•  
  •  
  •  
  •  
Index   ವಚನ - 795    Search  
 
ಪ್ರಸಾದಿಯ ಐಕ್ಯಸ್ಥಲ - ನಡೆ-ನುಡಿ
ನಡೆ ಚೆನ್ನ, ನುಡಿ ಚೆನ್ನ, ಎಲ್ಲಿ ನೋಡಿದಡೆ ಚೆನ್ನ! ಪ್ರಮಥರೊಳಗೆ ಚೆನ್ನ, ಪುರಾತರೊಳಗೆ ಚೆನ್ನ! ಸವಿ ನೋಡಿ ಅಂಬಲಿಯ, ರುಚಿಯಾಯಿತ್ತೆಂದು, ಕೂಡಲಸಂಗಮದೇವಂಗೆ ಬೇಕೆಂದು ಕೈದೆಗೆದ ನಮ್ಮ ಚೆನ್ನ!!
Transliteration Naḍe cenna, nuḍi cenna, elli nōḍidaḍe cenna! Pramatharoḷage cenna, purātaroḷage cenna! Savi nōḍi ambaliya ruciyāyitendu, kūḍalasaṅgamadēvaṅge bēkendu kaidegeda nam'ma cenna!!
Manuscript
English Translation 2 The way he walks is fine, and fine The way he speaks. Wherever you see him, he is fine! He's fine among the Pioneers, Among the Ancient he is fine When, testing his gruel, he is sure The taste is fine, Our fine friend, Cenna, holds back his hand Because Lord Kūḍala Saṅgama Would have of it. Translated by: L M A Menezes, S M Angadi
Hindi Translation आचार सुंदर है, विचार सुंदर, जहाँ देखो वहाँ सुंदर है। प्रमथों में सुंदर है, पुरातनों में सुंदर, काँजी का स्वाद स्वादिष्ट पाकर हमारे सुंदर चन्ना ने हाथ खींच लिया, कहा, वह कूडलसंगमदेव के योग्य है । Translated by: Banakara K Gowdappa
Telugu Translation నడచెన్ను నుడిచెన్ను ఎందు చూచిన చెన్ను ప్రమథులందుచెన్ను పురాతనులలో చెన్ను చవి చూచి అంబలి రుచియంచు మా కూడల సంగనికి కావలెనని చేసాచెమా చెన్నుడు. Translated by: Dr. Badala Ramaiah
Tamil Translation பிரசாதியின் ஐக்கியத்தலம் நடையழகு, சொல்லழகு எங்கு நோக்கினும் அங்கு அழகு கணங்களினுள்ளே அழகு பழமையோரினுள்ளே அழகு சுவைத்துக் கண்டு கூழ் சுவையாக இருந்தது என, கூடல சங்கனுக்கு வேண்டுமென கையில் எடுத்தனன் சென்னன் Translated by: Smt. Kalyani Venkataraman, Chennai
Marathi Translation आचार विचार, वाणीचा सुंदर मातंग तो थोर, चन्नाया प्रथमगणी चन्ना, पुरातनी चन्ना पाहू तेथे चन्ना, शिवरुप कूडलसंगमदेवा ! चन्नाने दिलेली आवडीची आंबिली , गोड केली सेवियली अर्थ : महात्मा बसवेश्वर या वचनात चन्नरूप झालेले म्हणजे स्वतः मातंग चन्नयाचेच रूप दिसुन येतात. ते म्हणतात चन्नयाचे आचार चन्नांचे विचार, चन्नांचे आहार, चन्नांचे विहार, चन्नाचे बोलणे, चन्नाचे पाहणे सारे काही वेगळेच आहे. नव्हे तो सर्वांग सुंदर आहे. प्रथमारंभी चन्न सुंदर आहे. आणि पुरातनातीलही कायकातून (प्रभातून) त्यांनी प्राप्त केलेल्या अंबीलीचा आग्रह धरून कूडलसंगमेशाला सहविणारा चन्नाच सर्व प्रिय वाटतो. इत्यर्थ- येथे महात्मा बसवेश्वरांची दृष्टी चन्नरुप झालेली आहे. धन्य शिवशरण मातंग चन्नया ! त्याची गरीबीतील अंबील, आणि तसेच धन्य चन्नाचा भाव! ज्याला महात्मा बसवेश्वरांनी आपल्या अंतरात स्थिर केले. चन्नय्याची स्पष्ट जाणीव ठेवणारे महात्म्स बसवेश्वर धन्य होत, चन्न म्हणजे उत्तम. या अर्थाने नाव उत्तम, क्रिया उत्तम, हेतु उत्तम फल मुक्ती भक्त चन्नयाला लाभलेले भाग्य आम्हास काय लाभणार ज्याची थोरवी स्वत: महात्मा बसवेश्वर तद्रूप होऊन करतात. Translated by Rajendra Jirobe, Published by V B Patil, Hirabaug, Chembur, Mumbai, 1983 वागणे सुंदर, बोलणे सुंदर, कोठेही पाहिले तरी सुंदर ! प्रमथामध्ये सुंदर, पुरातनात सुंदर. चाखता आंबिल सुंदर झाली म्हणून, कूडलसंगमदेवाला पाहिजे म्हणूनी हात आखडला आमच्या चन्नय्याचा . Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಪ್ರಸಾದವು ತನ್ನ ಸರಳರೂಪದಲ್ಲಿಯೂ ಅದೆಷ್ಟು ಮಹಿಮಾನ್ವಿತವೆಂಬುದನ್ನು ಸಾರಲು ಬಸವಣ್ಣನವರು ಈ ವಚನದಲ್ಲಿ ಮಾದಾರ ಚೆನ್ನಯ್ಯನನ್ನು ಪ್ರಸ್ತಾಪಿಸಿರುವರು. ಮಾತು ಚೆನ್ನಾದವರು ನಡೆವಳಿಯಲ್ಲಿ ಚೆನ್ನಾಗದಿರಬಹುದು, ಲೌಕಿಕದಲ್ಲಿ ಚೆನ್ನಾದವರು ಆಧ್ಯಾತ್ಮಿಕದಲ್ಲಿ ಚೆನ್ನಾಗದಿರಬಹುದು. ಆದರೆ ಮಾದಾರ ಚೆನ್ನಯ್ಯನ ನಡೆ ಚೆನ್ನ, ನುಡಿ ಚೆನ್ನ –ಇಹಪರವೆರಡೂ ಚೆನ್ನ, ಆ ಶಿವಶರಣ ಚೆನ್ನಯ್ಯನಿಗೆ ತಾನು ಉಣ್ಣುತ್ತಿದ್ದ ಅಂಬಲಿ ರುಚಿಯೆನಿಸಿದರೆ –ಅದು ಶಿವನಿಗಿರಲೆಂದು –ಆ ಉಣ್ಣುವ ಬಟ್ಟದಿಂದ ಕೈತೆಗೆದ ಮಹಾಶಯನವನು. ಶಿವನು ಆ ಅಂಬಲಿಯನ್ನು ಮನದಣಿಯ ಉಂಡು–ಚೋಳರಾಜನ ಮನೆಗೆ ಹೋದಾಗ –ಚಿನ್ನ ಬೆಳ್ಳಿಯೆ ಬಟ್ಟಲುಗಳಲ್ಲಿ ನಿವೇದಿಸಿದ ಷಡ್ರಸಾನ್ನವನ್ನೂ ಒಲ್ಲೆನೆಂದು ಮುಖಮುರಿದನು. ಆ ಚೆನ್ನಯ್ಯನಂಥವರಿಂದಲೇ ಜಾತಿಹೀನರಿಗೊಂದು ಕುಲೀನತೆ, ಬಡವರಿಗೊಂದು ಘನತೆ, ಸರಳ ಭಕ್ತಿಗೊಂದು ಬೆಲೆ, ಪ್ರಸಾದಕ್ಕೊಂದು ಮಹಿಮೆ ಒದಗಿತು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು