ಪ್ರಸಾದಿಯ ಶರಣಸ್ಥಲ - ಅನುಭಾವ
ನಿಮ್ಮ ಶ್ರೀಪಾದವ ಮುಟ್ಟಿ ಎನ್ನ ಕರ್ಮ ಹರಿಯಿತ್ತು.
ನಿಮ್ಮ ಪ್ರಸಾದದಿಂದ ನಾನು ಭವಗೆಟ್ಟೆ , ನೋಡಯ್ಯಾ !
ಮನ ಪರುಷ, ದೃಷ್ಟಿ ಪರುಷ, ಭಾವ ಪರುಷ:
ಲಿಂಗಗಣಂಗಳು.
ಕೂಡಲಸಂಗಮದೇವಾ, ನಿಮ್ಮ ಶರಣರನುಭಾವದಿಂದ
ನಾನು ಸುಖಿಯಾದೆನು!
Transliteration Nim'ma śrīpādava muṭṭi enna karma hariyittu.
Nim'ma prasādadinda nānu bhavageṭṭe, nōḍayya!
Manaparuṣa, dr̥ṣṭiparuṣa, bhāvaparuṣa:
Liṅgagaṇaṅgaḷu.
Kūḍalasaṅgamadēvā, nim'ma śaraṇara anubhāvadinda
nānu sukhiyādenu!
Manuscript
English Translation 2 Touching Thy holy feet,
Broken are my karma-bonds.
Look, Lord! thanks to Thy grace,
I've shed my wheel of births!
The saints of Liṅga -their minds
Are alchemy; their sight is alchemy;
Their hearts are alchemy.
O Kūḍala Saṅgama Lord,
Through experience of Thy Śaraṇās,
I'm blest!
Translated by: L M A Menezes, S M Angadi
Hindi Translation तव श्रीपाद का स्पर्श कर
तव कर्म-मुक्त हुआ
तव प्रसाद से मैं भव मुक्त हुआ ।
लिंग भक्तों का मन पारस है,
दृष्टि पारस है, भाव पारस है,
तव शरणों के अनुभाव से
मैं सुखी हुआ, कूडलसंगमदेव ।
Translated by: Banakara K Gowdappa
Telugu Translation మీ శ్రీ పాదములసోక నా కర్మ తొలగి;
మీ శ్రీ పాదములచే నా జన్మ చెడె కదయ్య;
మది పరుసవేది! దృష్టి పరుసవేది; భావము పరుసవేది;
కూడల సంగయ్యా నీ గణములు
శరణుల అనుభావముచే సుఖినైతి నేను.
Translated by: Dr. Badala Ramaiah
Tamil Translation உம் திருவடியைக் கண்டு கர்மம் அகன்றது
உம் திருவடியால் பிறவியை அகற்றினேன்
மனம் பரிசவேதி, பார்வை பரிசவேதி
உணர்வு பரிசவேதி, இலிங்க இயல்புகள்
கூடல சங்கம தேவனே, உம் அடியாரை
உணர்ந்ததால், இன்பமுற்றேன் ஐயனே
Translated by: Smt. Kalyani Venkataraman, Chennai
Marathi Translation
तुमच्या श्रीचरणस्पर्शाने कर्म तुटले.
तुमच्या प्रसादामुळे भवबंधन सुटले देवा !
मन परिस, दृष्टी परिस, भाव परिस, लिंगगणांचे
कूडलसंगमदेवा, शरणांच्या अनुभावाने सुखी झालो.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶಿವನೇ ನಿನ್ನ ಪಾದಮುಟ್ಟಿ ನನ್ನ ಸಂಚಿತ ಕರ್ಮಪಾಪಗಳೆಲ್ಲಾ ತೊಳೆದುಹೋದುವು, ನಿನ್ನ ಪ್ರಸಾದವನ್ನು ಸೇವಿಸಿದ ನನ್ನ ಪ್ರಾರಬ್ಧಾದಿ ಕರ್ಮಗಳೆಲ್ಲಾ ಪರಿಹಾರವಾಗಿ ನನಗೆ ಜನ್ಮಾಂತರಗಳು ತಪ್ಪಿದವು. ನಿನ್ನ ಶರಣರ ಅನುಭಾವಪ್ರಸಂಗದಿಂದಲಾದರೋ ನಾನು ಪರಮಸುಖಿಯಾದೆನು. ಶಿವಶರಣರ ಮನ-ದೃಷ್ಟಿ-ಭಾವಗಳು ಪರುಷ. ಅವರು ಸಂಕಲ್ಪಿಸಿದ್ದು ನೆರವೇರುವುದು, ನೋಡಿದ್ದು ಕಂಗೊಳಿಸುವುದು, ಭಾವಿಸಿದ್ದು ಶಾಶ್ವತವಾಗಿರುವುದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು