ಪ್ರಸಾದಿಯ ಐಕ್ಯಸ್ಥಲ - ಲಿಂಗಜಂಗಮ
ಲಿಂಗವಿಕಾರಿಗೆ ಅಂಗವಿಕಾರವೆಂಬುದಿಲ್ಲ,
ಜಂಗಮವಿಕಾರಿಗೆ ಧನವಿಕಾರವೆಂಬುದಿಲ್ಲ;
ಪ್ರಸಾದವಿಕಾರಿಗೆ ಮನವಿಕಾರವೆಂಬುದಿಲ್ಲ.
ಇಂತೀ, ತ್ರಿವಿಧ ಗುಣವನರಿಯದಾತನು
ಅಚ್ಚ ಲಿಂಗೈಕ್ಯನು, ಕೂಡಲಸಂಗಮದೇವಾ.
Transliteration Hattusāvira gītava hāḍi arthaviṭṭalli phalavenu,
muṭṭuva terananariyadannakka?
Kaṭṭidarēnu, biṭṭarēnu
manavu liṅgadalli muṭṭadannakka?
Mātina mātinalli olisi mahattappa liṅgava kaṇḍenemba
pāṭakara mekkā, nam'ma kuḍalasaṅgamadēva.
Manuscript
English Translation 2 The man who dotes on Liṅga has
No vices of the flesh;
The man who dotes on Jaṅgama
Has no encumbrances of wealth;
The man who dotes upon Prasāda has
No aberrations of the mind.
One who knows not this triple vice
Knows pure communion with the Liṅga,
O Kūḍala Saṅgama Lord!
Translated by: L M A Menezes, S M Angadi
Hindi Translation लिंग में अंग-विकार नहीं है।
जंगम में धन-विकार नहीं है।
प्रसाद में मनोविकार नहीं है ।
इन त्रिविध गुणों का ज्ञाता ही
सच्चा लिंगैक्य है, कूडलसंगमदेव॥
Translated by: Banakara K Gowdappa
Telugu Translation లింగవికారికి అంగవికారమన్నది లేదు;
జంగమవికారికి ధనవికారమన్నది లేదు;
ప్రసాద వికారికి మనోవికారమన్నది లేదు;
ఇట్లే త్రివిధ గుణములు తెలియువాడే;
అచ్చపు లింగైక్యుడు సంగమదేవా.
Translated by: Dr. Badala Ramaiah
Tamil Translation இலிங்கத்தைத் தியானிப்பவனுக்கு
உடல் மாறுபாடுகள் இல்லை
ஜங்கமனைத் தியானிப்பவனுக்கு
செல்வ மாறுபாடுகள் இல்லை
பிரசாதத்தைத் தியானிப்பவனுக்கு
மனமாறுபாடுகள் இல்லை.
இந்த மூன்று வித இயல்பை அறிந்தவன்
தூயோன், இலிங்கத்துடன் ஒன்றியவன்
கூடல சங்கமதேவனே.
Translated by: Smt. Kalyani Venkataraman, Chennai
Marathi Translation
लिंगविकारीला अंगविकार नाही.
जंगमविकारीला धनविकार नाही.
प्रसादविकारीला मनोविकार नाही.
असे त्रिविध गुण जाणणारे
शुध्द लिंगैक्य आहे कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಅಂಗವಿಕಾರ ಧನವಿಕಾರ ಮನೋವಿಕಾರ –ಈ ಮೂರು ಭಕ್ತನೆಂಬ ವೃಕ್ಷಕ್ಕೆ ತಗುಲುವ ಮೂರು ಬಗೆಯ ರೋಗಗಳು. ಅಂಗವಿಕಾರವು ಬೇರು ಕಾಂಡ ಕೊಂಬೆಗೆ ತಗುಲುವ ರೋಗ, ಧನವಿಕಾರವು ಎಲೆ ಚಿಗುರಿಗೆ ತಗುಲುವ ರೋಗ, ಮನೋವಿಕಾರ ಹೂವು ಹಣ್ಣಿಗೆ ತಗುಲುವ ರೋಗ.
ಶಿವಭಕ್ತನು ಲಿಂಗಪೂಜೆ ಲಿಂಗಧ್ಯಾನ ಮಾಡುವನಾಗಿ ಅವನ ದೇಹದಲ್ಲಿನ ಕಾಮ ಕ್ರೋಧ ಮದ ಮುಂತಾದ ಅಂಗವಿಕಾರವಾವುದೂ ಅವನಿಗಂಟುವುದಿಲ್ಲ, ತನ್ನ ಆಸ್ತಿ ಐಶ್ವರ್ಯವನ್ನೆಲ್ಲ ಜಂಗಮರಿಗೆ ಆಗಾಗ ದಾನಕೊಡುತ್ತಿರುವನಾಗಿ ಅಧಿಕ ಆಸ್ತಿಪಾಸ್ತಿಯ ಶೇಖರಣೆಯಿಂದ ಬರುವ ಬಂಡವಾಳಗಿರಿ ಶೋಷಣೆ ಭಂಡತನ ಮುಂತಾದ ಧನವಿಕಾರವಾವುದೂ ಅವನಿಗಂಟುವುದಿಲ್ಲ. ಲಿಂಗಜಂಗಮಪ್ರಸಾದವನ್ನು ಅನುದಿನ ಸ್ವೀಕರಿಸುವನಾಗಿ ಲಾಲಸೆ ಭಯ ಸಂಶಯ ಹೇಡಿತನ ಗುಲಾಮಗಿರಿ ಮುಂತಾದ ಮನವಿಕಾರವಾವುದೂ ಅವನಿಗಂಟುವುದಿಲ್ಲ. ಹೀಗೆ ತನು ಮನ ಧನದಲ್ಲಿ ಶುಚಿಯಾದ ಶಿವಭಕ್ತನು ಧ್ಯಾನಿಯೂ ದಾನಿಯೂ ಧೀರನೂ ಆಗಿ ಜೀವನ್ಮುಕ್ತನೆನಿಸುವನು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು