•  
  •  
  •  
  •  
Index   ವಚನ - 797    Search  
 
ಪ್ರಾಣಲಿಂಗಿಯ ಜ್ಞಾನಿಸ್ಥಲ - ಲಿಂಗನಿಷ್ಠೆ
ಪ್ರಾಣಲಿಂಗ ಪ್ರತಿಗ್ರಾಹಕನಾದ ಬಳಿಕ, ಲಿಂಗವಿರಹಿತವಾಗಿ ನಡೆವ ಪರಿಯಿನ್ನೆಂತೊ? ಲಿಂಗವಿರಹಿತವಾಗಿ ನುಡಿವ ಪರಿಯಿನ್ನೆಂತೊ? ಪಂಚೇಂದ್ರಿಯ ಸುಖವನು ಲಿಂಗವಿರಹಿತವಾಗಿ ಭುಂಜಿಸಲಾಗದು; ಲಿಂಗವಿರಹಿತವಾಗಿ ಉಗುಳ ನುಂಗಲಾಗದು: ಇಂತೆಂದುದು ಕೂಡಲಸಂಗನ ವಚನ.
Transliteration Prāṇaliṅga pratigrāhakanāda baḷika, liṅgavirahitavāgi naḍeva pariyinnento? Liṅgavirahitavāgi nuḍiva pariyinnento? Pan̄cēndriya sukhavanu liṅgavirahitavāgi bhun̄jisalāgadu; liṅgavirahitavāgi uguḷa nuṅgalāgadu: Intendudu kūḍalasaṅgana vacana.
Manuscript
English Translation 2 Once you are wedded to Prāṇaliṅga How can you lead a life Apart from Liṅga ? How can you speak Apart from Liṅga? You cannot taste The joy of the fivefold sense Apart from Liṅga You cannot swallow even your spit Apart from Liṅga Thus says Kūḍala Saṅga's word. Translated by: L M A Menezes, S M Angadi
Hindi Translation प्राणलिंग का प्रतिग्रह करने के पश्चात् लिंग रहित होकर कैसे चल सकते हो? लिंग रहित होकर कैसे बोल सकते हो? लिंग रहित होकर पंचेंद्रिय-सुख नहीं भोगना चाहिए; लिंग रहित होकर थूक नहीं निगलना चाहिए; यों है कूडलसंगमदेव का वचन॥ Translated by: Banakara K Gowdappa
Telugu Translation ప్రాణలింగ ప్రతిగ్రాహకుడైన వెనుక లింగ విరహితుడై నడచు టెటులో! లింగ విరహితుడై పలుకుటెటులో! పంచేంద్రియ సుఖమును లింగవిరహితమై సుఖింప రాదు; లింగములేక యెంగిలి మ్రింగరాదు; కూడల సంగని వచనమిట్లను చుండె. Translated by: Dr. Badala Ramaiah
Tamil Translation பிராணலிங்கித்தலம் பிராணலிங்கத்தை உணர்ந்த பிறகு இலிங்கமற்று நடக்கும் முறை என்னவோ? இலிங்கமற்று மொழியும் முறை என்னவோ ஐம்புலன் இன்பங்களை இலிங்கமற்று துய்க்கவியலாது. இலிங்கமற்று கவளத்தையும் விழுங்கவியலாது என கூடல சங்கனின் வசனம் இயம்புகிறது. Translated by: Smt. Kalyani Venkataraman, Chennai
Marathi Translation प्राणलिंग स्वायत झाल्यानंतर लिंग विरहीत होऊन कसे राहू शकतात? लिंगविरहीत होऊन कसे बोलू शकतात? पंचेद्रियांचे सुखलिंगविरहीत होऊन भोगू शकत नाही. लिंगविरहीत होऊन धुंकी गिळू शकत नाही. असे कूडलसंगमदेवाचे वचन आहे. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ (ಕೈಹಿಡಿದ) ಪ್ರಿಯೆಯನ್ನು ಪ್ರೀತಿಸಿದಂತೆಲ್ಲ ಆ ಪ್ರಿಯೆ ಪ್ರಾಣಪ್ರಿಯೆಯಾಗುವಂತೆ, ಇಷ್ಟಲಿಂಗವನ್ನು ಭಕ್ತಿಯಿಂದ ಉಪಾಸಿಸಿದಂತೆಲ್ಲ -ಸ್ಥೂಲಶರೀರದ ಮೇಲೆ ಪ್ರತಿಷ್ಠಿತವಾಗಿರುವ ಆ ಇಷ್ಟಲಿಂಗವು ಸೂಕ್ಷ್ಮಶರೀರದಾಳದಲ್ಲಿ ಪ್ರಾಣಲಿಂಗವಾಗಿ ಸುಪ್ರತಿಷ್ಠಿತವಾಗುವುದು. ಅಂದರೆ ದೇಹ-ಮನಗಳ ಸೂತ್ರಹಿಡಿದು ಭಕ್ತನು ತನ್ನ ಇರವಿನ ಪ್ರಾಣಮಯದವರೆಗೂ ಲಿಂಗಪರಿಣಾಮಿಯಾಗುವನು. ಆಗ ಅವನು ಏನನ್ನು ಯೋಚಿಸಿದರೂ ಏನನ್ನು ಕಂಡರೂ ಏನನ್ನು ಮಾತನಾಡಿದರೂ ಏನನ್ನು ಮಾಡಿದರೂ –ಅದೆಲ್ಲವೂ ಲಿಂಗಸಾಕ್ಷಿಯಲ್ಲೇ ಲಿಂಗ ಗಂಭೀರದಿಂದಲೇ ನಡೆಯುವುದು. “ಲಿಂಗವಿರಹಿತವಾಗಿ ಯಾವ ಸುಖವನ್ನೂ ಉಣ್ಣಬಾರದು, ಲಿಂಗವಿರಹಿತವಾಗಿ ಎಂಜಲನ್ನೂ ನುಂಗಬಾರದು” ಎಂಬ ಶಿವಾಗಮವಾಕ್ಯವು (ಪ್ರಾಣಲಿಂಗಿಯಾದ) ಆ ಭಕ್ತನಿಗೆ ಒಂದು ನೀತಿನಿಯಮವಾಗಿರದೆ ನೈಜವೇ ಆಗುವುದು. ವಿ: (1) ಗುರುವು ದೀಕ್ಷೆಮಾಡುವಾಗ ತನ್ನ ಹಸ್ತವನ್ನು ಶಿಷ್ಯನ ತಲೆಯ ಮೇಲಿಡುವನು –ಅದು ವೇದದೀಕ್ಷೆ. ಕಿವಿಯಲ್ಲಿ ಪಂಚಾಕ್ಷರಿಯನ್ನು ಉಸುರುವನು –ಅದು ಮಂತ್ರದೀಕ್ಷೆ, ಕೈಗೆ ಲಿಂಗವನ್ನು ಕೊಡುವನು ಅದು ಕ್ರಿಯಾದೀಕ್ಷೆ. (2) ಶಿವತತ್ತ್ವ ಚಿಂತಾಮಣಿಯ ಈ ಮುಂದಿನ ವಿವರವನ್ನು ಸಾಂದರ್ಭಿಕವಾಗಿ ಗಮನಿಸಬಹುದು : ಗುರುವು ಶಿಷ್ಯನ ಯೋಗಾಂಗ(ಕಾರಣಶರೀರ)ದಲ್ಲಿ ವೇದದೀಕ್ಷೆಯಿಂದ ಭಾವಲಿಂಗವನ್ನೂ, ಭೋಗಾಂಗ(ಸೂಕ್ಷ್ಮ ಶರೀರ)ದಲ್ಲಿ ಮಂತ್ರದೀಕ್ಷೆಯಿಂದ ಪ್ರಾಣಲಿಂಗವನ್ನೂ, ತ್ಯಾಗಾಂಗ(ಸ್ಥೂಲಶರೀರ)ದಲ್ಲಿ ಕ್ರಿಯಾದೀಕ್ಷೆಯಿಂದ ಇಷ್ಟಲಿಂಗವನ್ನೂ ಸ್ಥಾಪಿಸುವನು. ಯೋಗಾಂಗವು ಆತ್ಮಾಂಗವಾಗಿ ಕಾರಣ ಶರೀರವೆನಿಸುವುದು,ಭೋಗಾಂಗವು ಆಂತರ್ಯವಾದುದಾಗಿ ಸುಕ್ಷ್ಮಶರೀರವೆನಿಸುವುದು ತ್ಯಾಗಾಂಗವು ಬಹಿರಂಗವಾದುದಾಗಿ ಸ್ಥೂಲಶರೀರವೆನಿಸುವುದು. ಆತ್ಮ(ಭಕ್ತ)ನು ಯೋಗಾಂಗದಲ್ಲಿ ಪ್ರಾಜ್ಞಜೀವನಾಗಿ, ಸುಷುಪ್ತ್ಯವಸ್ಥೆಯಲ್ಲಿ ಭಾವಲಿಂಗವನ್ನೂ, ಭೋಗಾಂಗದಲ್ಲಿ ತೈಜಸಜೀವನಾಗಿ ಸ್ವಪ್ನಾವಸ್ಥೆಯಲ್ಲಿ ಪ್ರಾಣಲಿಂಗವನ್ನೂ, ತ್ಯಾಗಾಂಗದಲ್ಲಿ ವಿಶ್ವಜೀವನಾಗಿ ಜಾಗ್ರದವಸ್ಥೆಯಲ್ಲಿ ಇಷ್ಟಲಿಂಗವನ್ನೂ ಪೂಜೆಮಾಡುತ್ತಿರುವನು. ಹೀಗೆ ಭಕ್ತನ ಆತ್ಮವು ಅವಸ್ಥಾಭೇದದಿಂದ ಲಿಂಗತ್ರಯವನ್ನು ಉಪಾಸನೆ ಮಾಡುತ್ತಿರುವುದು. ಆ ಮಾಡುವ ಉಪಾಸನೆಯೇ ಸಂಯೋಗ, ಸಂಯೋಗವೆಂದರೆ ಲಿಂಗಾಂಗಸಂಯೋಗ, ಲಿಂಗಾಂಗಸಂಯೋಗವೇ ದ್ವೈತಭಾವಲಯ, ದ್ವೈತಭಾವಲಯವೇ ನಿವೃತ್ತಿ, ನಿವೃತ್ತಿಯೇ ವಿಶ್ರಾಂತಿ, ವಿಶ್ರಾಂತಿಯೇ ಪರಮಪದ. ಈ ಲಿಂಗಾಂಗ ಸಂಯೋಗ ವಿಧಿಯನ್ನು ಆತ್ಮನು ತಿಳಿದರೆ ಅವನಲ್ಲಿ ಬೀಜರೂಪದಲ್ಲಿರುವ ಪರಾಶಕ್ತಿಯು ಆಂಕುರಿಸಿ ಎಲ್ಲೆಡೆ ಆವರಿಸುವುದು (ಸಂಧಿ. 51) (3) ಆದ್ಯಂತರಹಿತವಾದ ಪರಬ್ರಹ್ಮವೇ ಲಿಂಗಸ್ಥಲ. ಆ ಲಿಂಗಮೂರ್ತಿಯ ನಿಜದಲ್ಲಿ ಲೀನವಾಗುವೆನೆಂಬ ಅತಿಭಕ್ತಿಯ ಆತ್ಮತತ್ತ್ವವೇ ಅಂಗಸ್ಥಲ. ಈ ಅಂಗಸ್ಥಲ ಮೂರು ವಿಧ : ಯೋಗಾಂಗ-ಭೋಗಾಂಗ-ತ್ಯಾಗಾಂಗ. ಶಿವಯೋಗವನ್ನು ಹಿಂಗದಿರುವುದೇ ಯೋಗಾಂಗ, ಶಿವಸಹಿತವಾಗಿ ಭೋಗಗಳನ್ನು ಭೋಗಿಸುವುದೇ ಭೋಗಾಂಗ, ಸಂಸೃತಿ(ಸಂಸಾರ)ದ ಸಂಗವನ್ನು ತ್ಯಜಿಸುವುದೇ ತ್ಯಾಗಂಗ. ಈ ಯೋಗಾಂಗ-ಭೋಗಾಂಗ-ತ್ಯಾಗಾಂಗಗಳು ಕ್ರಮವಾಗಿ ಕಾರಣಶರೀರ, ಸೂಕ್ಷ್ಮಶರೀರ, ಸ್ಥೂಲಶರೀರ ಎಂದೂ ಕರೆಯಲ್ಪಡುವವು (ಶಿವತತ್ತ್ವ ಚಿಂತಾಮಣಿ, ಸಂಧಿ 50) (4) ಶಿವಾಗಮಗಳು ಚರ್ಯಾ-ಕ್ರಿಯಾ-ಯೋಗ-ಜ್ಞಾನವೆಂಬ ನಾಲ್ಕು ಪಾದ(ವಿಭಾಗ)ಗಳಲ್ಲಿ ಶಿವಭಕ್ತನ ಸಾಧನೆ-ಸಿದ್ಧಿಗಳೆರಡನ್ನೂ ವಿವರಿಸುವವು. ಯಾವನಾದರೊಬ್ಬನು ಶಿವಭಕ್ತನಾಗಲು ಲಿಂಗದೀಕ್ಷಾದಿ ವಿಧಿಗಳಿಗೆ ಒಳಗಾಗುವ ವಿವರವನ್ನು ಕ್ರಿಯಾಪಾದದಲ್ಲಿಯೂ, ಅನುಷ್ಠಿಸಬೇಕಾದ ಪೂಜಾದಿಗಳನ್ನು ಕ್ರಿಯಾಪಾದದಲ್ಲಿಯೂ ಮಾಡಬೇಕಾದ ಶಿವಯೋಗಾದಿಗಳನ್ನು ಯೋಗಪಾದದಲ್ಲಿಯೂ, ಪಡೆಯಬೇಕಾದ ಜ್ಞಾನೋತ್ಕರ್ಷವಿವರವನ್ನು ಜ್ಞಾನಪಾದದಲ್ಲಿಯೂ ಹೇಳಲಾಗಿದೆ. ಪ್ರಸ್ತುತ ಬಸವಣ್ಣನವರ ವಚನಗಳನ್ನು ಜೋಡಿಸಿರುವ ಷಟ್ಸ್ಥಲಗಳ ಪರಿವಿಡಿಯಲ್ಲಿ-ಭಕ್ತ ಮಾಹೇಶ್ವರ ಮತ್ತು ಪ್ರಸಾದಿಸ್ಥಲಗಳು ಕ್ರಿಯಾ ಮತ್ತು ಚರ್ಯಾಪಾದಗಳನ್ನೂ, ಪ್ರಾಣಲಿಂಗಿಸ್ಥಲವು ಯೋಗಪಾದವನ್ನೂ, ಶರಣ ಮತ್ತು ಐಕ್ಯಸ್ಥಲಗಳು ಜ್ಞಾನಪಾದವನ್ನೂ ಪ್ರತಿನಿಧಿಸುವವೆಂಬುದನ್ನು ಗಮನಿಸಬೇಕು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು