ಮನದ ಕೊನೆಯ ಮೊನೆಯ ಮೇಲೆ
ಮನೆಯ ಮಾಡಿಕೊಂಡಿಪ್ಪನೊಬ್ಬ ದಾಸೋಹಿ.
ಆದಿವಿಡಿದು ಬಂದಾತನೆ ಭಕ್ತ:
ಅನಾದಿವಿಡಿದು ಬಂದಾತನೆ ಜಂಗಮ!
ಆದಿ ಗುರು: ಅನಾದಿ ಶಿಷ್ಯ!
ಈ ಉಭಯ ಕುಳಸ್ಥಳವ ಬಲ್ಲರೆ ಆತ ಲಿಂಗಸಂಬಂಧಿ,
ಕೂಡಲಸಂಗಮದೇವಾ.
Transliteration Manada koneya moneya mēle
maneya māḍikoṇḍippanobba dāsōhi.
Ādiviḍidu bandātane bhakta:
Ādiviḍidu bandātane jaṅgama!
Ādi guru: Anādi śiṣya!
Ī ubhaya kuḷasthaḷava ballare āta liṅgasambandhi,
kūḍalasaṅgamadēvā.
Manuscript
English Translation 2 One dedicated to the work of God
Has built a house
Upon the sharpest trip of mind.
He is a bhakta who has come
With time; he is a Jaṅgama
Who has come with timelessness!
The Guru is of time,
And timeless the disciple is !
And he who knows
The nature of these two
Is Liṅga 's friend,
O Kūḍala saṅgama Lord!
Translated by: L M A Menezes, S M Angadi
Hindi Translation मन के अग्रभाग पर
घर बनाकर रहता है एक दासोही ।
आदि से आगत ही भक्त है;
अनादि से जो आगत ही जंगम है;
आदि गुरु है, अनादि शिष्य,
यह उभय स्वरूप का ज्ञाता ही
लिंग-संबंधी है, कूडलसंगमदेव॥
Translated by: Banakara K Gowdappa
Telugu Translation చిత్తాగ్రపు శిఖరముపై
ఇల్లు కట్టుకొని యుండె ఒక్క దాసోహి;
ఆదిని బట్టివచ్చు వాడే భక్తుడు;
అనాదిని కొనివచ్చువాడే జంగముడు;
ఆదియే గురుడనాదియే శిష్యుడు; ఈ యుభయకుల స్థలముల
తెలిసినవాడే లింగసంబంధి కూడల సంగమదేవా
Translated by: Dr. Badala Ramaiah
Tamil Translation மனதின் இறுதி முனையின் மீது
ஒரு இலிங்கம் வீட்டை அமைத்துக்
கொண்டிருக்கும் குருவின் மூலம்
வந்தவன் பக்தன், சீடனின் மூலம்
வந்தவன் ஜங்கமன், ஆதிகுரு
அனாதிசீடன், இவ்விரு தலங்களை
அறியின் அவன் இலிங்கத்துடனுறைபவன்
கூடல சங்கமதேவனே.
Translated by: Smt. Kalyani Venkataraman, Chennai
Marathi Translation
मनाच्या खोलीच्या एका कोपऱ्यात घर करुन आहे एक दासोही.
आदिपासून आलेला भक्त, आदिपासून आलेला जंगम,
आदि गुरु, अनादी शिष्य या उभयताचे मर्म
जाणणारा लिंगसंबंधी कूडलसंगमदेव.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ವ್ಯಾಖ್ಯಾನಕಾರರ ಪ್ರಕಾರ ಈ ವಚನದಲ್ಲಿ ಭಕ್ತ ಮತ್ತು ಜಂಗಮ, ಗುರು ಮತ್ತು ಶಿಷ್ಯ ಎಂಬೆರ(ಡೆರ)ಡರ ಸ್ವರೂಪವನ್ನು ಬಲ್ಲವನೇ “ಲಿಂಗ ಸಂಬಂಧಿ” ಎನಿಸುವನು. ಆದರೆ ಭಕ್ತ-ಜಂಗಮ-ಗುರು-ಶಿಷ್ಯ ಸೇರಿ ನಾಲ್ಕಾಗುವುದರಿಂದ-ವಚನದ “ಉಭಯ”ಎಂಬ ಪ್ರಯೋಗ ಅನನ್ವಯವಾಗುತ್ತದೆ.
ಮತ್ತು ವ್ಯಾಖ್ಯಾನಕಾರರು ಭಕ್ತ-ಜಂಗಮ ಮತ್ತು ಗುರು-ಶಿಷ್ಯ ಎಂಬ ಉಭಯ(?)ದಲ್ಲಿ ಶಿಷ್ಯಿನನ್ನು ಕುರಿತಂತೆ-“ಪ್ರಾಣಲಿಂಗವನ್ನು ನಿಃಕಲ ಮಹಾಲಿಂಗವಾಗಿ ಗ್ರಹಿಸಿ ಬಂದ ಮಹಾಜ್ಞಾನಿ ಜಂಗಮನೇ ಶಿಷ್ಯ” ಎಂದಿರುವುದು ಲೋಕವಿರುದ್ಧವಾಗಿದೆ.
ಮತ್ತು ಈ ವಚನವನ್ನು ಯೋಗಕ್ಕೆ ಸಂಬಂಧಿಸಿದಂತೆ ಅರ್ಥೈಸುವಲ್ಲಿ ವ್ಯಾಖ್ಯಾನಕಾರರು ದಾರಿತಪ್ಪಿ ಸುತ್ತುಬಳಸಿ ವಚನದ ಇಂಗಿತವನ್ನೇ ತಿರುಚಿರುವರು.
ವಚನದ ಇಂಗಿತವಾದರೋ -ಭಕ್ತ ಮತ್ತು ಜಂಗಮ ಎಂಬ ಉಭಯದ ವಿವರ(ಕುಳಸ್ಥಳ)ವನ್ನು ಹೇಳುವುದೇ ಆಗಿದೆ. ಆದಿಯೆಂದರೆ ಗುರು –ಅಲ್ಲಿಂದ ಬಂದಾತ ಭಕ್ತ. ಅನಾದಿಯೆಂದರೆ ಲಿಂಗ–ಅಲ್ಲಿಂದ ಬಂದಾತನೇ ಜಂಗಮ ಎನ್ನುವುದೇ ಆ ವಿವರವೂ ಆಗಿದೆ. ಆದರೆ ಹಾಗೆ ಆಗಲು “ಆದಿವಿಡಿದು ಬಂದಾತನೇ ಭಕ್ತ, ಅನಾದಿವಿಡಿದು ಬಂದಾತನೇ ಜಂಗಮ ; ಆದಿ ಗುರು, ಅನಾದಿ ಶಿಷ್ಯ” ಎಂಬಲ್ಲಿ -ಶಿಷ್ಯ ಎಂಬ ಪಾಠಕ್ಕೆ ಬದಲಾಗಿ “ಲಿಂಗ”ವೆಂಬ ಪಾಠವನ್ನು ಕಲ್ಪಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ ಈ ಮೇಲೆ ಕುರಿತ ವಚನ ಖಂಡದಲ್ಲಿ–ಆದಿವಿಡಿದು ಬಂದಾತನು ಗುರುವೆಂದೂ, ಅನಾದಿವಿಡಿದು ಬಂದಾತನು ಜಂಗಮವೆಂದೂ ಹೇಳಿಯಾದ ಮೇಲೆ –ಆದಿಯೆಂದರೆ ಗುರುವೆಂದೂ, ಅನಾದಿಯೆಂದರೆ ಲಿಂಗವೆಂದೂ ಹೇಳುವುದು ಅತ್ಯಂತ ತರ್ಕಬದ್ಧವಾಗುವುದು. ಮತ್ತು ಆ ಲಿಂಗವು ಭಕ್ತನ ಉದ್ಧಾರಕ್ಕಾಗಿ ಅವನ ಮನದ ಕೊನೆಯ ಮೊನೆಯಲ್ಲಿ ನಾನು ನಿನ್ನ ದಾಸನೆಂಬಂತೆ ಸಿದ್ಧವಾಗಿರುವುದಲ್ಲದೆ –ಜಂಗಮರೂಪದಲ್ಲಿ ಮನೆಯ ಮುಂದೆಯೇ ನಿಂತಿರುವನು –ಎಂದು ವಚನದ ಮೊದಲನೇ ವಾಕ್ಯಕ್ಕೂ ಸುಗಮವಾಗಿಯೇ ಅರ್ಥೈಸಲು ಇಂಬಾಗುವುದು.
ಭಕ್ತನು ಗುರುವಿಂದ ಸ್ವೀಕರಿಸಿದ ಲಿಂಗವನ್ನೂ ಆ ಲಿಂಗದೇವನ ಚರರೂಪವಾದ ಜಂಗಮವನ್ನೂ ಉಪಾಸಿಸಿದವನೇ ಪಕ್ಕಾ “ಲಿಂಗಸಂಬಂಧಿ” (=ಲಿಂಗವಂತ). ಗುರು ಕೊಟ್ಟ ಸ್ಥಾವರಲಿಂಗವನ್ನು ಮಾತ್ರ ಉಪಾಸಿಸುವವನು “ಲಿಂಗಸಂಬಂಧಿ”ಯಾಗುವುದಿಲ್ಲ ಅವನು ಲಿಂಗವಿಹೀನನೇ ಎಂಬುದು ವಚನದ ಪರಮಾರ್ಥ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು