•  
  •  
  •  
  •  
Index   ವಚನ - 793    Search  
 
ಪ್ರಸಾದಿಯ ಶರಣಸ್ಥಲ - ಶರಣರು
ಉರಿ ತಾಗಿದ ಮೃಗವು ಒಂದಡಿಯನಿಡುವುದೆ, ಅಯ್ಯಾ? ತನುವ ತಾಗಿದ ಸುಖವ ಅಗಲುವುದೆ? ಕೂಡಲಸಂಗನ ಶರಣರ ಅನುಭಾವವರಿದವರ ಮರಳಿ ಮರ್ತ್ಯರೆನ್ನಬಹುದೆ?
Transliteration Uri tāgida mr̥gavu ondaḍiyaniḍuvudu, ayyā? Tanuva tāgida sukhava agalavude? Kūḍalasaṅgana śaraṇara anubhāvavaridavara maraḷi martyarennabahude?
Manuscript
English Translation 2 Does a beast fatally wounded Put forth a single step, good Sir? Does joy that once has touched your body Depart? Can those Who have experience of Kūḍala Saṅga's Śaraṇās Be mortals again? Translated by: L M A Menezes, S M Angadi
Hindi Translation फंदे में पडा मृग एक डग भी जाता है? काय-स्पर्शी सुख छूट सकता है? कूडलसंगमेश के अनुभावियों को पुनः मत्र्य कह सकते हैं? Translated by: Banakara K Gowdappa
Telugu Translation వలకు చిక్కిన మృగమొక అడుగు వేయునే అయ్యా? తనువు దాకిన సుఖము విడివడునే? సంగని శరణుల అనుభావము చవిచూచినవారిని మర్త్యులనవచ్చునే? Translated by: Dr. Badala Ramaiah
Tamil Translation நன்கு தாக்கப்பட்ட விலங்கு ஒரு அடியை எடுத்து வைக்குமோ? உடலைத் தாக்கிய இன்பம் அகலுமோ? கூடல சங்கனின் அடியாரை உணர்ந்தோரை பிறகு பூவுலகினர் எனக் கூறவியலுமோ? Translated by: Smt. Kalyani Venkataraman, Chennai
Marathi Translation बाणाने मृत झालेला मृग एक पाऊल तरी चालेल? देहाने भोगलेल्या सुखाची स्मृती नष्ट होईल? कूडलसंगाच्या शरणांचा अनुभव जाणलेल्यांना मर्त्य म्हणता येईल ? Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಎದೆಗೆ ಬಾಣ ನಟ್ಟ ಜಿಂಕೆ ಆ ಬಾಣದಲ್ಲಿಯೇ ಲೀನವಾಗುವುದು, ತನುವನ್ನು ಜುಮ್ಮೆನಿಸಿದ ಸುಖದಲ್ಲಿಯೇ ಆ ತನು ಲೀನವಾಗುವುದು -ಹಾಗೆಯೇ-ಶಿವಶರಣರ ಅನುಭಾವವನ್ನು ಆಲಿಸಿದವರು ಆ ಅನುಭಾವದಲ್ಲಿಯೇ ಲೀನವಾಗುವರು–ಅವರೆಂದಿಗೂ ಮರಳಿ ಮಾಮೂಲೀ ಮರ್ತ್ಯರಾಗುವುದಿಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು