•  
  •  
  •  
  •  
Index   ವಚನ - 792    Search  
 
ಪ್ರಸಾದಿಯ ಶರಣಸ್ಥಲ - ಶರಣರು
ಆವಾವ ಭಾವದಲ್ಲಿ ಶಿವನ ನಂಬಿದ ಶರಣರು ಎಂತಿದ್ದರೇನಯ್ಯಾ? ಆವಾವ ಭಾವದಲ್ಲಿ ಶಿವನ ನಂಬಿದ ಮಹಿಮರು ಎಂತಿದ್ದರೇನಯ್ಯಾ? ಸುಚರಿತ್ರರು ಎಂತಿದ್ದರೇನಯ್ಯಾ? ಕೂಡಲ ಸಂಗನ ಶರಣರು, ರಸದ ವಾರಿಧಿಗಳು. ಎಂತಿರ್ದರೇನಯ್ಯಾ.
Transliteration Āvāva bhāvadalli śivana nambida śaraṇaru entiddarēnayyā? Āvāva bhāvadalli śivana nambida mahimaru entiddarēnayyā? Sucaritraru entiddarēnayyā? Kūḍala saṅgana śaraṇaru, ​​rasadavāridhigaḷu. Entirdarēnayyā.
Manuscript
English Translation 2 What matters what they be, The Śaraṇās who believe in Śiva In whatsoever sense? What matters what they be, The great ones who believe in Śiva In whatsoever sense? What matters what they be, The men who lead a virtuous life? What matters what it be, The alchemic stone That can transmute the baser ore? What matters what they be, Those virtue's oceans, Kūḍala Saṅga's Śaraṇās? Translated by: L M A Menezes, S M Angadi
Hindi Translation अन्यान्य भाव में शिव पर श्रद्धा रखनेवाले शरण कैसे भी हों तो क्या? अन्यान्य भाव में शिव पर श्रद्धा महिमांवान कैसे भी हों तो क्या? चरित्रवान कैसे भी हों तो क्या? लोहे को बदलनेवाला पारस कैसा भी हो तो क्या? कूडलसंगमदेव के शरण रस-सागर हैं, वे कैसे भी हों, तो क्या? Translated by: Banakara K Gowdappa
Tamil Translation எந்த எந்த உணர்வொடு சிவனை நம்பிய அடியார் எவ்விதம் இருந்தால் என்ன? எந்த எந்த உணர்வொடு சிவனை நம்பிய மேன்மையோர் எவ்விதம் இருந்தால் என்ன? உயர்ந்த வரலாற்றை உடையோர் எவ்விதம் இருந்தால் என்ன? இரும்பைப் பொன்னாக்கிய பரிசவேதி எவ்விதம் இருந்தால் என்ன? கூடல சங்கனின் அடியார் அமுதக் கடல்கள், எவ்விதம் இருந்தாலென்ன? Translated by: Smt. Kalyani Venkataraman, Chennai
Marathi Translation कोणत्याही भावात शिवावर अढळ श्रध्दा ठेवणारे शरण कसलेही असले तरी काय देवा? कोणत्याही भावात शिवावर अढळ श्रध्दा ठेवणारे महिम कसलेही असले तरी काय देवा ? सुचरित्र असणारे कसलेही असले तरी काय देवा ? लोहगुण नष्ट करणारा परिस कसाही असला तरी काय? कूडलसंगमदेवाचे शरण अमृत सागर कसलेही असले तरी काय देवा ? Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶರಣರ ನಂಬಿಕೆ ಮತ್ತು ಚಾರಿತ್ರ ಅಸದೃಶವಾದುದು. ಅವರ ನಂಬಿಕೆ ಶಿವನನ್ನೇ ನಂಬಿರುವುದು, ಅವರ ಚಾರಿತ್ರ ಶಿವಚಾರಿತ್ರವೇ ಆಗಿರುವುದು. ಆದುದರಿಂದಲೇ ಅವರನ್ನು ಮುಟ್ಟಿದರೂ ಸಾಕು –ಮುಟ್ಟಿದವರು ಚಿನ್ಮಯವಾಗುತ್ತಾರೆ. ಶರಣರು ಸಜೀವ ಸ್ಪರ್ಶಮಣಿಗಳು. ಅಂಥವರ ಸುದ್ದಿಯನ್ನು ದೂರದಿಂದ ಕೇಳಿ ಹಗುರವಾಗಿ ಮಾತನಾಡಿ ವಿಕಾರವಾಗಿ ಭಾವಿಸುವುದು. ಮರ್ಯಾದೆಯಲ್ಲ. ಅವರನ್ನು ಅರಸಿ ಕಾಣಬೇಕು, ಆನತರಾಗಿ ಅವರ ಪಾದಮುಟ್ಟಿ ನಮಸ್ಕರಿಸಬೇಕು–ಆಗಲೇ ಗೊತ್ತಾಗುವುದು ಅವರು ಸೋಕಿದ್ದು ಚಿನ್ನವಾಗುವುದೆಂದು. ಅವರ ಸ್ಪರ್ಶದಿಂದ ನಮ್ಮಲ್ಲಿರುವ ಮಾನವ ಅವಲೋಹವೆಲ್ಲ ನೀಗಿ ನಾವು ಚಿನ್ಮಯವಾಗಿ ಪರಿವರ್ತನೆಗೊಳ್ಳುವೆವು. ಆದರೆ ಅವರು ವಜ್ರವೈಢೂರ್ಯಗಳಂತೆ ಕಣ್ಣನ್ನು ಕೋರೈಸುತ್ತಿರುವುದಿಲ್ಲ –ಕಲ್ಲುಗಳ ನಡುವೆ ಕಲ್ಲಂತೆ. ಹತ್ತರಲ್ಲಿ ಹನ್ನೊಂದರಂತಿರುವರು. ರಸಸಿದ್ಧರ ಮಹಿಮೆ ಅವರು ಹೊರಗಿಂದ ತಯಾರಿಸಿದ ರಸದಿಂದ ಉಂಟಾದರೆ-ಶರಣ ಶಿವಸಿದ್ಧರ ಮಹಿಮೆ ಅವರು ಒಳಗಿಂದ ಸಾಧಿಸಿದ ಸಚ್ಚಾರಿತ್ರದಿಂದ ಉಂಟಾಗಿ–ಅವರು ಸ್ವತಃ ರಸೋ ವೈಸಃರು, ರಸವಾರಿಧಿಗಳು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು