सावधान रहे, तो मम कूडलसंगमदेव स्वयं शासन करते हैं॥ Translated by: Banakara K Gowdappa
Telugu Translation నాకొక టక్కరి కొడుకు పుట్టెనని; టక్కరి సేయక నన్ను నడిపింపుమయ్యా; పంచ భూతాత్మక కాయమును భవియనక ప్రసాద కాయముచేసి రక్షింపుమయ్యా! మోసమడిగెడి వేళ అవధానిjైు యున్న పాలించు మా కూడల సంగమ దేవుడు. Translated by: Dr. Badala Ramaiah
Tamil Translation வஞ்சகன் ஒருவன் மகனாகப் பிறந்தானென தந்தை வம்சத்தைக் கெடுவதற்கு விடுவதில்லை ஐம்பூதங்களாலாகிய இவ்வுடலை, நெறியற்று இருப்பதற்கு விடாது, பிரசாத உடலாகச் செய்து அருள்வான் நம் ஐயன் வஞ்சகம் அகன்ற பிறகு, விழிப்புணர்வோடு இருப்பின் கூடல சங்கம தேவன் அருள்வான் Translated by: Smt. Kalyani Venkataraman, Chennai
Marathi Translation सेवकाला एक पुत्र जन्मला म्हणून त्याच्या सेवेत कमी पडू न देता सेवा करीन देवा. पंचमहाभूतदेही भवी समजून न घेता प्रसाददेही करुन सांभाळावे माझ्या देवा. अंत समयापर्यंत सेवेत जागृत राहिला तर रक्षण करील आमचा कूडलसंगमदेव. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಪ್ರಿಯತಮೆಯ ಸಖಿಯಲ್ಲಿ ತನಗೆ ಹುಟ್ಟಿದ ಒಬ್ಬ ಮಗನ ಕಾರಣದಿಂದಾಗಿಯೇ ಆ ಸಖಿಯನ್ನು ಯಜಮಾನನು ಅಭಿಮಾನದಿಂದಲೇ ಉದ್ಧರಿಸುವನೆಂಬ ಒಂದು ಲೌಕಿಕ ಚಿತ್ರ ಈ ವಚನದ ಹಿನ್ನೆಲೆಯಾಗಿದೆ. ಇಲ್ಲಿ ಯಜಮಾನನು ಶಿವ, ಅವನ ಪ್ರಿಯತಮೆ ಮಾಯೆ, ಅವಳ ಸಖಿ (ಆಳಿ)ಈ ದೇಹ, ಅದರಲ್ಲಿ ಹುಟ್ಟಿದ ಮಗನು ಭಕ್ತಜೀವ(ಆಳಿಕಾರ)ನು. ಮಾಯೆಗೆ ಯಜಮಾನನಾದ ಶಿವನಿಗೆ–ಆ ಮಾಯಾಸಂಬಂಧವಾದ ಈ ದೇಹವು ಆಳಿ(ಸಖಿ)ಯಾಗುವಳೆಂದೂ, ಈ ಆಳಿಯಲ್ಲಿ ಶಿವಾಂಶಸಂಕ್ರಮಣದಿಂದ ಹುಟ್ಟಿದ ಜೀವನು ಶಿವನಿಗೆ ಮಗ(ಆಳಿಕಾರ)ನಾಗುವನೆಂದೂ ಈ ವಚನದಲ್ಲಿ ಸಂಭಾವಿಸಿರುವುದು ಲೌಕಿಕ ವಾವೆಯ ಪ್ರಕಾರ ಸರಿಯಾಗಿಯೇ ಇದೆ. ಶಿವನು ಈ ತುಂಟಪುತ್ರ(ಜೀವ)ನ ತಾಯಾದ ಈ ದೇಹವನ್ನು ಕೆಡಲೀಯದೆ ತನ್ನ ಪ್ರತಿನಿಧಿಗಳಾದ ಗುರುಲಿಂಗಜಂಗಮಗಳ ಪ್ರಸಾದದಿಂದ ಪರಿಶುದ್ಧವನ್ನಾಗಿ ಮಾಡಿದ್ಧು –ಆ ಶಿವನ ರಕ್ಷಕಗುಣವನ್ನೇ ತೋರುವುದು. ದೇಹವೆಂದರೆ ಮಾಂಸಮೂಳೆಗಳಷ್ಟೇ ಅಲ್ಲ –ಕರ್ಮೇಂದ್ರಿಯ ಜ್ಞಾನೇಂದ್ರಿಯ ಅಂತಃಕರಣಚತುಷ್ಟಯ ಮುಂತಾದ ದೈಹಿಕ ಮಾನಸಿಕ ಆಧ್ಯಾತ್ಮಿಕ ತ್ರಿಕೂಟ ದೇವಾಲಯ. ಇಂಥ ದೇಹವು ಮರಣಪರ್ಯಂತ ಪ್ರಸಾದ ನಿಷ್ಠೆಯಿಂದ ಇರುವುದಾದರೆ ಅದರ ಯೋಗಕ್ಷೇಮವನ್ನು ನಿರ್ವಹಿಸುವವನು ಶಿವನೆಂಬುದು ಈ ವಚನದ ಅಭಿಪ್ರಾಯ. ವಿ : ಪ್ರಕೃತಿ (ಅಥವಾ ಮಾಯೆ)ಯಿಂದ ಕರ್ಮೇಂದ್ರಿಯ 5, ಜ್ಞಾನೇಂದ್ರಿಯ 5, ಪ್ರಾಣವಾಯುಗಳು 5, ಭೂತಗಳು 5, ಅಂತಃಕರಣಗಳು 4 – ಈ ಚತುರ್ವಿಂಶತಿ (24) ತತ್ತ್ವಗಳಿಂದ ಆದುದೇ ಈ ದೇಹ. ಐದನೇ ಅಂತಃಕರಣವಾದ “ಜ್ಞಾನಕರಣವೊಂದೆ ಅರಿವು ರೂಪವಾದುದಾಗಿ ಆತ್ಮಚೈತನ್ಯ ಪಡೆದು ಜೀವವೆನಿಸುವುದು.” ಹೀಗೆ ಪಂಚವಿಂಶತಿ ತತ್ತ್ವಾವಕವಾದವರು ನಾವು ನೀವುಗಳೆಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು