•  
  •  
  •  
  •  
Index   ವಚನ - 801    Search  
 
ಪ್ರಾಣಲಿಂಗಿಯ ಜ್ಞಾನಿಸ್ಥಲ - ಪೂಜೆ
ಕಬ್ಬುನ ಪರುಷವೇದಿಯಾದರೇನು, ಕಬ್ಬುನ ಹೊನ್ನಾಗದೊಡಾ ಪರುಷವದೇಕೊ? ಮನೆಯೊಳಗೆ ಕತ್ತಲೆ ಹರಿಯದೊಡಾ ಜ್ಯೋತಿಯದೇಕೊ? ಕೂಡಲಸಂಗಮದೇವರ ಮನಮುಟ್ಟಿ ಪೂಜಿಸಿ ಕರ್ಮ ಹರಿಯದೊಡಾ ಪೂಜೆಯದೇಕೊ?
Transliteration Kabbuna paruṣavēdiyādarēnu, kabbuna honnāgadoḍā paruṣavadēko? Maneyoḷage kattale hariyadoḍā jyōtiyadēko? Kūḍalasaṅgamadēvara manamuṭṭi pūjisi karma hariyadoḍā pūjeyadēko?
Manuscript
English Translation 2 What if the iron knows The alchemic stone? What use the alchemy unles The iron has ceased to be? What use the light unless The darkness leaves the house ? What use your worship too Unless with heartfelt worshipping Of Lord Kūḍala saṅgama, You tear off karma’s bonds? Translated by: L M A Menezes, S M Angadi
Hindi Translation लोहा स्पर्शमणिवेदी हो तो क्या? लोहा सोना न बना, तो पारस किसलिए? घर का अंधकार दूर न हो तो त्जोति किसलिए? मनसा कूडलसंगमदेव को पूजने पर कर्म दूर न हो तो पूजा किसलिए? Translated by: Banakara K Gowdappa
Telugu Translation ఇనుము స్పర్శవైదిjైున నేమి? ఇనుము పసిడికా దేని ఆ పరసువేటికో! అ ఇంట చీకటి బాపని ఆ జ్యోతి యేటికో! కూడల సంగమదేవుని మనసారకొలిచి; కర్మ త్రుంచని ఆ పూజ యేటికో! Translated by: Dr. Badala Ramaiah
Tamil Translation இரும்பு பரிசவேதியாயினென்ன இரும்பை பொன்னாகமாற்றாத பரிசவேதி எதற்கோ? இல்லத்தில் இருள் அகலாது இருப்பின் விளக்கு எதற்கோ? கூடல சங்கமதேவனை மனம் நிறைந்து பூசித்து, வினையகலவில்லை எனின் அந்த பூசை எதற்கோ? Translated by: Smt. Kalyani Venkataraman, Chennai
Marathi Translation लोखंड परिस संगात आले तरी लोखंड सोने झाले नाही तर तो परिस कसला ? घरातील अंधार दूर झाला नाहीतर ती ज्योत कसली? कूडलसंगमदेवाची मनापासून पूजा करता कर्म तुटले नाही तर ती पूजा कसली ? Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಮನಃಪೂರ್ವಕವಾಗಿ ಲಿಂಗಪೂಜೆ ನಡೆದಿದೆಯೆಂಬುದಕ್ಕೆ ಸಾಕ್ಷಿ ಆ ಪೂಜಕನು ಪಾಪಕರ್ಮಗಳಿಂದ ಬಿಡುಗಡೆ ಪಡೆದಿರುವುದು. ಪಾಪಮಲ ಮೆತ್ತಿಯೇ ಇದ್ದು, ಆ ಮಲಮಧ್ಯದಲ್ಲಿ ಕತ್ತಿಂದ ಲಿಂಗ ನೇತಾಡುತ್ತಿದ್ದರದೊಂದು ದುರಂತ ! ಲಿಂಗವನ್ನು ಧರಿಸಿದ ಮೇಲೆ ಮತ್ತು ಆ ಲಿಂಗವನ್ನು ಪೂಜಿಸಿದ ಮೇಲೆ-ಆ ದೀಕ್ಷೆ ಆ ಪೂಜೆ ಮನಃಪೂರ್ವಕವಾದುದೇ ಆದರೆ ಆ ಸಾಧಕನು ಪಾಪಕರ್ಮಗಳಿಂದ ದೂರವಿರುವನೆಂಬುದಭಿಪ್ರಾಯ. ವಿ : (1) ಸ್ಪರ್ಶ(>ಪರುಷ)ಮಣಿ ಯಾವ ಲೋಹವನ್ನು ಸ್ಪರ್ಶಿಸಿದರೆ ಹೊನ್ನಾಗುವುದೋ ಆ ಲೋಹಕ್ಕೆ “ಪರುಷವೇದಿ”ಎನ್ನುವರು. ಕಬ್ಬಿಣ ಒಂದು ಸ್ಪರ್ಶವೇದಿ-ಮರದ ತುಂಡು ಸ್ಪರ್ಶವೇದಿಯಲ್ಲ. ಲಿಂಗವು ಸ್ಪರ್ಶಿಸಿದರೆ ಚಿನ್ಮಯವಾಗುವ ಧಾತುವುಳ್ಳ ಅಂಗವೇ ಲಿಂಗವೇದಿ ! (2) ಈ ಪ್ರಾಣಲಿಂಗಸ್ಥಲದಲ್ಲಿ ಪ್ರಸ್ತಾಪಗೊಳ್ಳುವ ಲಿಂಗವು ಪ್ರಾಣಲಿಂಗವೆಂದೂ, ಪೂಜೆಯು ಶಿವಯೋಗವೆಂದೂ ಗೃಹೀತವಾಗಬೇಕು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು