ಪ್ರಾಣಲಿಂಗಿಯ ಜ್ಞಾನಿಸ್ಥಲ - ಅಜ್ಞಾನ
ಶ್ವಾನಜ್ಞಾನ, ಗಜಜ್ಞಾನ, ಕುಕ್ಕುಟಜ್ಞಾನವೆಂಬ
ಜ್ಞಾನತ್ರಯಂಗಳೇನಾದುವು?
ಕೂಡಲಸಂಗಮದೇವಾ, ನಿಮ್ಮನರಿಯದ ಜ್ಞಾನವೆಲ್ಲಾ ಅಜ್ಞಾನ!
Transliteration Śvānajñāna, gajajñāna, kukkuṭajñānavemba
jñānatrayaṅgaḷēnāduvu?
Kūḍalasaṅgamadēvā, nim'manariyada jñānavellā ajñāna!
Manuscript
English Translation 2 How fared the triple wisdom that you call
Dog-wisdom. the wisdom of the elephant,
The wisdom of the hen?
O Kūḍala Saṅgama Lord,
All wisdom which is ignorant of Thee
No wisdom is at all!
Translated by: L M A Menezes, S M Angadi
Hindi Translation श्वानज्ञान, गजज्ञान, कुक्कुटज्ञान
नामक ज्ञानत्रय क्या हुए?
कूडलसंगमदेव तुम्हारे अविदित
सब अज्ञान हैं॥
Translated by: Banakara K Gowdappa
Telugu Translation శ్వాన జ్ఞానము; కుక్కుట జ్ఞానము; గజ జ్ఞానము
లను జ్ఞానత్రయము లేమైనవి?
సంగమ దేవ! నిన్ను తెలియని జ్ఞానమది అజ్ఞానమయ్యా!
Translated by: Dr. Badala Ramaiah
Tamil Translation நாய்ஞானம், யானை ஞானம், கோழிஞானம்
என்னும் மூன்று ஞானங்கள் என்னவாயின?
கூடல சங்கமதேவனே, உம்மை அறியாத
ஞானம் அனைத்தும் அஞ்ஞானமாம்
Translated by: Smt. Kalyani Venkataraman, Chennai
Marathi Translation
श्वान ज्ञान, गजज्ञान, कुकुटज्ञान,
अशा ज्ञानत्रयाने काय होणार आहे?
कूडलसंगमदेवा, तुम्हाला न जाणणाऱ्यांचे ज्ञान अज्ञान आहे.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ “ನಿನ್ನ ದನ ತಪ್ಪಿಸಿಕೊಂಡಿದೆ, ಅದೀಗ ಪಶ್ಚಿಮದಿಕ್ಕಿನಲ್ಲಿದೆ –ಇನ್ನು ಮೂರು ತಿಂಗಳಿಗೆ ಅದು ನಿಮ್ಮೂರ ಸಂತೆಯಲ್ಲಿ ನಿನಗೆ ಕಾಣಸಿಗುವುದು” –ಎಂಬಂಥ ಭೂತ-ವರ್ತಮಾನ-ಭವಿಷತ್ಜ್ಞಾನ ಅಷ್ಟು ಅದ್ಭುತವಾದುದೇನೂ ಅಲ್ಲ. ಅದನ್ನು ಹೊಟ್ಟೆಪಾಡಿಗಾಗಿ ಹಾದಿಬೀದಿಯ ಬದಿಗಳಲ್ಲಿ ಕುಳಿತ ದರ್ವೇಶಿಗಳೂ ಹೇಳುವರು.
ಇಂಥ ಉದರಂಭರಣ ತ್ರಿಕಾಲಜ್ಞಾನವನ್ನು ಬಸವಣ್ಣನವರು ನಾಯಿ-ಆನೆ-ಕೋಳಿಜ್ಞಾನವೆಂದು ಗೇಲಿಮಾಡುತ್ತಿರುವರ.
ನಾಯಿಗೆ ಜನ್ಮಾಂತರಭೂತಜ್ಞಾನ. ಆನೆಗೆ ದೂರಭವಿಷ್ಯತ್ಜ್ಞಾನ, ಕೋಳಿಗೆ ದೂರಸಾಂಪ್ರತ ಜ್ಞಾನವಿದೆಯೆಂಬುದೊಂದು ಪ್ರತೀತಿ. ಆದರೆ ಆ ಪ್ರಾಣಿಗಳೆಲ್ಲಾ ಪಾಶವಿಕದಾಸ್ಯದಲ್ಲಿ ಬಳಲುತ್ತಿವೆ. ಹಾಗೆಯೇ ಯಾವನಾದರೊಬ್ಬನು ತ್ರಿಕಾಲಜ್ಞಾನಿಯಾಗಿದ್ದು ಮಾಯೆಗೆ ಅಧೀನವಾಗಿದ್ದರೇನು ಪ್ರಯೋಜನ ?
ಶಿವಜ್ಞಾನದಲ್ಲಿ ಮತ್ತು ಅಂತರಂಗದಿಗ್ವಿಜಯದಲ್ಲಿ ಫಲಿಸದ ಜ್ಞಾನಪ್ರಕಾರಗಳೆಲ್ಲಾ ಎಷ್ಟೇ ಚಮತ್ಕಾರಿಯಾದುವಾದರೂ ಅವು ಅಜ್ಞಾನದ ನೀಳನೆರಳುಗಳೇ ಆಗಿರುವವೆಂಬುದು ಬಸವಣ್ಣನವರ ಅಭಿಪ್ರಾಯ.
ವಿ : ಈ ವಚನದ ಹಿನ್ನಲೆಯಲ್ಲಿ ಬಸವಣ್ಣನವರು ಕಾಲಜ್ಞಾನದ ವಚನಗಳನ್ನು ಬರೆದಿರುವರೆಂಬುದು ಅಸಂಗತ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು