•  
  •  
  •  
  •  
Index   ವಚನ - 803    Search  
 
ಪ್ರಾಣಲಿಂಗಿಯ ಜ್ಞಾನಿಸ್ಥಲ - ನಡೆ-ನುಡಿ
ನುಡಿದರೆ ಮುತ್ತಿನ ಹಾರದಂತಿರಬೇಕು. ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು. ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು. ನುಡಿದರೆ ಲಿಂಗ ಮೆಚ್ಚಿ ʼಅಹುದಹುದೆʼನಬೇಕು. ನುಡಿಯೊಳಗಾಗಿ ನಡೆಯದಿದ್ದರೆ, ಕೂಡಲಸಂಗಮದೇವನೆಂತೊಲಿವನಯ್ಯಾ?
Transliteration Nuḍidare muttina hāradantirabēku. Nuḍidare māṇikyada dīptiyantirabēku. Nuḍidare sphaṭikada salākeyantirabēku. Nuḍidare liṅga mecci ʼahudahudeʼnabēku. Nuḍiyoḷagāgi naḍeyadiddare, kūḍalasaṅgamadēvanentolivanayyā?
Manuscript
Music Courtesy: Album: Vachana Sudhamrutha Dhaare, Singer: Kasturi Shankar, Music Director: Kumar Eshwar, Music Label : Lahari Music
English Translation 2 If you should speak, your words should be Pearls that are strung upon a thread. If you should speak, your words should be Like lustre by the ruby shed. If you should speak, your words should be A crystal's flash that cleaves the blue. If you should speak, great God must say Ay, ay, that's very true! But if your deed betrays your word, Can Kūḍala Saṅgama care for you? Translated by: L M A Menezes, S M Angadi
Hindi Translation बोली मुक्तावलि सी हो। बोली माणिक्य दीप्ति सी हो। बोली स्फटिक शलाका सी हो। बोली पर लिंग रीझ साधु, साधु कहे। वचनानुसार आचरण न हो, तो कूडलसंगमदेव कैसे प्रसन्न होंगे? Translated by: Banakara K Gowdappa
Telugu Translation పలికిన ముత్యపుసరముగా నుండవలె; పలికిన మాణిక్య కాంతిగ నుండవలె; పలికిన స్పటికపు సలాకవలె నుండవలే; పలికిన శివుడు మెచ్చి అవు నవు ననవలె; పలికినట్లు బ్రతుకకున్న కూడల సంగమదేవుడెట్లు మెచ్చునయ్యా? Translated by: Dr. Badala Ramaiah
Tamil Translation பேச்சு முத்துமாலையனைய இருக்கவேண்டும் பேச்சு மாணிக்க ஒளியனைய இருக்கவேண்டும் பேச்சு, பளிங்கின் கிரணமனைய இருக்க வேண்டும் பேச்சு, இலிங்கம் மெச்சி, ஆமாம், ஆமாம் எனக்கூறவேண்டும். சொல்லொருவிதம் நடையொருவிதம் எனின் கூடல சங்கன் எவ்விதம் அருள்வான் ஐயனே? Translated by: Smt. Kalyani Venkataraman, Chennai
Marathi Translation तोंडातील वाणी पडता बाहेरी वाटावे हारापरी मोतियाचा दिसो शब्द शब्दी, दिप्ती माणिकांची तृप्ती लिंगाची, तदा होय स्फटिक शलाका, - शब्दांच्या प्रभावे लिंगदेव म्हणावे, धन्य धन्य कूडलसंगम देवा ! कैसा होई प्रसन्न बोला परी आचरण, जेथे नाही अर्थ - इहलोकांचे स्वामी इहलोकी ""राहून, इहलोकांसाठी ऐहिक दृष्टि देणारे महात्मा बसवेश्वर येथे शिवशरणांच्या योग्यतेची कल्पना देतात. ते म्हणतात ""तुमच्या बोलातील शब्द मोत्याच्या हाराप्रमाणे असावेत तसेच तुमची वाणी माणिकाच्या दीप्ती प्रमाणे तेजस्वी असावी. तुमच्या शब्दप्रभावाने मन पटलावर स्फटिक शलाखा (विजेपेक्षा अधिक) प्रमाणे चमकून जावे. ते शब्द वा वचन ऐकून प्रत्यक्ष इष्टलिंगदेवानेही धन्य धन्य म्हणून आनंदात डुलावे, वचनानुसार वर्तन नसल्यास माझा कुडलसंगमदेव कदापि प्रसन्न होणार नाही. इत्यर्थ- बोल कसे व का ? याचे स्पष्टीकरण वरील वचनात महात्मा बसवेश्वरानी तीन प्रकारच्या उपमा देऊन दाखविले आहे. एकतर ते मोतियाच्या माळेसम वाटाव्यात माणिकाचे तेज त्यात झळकावे. स्फटिक शालाखे प्रमाणे ते दीप्तिवंत व्हावे. किंबहुना शब्दातील गोडीतच प्रत्यक्ष इष्टलिंग डुलावा असे केव्हा होईल ? बोलेल्या प्रमाणे तुमचा आचार असेल तरच प्रभू प्रसन्न होईल. तुमचे खोटे शब्द माझ्या कूडलसंगमदेवाला कदापि प्रसन्न करु शकणार नाहीत हे महात्मा बसवेश्वरांनी आचार महतीस्तव येथे वर्णिले आहे . जगात शब्दरूप पुष्पमाला गुंफून शब्दानी फलके रंगवून त्यांत उच्चभ्रूत्व दाखवून श्रोतेरूपी महादेवाला डुलवून, हसवून, खेळवून जगाच्या डोक्यात राख उधळून जाणाऱ्या महाभागांबद्दल महात्मा बसवेश्वरास किती किळस वाटे हे त्यांच्या वरील वचनातील आचार या ध्वनीने स्पष्ट केले आहे. शब्द पांडित्याने प्रत्यक्ष ब्रहस्पतीस लाजवावे हे एखाद्यास शक्य होईल पण बोलक्या शेखोबाचे ब्रहस्पतित्व माझा कूडलसंगमदेव सहनही करू शकणार नाही. व ते तशांचे काही चालूही देणार नाही असे महात्मा बसवेश्वर ""माझा कूडलसंगमदेव प्रसन्न होणार नाही"" या उक्तीने स्पष्ट केले आहे. Translated by Rajendra Jirobe, Published by V B Patil, Hirabaug, Chembur, Mumbai, 1983 बोलणे मोत्याच्या हाराप्रमाणे असावे बोलणे माणिक्याच्या दीप्तीप्रमाणे असावे. बोलणे स्फटिक शलाकेप्रमाणे असावे. बोलणे लिंगाला प्रसन्न करणारे असावे. कूडलसंगमदेवा, बोले तैसा चाले नसेल तर त्यांना प्रसन्न कसा होईल? Translated by Shalini Sreeshaila Doddamani
Urdu Translation جب بھی الفاظ نطق سےنکلیں موتیوں کی لڑی کا ہواحساس یوںتری گفتگو کا ہو انداز جیسے ہیرے میں جگمگا ہٹ ہے جیسے بلّورمیں صفائی ہے ایک اک لفظ میں صداقت ہو جس کی توثیق بھی ہولِنگا سے جب نہ قول وعمل میںفرق رہے تجھ کوحاصل رہےگی شام وسحر کوڈلا سنگما کی خوشنودی Translated by: Hameed Almas
ಕನ್ನಡ ವ್ಯಾಖ್ಯಾನ ನಡೆ-ನುಡಿ ಪರಿಶುದ್ಧವಾಗಿರಬೇಕು ವಾಕ್ಯವು ಭಾಷೆಯ ಒಂದು ಘಟಕ, (Sentence is a unit of a language.) ಮುತ್ತಿನ ಹಾರದಂತಿರಬೇಕು ಅ ವಾಕ್ಯಬಂಧ ಅಥವಾ ವಾಕ್ಯರಚನೆ. ಮುತ್ತಿನ ಹಾರದ ಒಂದೊಂದು ಮುತ್ತೂ ಬೆಲೆಬಾಳುವಂತೆ ವಾಕ್ಯದ ಒಂದೊಂದು ಪದವೂ ಅರ್ಥವತ್ತಾಗಿರಬೇಕು. ಅರ್ಥವೇ ಪದದ ನೈಜ ಮೌಲ್ಯ. ಮುತ್ತಿನ ಹಾರದ ಮುತ್ತುಗಳು ಒಂದು ಮತ್ತೊಂದಕ್ಕೆ ಹತ್ತಿರವಿದ್ದು ಪರಸ್ಪರ ಸಂಬಂಧ ಹೊಂದಿರುವಂತೆ ವಾಕ್ಯದ ಪದಗಳೂ ಹತ್ತಿರದಲ್ಲಿದ್ದು ಪರಸ್ಪರ ಸಂಬಂಧವಿರುವವುಗಳಾಬೇಕು. ಇದನ್ನೇ ಸಂಸ್ಕೃತದ ಲಾಕ್ಷಣಿಕರು 'ಆಸಕ್ತಿ' 'ಆಕಾಂಕ್ಷೆ' ಎಂಬ ಪದಗಳಿಂದ ಕರೆದಿರುವುದು. 'ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು'; ಮಾಣಿಕ್ಯದ ಪ್ರಭೆಯು ಸ್ಫುರಿಸುವಂತೆ ಸ್ಫುಟವಾಗಿ ಅರ್ಥವನ್ನು ಸ್ಫುರಿಸಬಲ್ಲ ಪದಗಳನ್ನು ಪ್ರಯೋಗಿಸಬೇಕು. ಮಾಣಿಕ್ಯದ ಪ್ರಭೆಯು ಸ್ವಯಂಪ್ರಕಾಶ. ಅಂತೆಯೇ ಪ್ರಯೋಗಿಸಿದ ಪದಗಳೂ ಸ್ವಯಂವೇದ್ಯವೆನಿಸಿಕೊಳ್ಳಬೇಕು. 'ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು'; ಸ್ಪಟಿಕದ ಹರಳಿನ ಸಲಾಕೆ ಬಹು ನಿರ್ಮಲವಾಗಿರುತ್ತದೆ. ಆ ಹರಳಿನ ಗಟ್ಟಿಯ ಕೆಳಗೆ ಒಂದು ಕೆಂಪು ಹೂವನ್ನಿರಿಸಿ ಮೇಲಿಂದ ನೋಡಿದರೆ ಇಡೀ ಹರಳೇ ಕೆಂಪಾಗಿ ತೋರುವುದು. ಅಂತೆಯೇ ನಮ್ಮ ಮಾತುಗಳು ನಮ್ಮ ಹೃದಯವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವಂತಿರಬೇಕು. ಒಳಗೆ ಕುಟಿಲ ಹೊರಗೆ ವಿನಯ ಆಗಬಾರದು. ನುಡಿದರೆ ಲಿಂಗಮೆಚ್ಚಿ 'ಅಹುದಹುದೆನ್ನ ಬೇಕು'; ಲೋಕ ಮೆಚ್ಚುವಂತೆ ಸಿಹಿಯ ಮಾತುಗಳನ್ನಾಡುವುದು ಬಹು ಸುಲಭ; ಆದರೆ ದೇವರೂ ಕೂಡ ಮೆಚ್ಚಿ 'ಹೌದು ನೀನು ಹೇಳುತ್ತಿರುವುದು ಸರಿ' ಎನ್ನುವಂತಿರಬೇಕು ಹಾಗೆ ಮಾತನಾಡಬೇಕು. ಹೀಗೆ ನುಡಿಯ ಕಲಿತರೂ ಸಾಲದು ಅದನ್ನು ನಡೆಯಲ್ಲಿ ಅಳವಡಿಸಿಕೊಳ್ಳಬೇಕು. ಆಗಲೇ ದೇವರ ಒಲುಮೆಯು ದೊರೆಯುವುದು. ನುಡಿಯು ನಡೆಯಲ್ಲಿ ಅಳವಡದಿದ್ದರೆ ದೇವರು ಒಲಿಯಲಾರ. ಇಂತು ನುಡಿಯ ಕಲಿಸಿದ ಬಸವಣ್ಣ ಮುಂದಿನ ವಚನದಲ್ಲಿ ನಡೆಯ ಕಲಿಸುವನು. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.