•  
  •  
  •  
  •  
Index   ವಚನ - 790    Search  
 
ಪ್ರಸಾದಿಯ ಪ್ರಾಣಲಿಂಗಿಸ್ಥಲ - ಲಿಂಗಜಂಗಮ
ಶಿವಾಚಾರವೆಂಬುದೊಂದು ಬಾಳ ಬಾಯ ಧಾರೆ: ಲಿಂಗ ಮೆಚ್ಚಬೇಕು, ಜಂಗಮ ಮೆಚ್ಚಬೇಕು, ಪ್ರಸಾದ ಮೆಚ್ಚಿ ತನ್ನಲ್ಲಿ ಸ್ವಾಯತವಾಗಿರಬೇಕು! ಬಿಚ್ಚಿ ಬೇರಾದರೆ ಮೆಚ್ಚುವನೆ ನಮ್ಮ ಕೂಡಲಸಂಗಮದೇವ?
Transliteration Śivācāravembudondu bāḷabāya dhāre: Liṅga meccabēku, jaṅgama meccabēku, prasāda mecci tannalli svāyattavāgi! Bicci bērādare meccuvane nam'ma kūḍalasaṅgamadēva?
Manuscript
English Translation 2 What is called Śivācāra is A razor's edge: you must PleaseLiṅga , please Jaṅgama, And, having pleased Prasāda, you must Possess It in yourself! Does our Lord Kūḍala Saṅgama approve If you break loose? Translated by: L M A Menezes, S M Angadi
Hindi Translation शिवाचार खङ्ग् धारा है, लिंग को प्रसन्न करना है । जंगम को प्रसन्न करना है । प्रसाद को प्रसन्न कर तुमको अपने में स्वायत् करना है। खुलकर पृथक हो, तो मम कूडलसंगमदेव प्रसन्न होंगे? Translated by: Banakara K Gowdappa
Telugu Translation శివాచారమన్నది అసిధారా వ్రతము లింగము మెచ్చవలె జంగముడు మెచ్చవలే ప్రసాది మెచ్చి తనయందు స్వాయత్తమై యుండవలె; విచ్చి వేఱైనచో మెచ్చునే కూడల సంగమదేవుడు? Translated by: Dr. Badala Ramaiah
Tamil Translation சிவநெறி என்பது வாளின் முனையனையது இலிங்கம், ஜங்கமர் மெச்ச வேண்டும் பிரசாதம் தன்னுள்ளே இணைதல் வேண்டும் இணைதலின்றி பிய்ந்து வேறு ஆயின் நம் கூடல சங்கமதேவன் மெச்சுவனோ? Translated by: Smt. Kalyani Venkataraman, Chennai
Marathi Translation शिवाचार ही एक धारदार तलवार आहे. लिंग-जंगम-प्रसादाला प्रसन्न करुन, या तिघांना आपल्यात समरस केले पाहिजे. त्यांना वेगळे केले तर प्रसन्न होईल कूडलसंगमदेव ? Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶಿವಾಚಾರವೆಂದರೆ ಬಸವಣ್ಣನವರ ಅಭಿಪ್ರಾಯದಲ್ಲಿ–(ಸ್ಥಾವರ)ಅಂಗದಿಂದ ಲಿಂಗ(ಭಾವ) ಅಗಲದಿರಬೇಕು (ವಚನ 632). ಲಿಂಗದ ಚರರೂಪವೇ ಜಂಗಮವೆಂಬ, ಆ ಜಂಗಮ ಒಡ್ಡಿದ ಎಲ್ಲ ಕಠಿಣ ಪರೀಕ್ಷೆಗಳನ್ನೂ ಸ್ವಾಗತಿಸಿ ಅಲ್ಲಿ ತೇರ್ಗಡೆಯಾಗುವೆನೆಂಬ ಕ್ರಿಯಾಶುದ್ಧಿಯಿರಬೇಕು (ವಚನ 430, 950), ಆಡಂಬರವಿಲ್ಲದ ಋಜುವಾಗಿರಬೇಕು (ವಚನ 820), ಅರಿಷಡ್ವರ್ಗವನ್ನೂ ಹಸಿವು ತೃಷೆ ವಿಷಯವನ್ನೂ ಗೆದ್ದಿರಬೇಕು. ಇಂಥ ಶಿವಜ್ಞಾನಿಯಾದವನ ಆಚರಣೆಗಳೆಲ್ಲವೂ ಶಿವಾಚಾರವೆನಿಸುವವು (ವಚನ 140, 657, 767) ಇಂಥ ಶಿವಾಚಾರದಲ್ಲಿ ತೊಡಗುವುದು ಬಾಯಿಮಾತಲ್ಲ–ಖಡ್ಗದ ಬಾಯಿಧಾರೆಯ ಮೇಲೆ ನಡೆಯುವಂಥ ದಿವ್ಯ ಸಾಹಸ ; ಲಿಂಗವನ್ನು ಮೆಚ್ಚಿಸಬೇಕು, ಜಂಗಮವನ್ನು ಮೆಚ್ಚಿಸಬೇಕು–ಈ ಲೋಕ ಆ ಲೋಕವೆರಡಕ್ಕೂ ಶಿವಸೇತು ಕಟ್ಟಬೇಕು ; ಪರಿಣಾಮವಾಗಿ ಪ್ರಸಾದಗುಣ ತನ್ನೆದೆಯಲ್ಲಿ ಅಪಾರವಾಗಿ ನಿಲ್ಲಬೇಕು. ಇಲ್ಲದಿದ್ದರೆ ಅದು ಶಿವಾಚಾರವಲ್ಲ, ಅವನು ಶಿವಭಕ್ತನಲ್ಲ, ಅವನಿಗೆ ಶಿವ ಮೆಚ್ಚುವುದಿಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು