ಪ್ರಾಣಲಿಂಗಿಯ ಜ್ಞಾನಿಸ್ಥಲ - ಲಿಂಗನಿಷ್ಠೆ
ಹತ್ತುಸಾವಿರ ಗೀತವ ಹಾಡಿ ಅರ್ಥವಿಟ್ಟಲ್ಲಿ ಫಲವೇನು,
ಮುಟ್ಟುವ ತೆರನನರಿಯದನ್ನಕ್ಕ?
ಕಟ್ಟಿದರೇನು, ಬಿಟ್ಟರೇನು
ಮನವು ಲಿಂಗದಲ್ಲಿ ಮುಟ್ಟದನ್ನಕ್ಕ?
ಮಾತಿನ ಮಾತಿನಲೆ ಒಲಿಸಿ ಮಹತ್ತಪ್ಪ ಲಿಂಗವ ಕಂಡೆಹೆನೆಂಬ
ಪಾತಕರ ಮೆಚ್ಚ, ನಮ್ಮ ಕೂಡಲಸಂಗಮದೇವ.
Transliteration Hattusāvira gītava hāḍi arthaviṭṭalli phalavēnu,
muṭṭuva terananariyadannakka?
Kaṭṭidarēnu, biṭṭarēnu
manavu liṅgadalli muṭṭadannakka?
Mātina mātinalli olisi mahattappa liṅgava kaṇḍ'̔ehenemba
pātakara mecca, nam'ma kūḍalasaṅgamadēva.
Manuscript
English Translation 2 When you have sung a thousand lays,
When looking to their sense, what fruit
Unless you know the way of getting there?
What matters whether you tie or loose
Unless your mind touch God?
Our Lord Kūḍala Saṅgama
Loves not the sinners who make claim
To have reached the great Liṅga
By flattering Him with words on words.
Translated by: L M A Menezes, S M Angadi
Hindi Translation दस सहस्र गीत गाकर अर्थ लगाने से क्या लाभ?
यदि वह पहुँचने की विधि न जानते हो?
लिंग धारण करने से क्या, छोडने से क्या,
यदि मन लिंग स्पर्श नहीं करे?
वचनों से प्रसन्न कर जो कहते हैं,
हमने महान लिंग के दर्शन किये
उन पापियों को कूडलसंगमदेव नहीं चाहते॥
Translated by: Banakara K Gowdappa
Telugu Translation పది వేల గీతలపాడి అర్ధము తప్పిన ఫలమేమి?
గట్టెక్కుపదము తెలియనందాక?
కట్టినా విడిచినా ఫలమేమి?
మనసు లింగము ముట్టనందాక?
మాటమాటకు మెచ్చి మహ త్తగు లింగమును
చూచితిమను పాపుల మెచ్చడుసంగమ దేవుడు.
Translated by: Dr. Badala Ramaiah
Tamil Translation பொருளறியாது பத்தாயிரம் பாடலைப்பாடி
அடையும் முறையை அறியாத
வரையில் என்னபயன்? மனம் இலிங்கத்தை
உணராதவரை, கட்டினால் என்ன? விட்டாலென்ன?
சொல்லால் மெச்சி, மேன்மையான இலிங்கத்தைக்
கண்டேன் என்னும் பாவிகளை மெச்சுவனோ
நம் கூடல சங்கமதேவன்?
Translated by: Smt. Kalyani Venkataraman, Chennai
Marathi Translation
दहा हजार गीते गाऊन, त्यांचा अर्थ
लावून काय उपयोग साक्षात्कार झाल्याशिवाय ?
बांधले तर काय, न बांधले तर काय मन लिंगात समरस होईपर्यंत ?
शब्दाने प्रसन्न करुन महानलिंग दर्शन झाले म्हणती
अशा पातकीनां प्रसन्न होईल कूडलसंगम,
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಹರವಿಲ್ಲದ ಮನ, ಆಳವಿಲ್ಲದ ಬುದ್ಧಿ, ನಿಂತಲ್ಲಿಯೇ ಮಲೆಯುವ ಚಿತ್ತ, ಅಲ್ಲೇ ಸುಳಿಸುತ್ತುವ ಅಹಂಕಾರದ ಅಂತಃಕರಣದವನು ಎಂಥ ಕಲಾವಿದನಾದರೇನು, ಎಷ್ಟು ದೊಡ್ಡ ವಿದ್ವಾಂಸನಾದರೇನು ? ಶರಣರ ವಚನಗಳಿಗೆ ಸ್ವರವಿಟ್ಟು ಅರ್ಥವಿಟ್ಟು ಪ್ರವಚನ ಮಾಡುವ ಅವನ ವೈದುಷ್ಯವೆಲ್ಲಾ ನಿರರ್ಥಕ-ಶರಣರ ಜೀವನಪರಂಪರೆಯನ್ನು ತನ್ನ ಜೀವನಾಲೆಯಲ್ಲಿ ಮಂಜುಳವಾಗಿ ಹರಿಯಬಿಡದ ಅವನ ಆಟಗಳೆಲ್ಲಾ ಬಯಲಾಟ.
ಒಂದು ಹೆಣ್ಣು ಒಂದು ಗಂಡನ್ನು ಒಲಿಸುವೆನೆಂದರೆ –ಆಕೆ ಅವನಿಗೆ ತನ್ನ ಆತ್ಮವನ್ನು ಸಮರ್ಪಿಸಿಕೊಂಡಲ್ಲದಾಗದು. ಅಂದಮೇಲೆ ಶರಣಸತಿ ಬರಿಯ ಮಾತಿನಿಂದಲೇ ಮಹಾದೇವನನ್ನು ಒಲಿಸಿಕೊಂಡಿದ್ದೇನೆಂದರೆ ಅದು ಸುಳ್ಳು.
ಯಾವನ ಸ್ಥೂಲದೇಹದ ಮೇಲೆ ಧರಿಸಿದ ಇಷ್ಟಲಿಂಗವು ಸೂಕ್ಷ್ಮದೇಹದವರಿಗೆ ತನ್ನ ಬೆಳಕಿನ ಬೇರನ್ನು ಬಿಡುವುದಿಲ್ಲವೋ ಅವನು ಅದನ್ನು ಕಟ್ಟಿದ್ದೇಕೆ? ಲಿಂಗವನ್ನು ಕಟ್ಟಿಯೂ ಭವಿ ಯಾವನೆಂಬುದಕ್ಕೆ ಅವನೊಂದು ಜೀವಂತನಿದರ್ಶನವಷ್ಟೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು