ಅರಿದರಿದು! ಸಮಗಾಣಿಸಬಾರದು:
ತ್ರಾಸಿನ ಕಟ್ಟಳೆಯಂತಿನಿತು ವೆಗ್ಗಳವಾದರೆ
ಈಶ್ವರನೊಡೆಯಿಕ್ಕದೆ ಮಾಣುವನೆ?
ಪಾತ್ರ ಅಪಾತ್ರವೆಂದು ಕಂಡರೆ ಶಿವನೆಂತು ಮೆಚ್ಚುವನು?
ಜೀವ ಜೀವಾತ್ಮವ ಸರಿಯೆಂದು ಕಂಡರೆ
ಸಮವೇದಿಸದಿಪ್ಪನೆ ಶಿವನು?
ತನ್ನ ಮನದಲ್ಲಿ `ಯತ್ರ ಜೀವ ಸ್ತತ್ರ ಶಿವ'ನೆಂದು
ಸರ್ವಜೀವದಯಾಪಾರಿಯಾದಲ್ಲಿ, ಕೂಡಲಸಂಗಮದೇವನು
ಕೈಲಾಸದಿಂದ ಬಂದು ಎತ್ತಿಕೊಳ್ಳದಿಪ್ಪನೆ?
Transliteration Aridaridaridu! Samagāṇisabāradu:
Trāsina kaṭṭaḷeyantinitu veggaḷavādare
īśvaranoḍeyikkade māṇuvane?
Pātra apātravendu kaṇḍare śivanentu meccuvanu?
Jīva jīvātmava sariyendu kaṇḍare
samavēdisadippane śivanu?
Tanna manadalli `yatra jīva tatra śiva'nendu
sarvajīvadayāpāriyādalli, kūḍalasaṅgamadēvanu
kailāsadinda bandu ettikoḷḷadippane?
Manuscript
English Translation 2 By knowledge and more knowledge alone
You cannot make the two sides even:
If you exceed by even a straw,
According to the principle that rules
A pair of scales,
Will not God surely strike?
If you observe with eyes that say
The worthy is the unworthy, then
Will Śiva approve ?
If you observe with eyes that say
The soul is equal to God,
Will not Śiva take it well?
When in your heart you’re merciful
To all that lives, because
‘ Where life is, Śiva is,'
Will not Lord Kūḍala saṅgama,
Descending from Heaven,
Sure, lift you to His heart?
Translated by: L M A Menezes, S M Angadi
Hindi Translation असाध्य असाध्य है! समान नहीं मानना चाहिए
तराजु के नियम से थोडा अधिक हो,
तो ईश्वर घटाना छोडेंगे?
पात्र को अपात्र मानो, तो शिव कैसे मानेंगे?
जीव और जीवात्मा को समान मानो
तो शिव उसे ठीक नहीं समझेगा?
तुम अपने मन में ‘यत्र जीवः तत्र शिवः’
मानकर सर्वजीवदयापर हो
तो कूडलसंगमदेव कैलास से आकर नहीं उठा लेंगे?
Translated by: Banakara K Gowdappa
Telugu Translation తెలిసి తెలిసి సమత చూపరాదు;
త్రాచు ములువోలె యిటునటు చెదరకున్న
ఈశ్వరుడు హతమార్పక విడుచునే?
పాత్రు డపాత్రుడని చూడ శివుడెట్లు మెచ్చు?
జీవ జీవాత్ముల సరియని చూడ సమవేది గాకుండునే?
శివుడు తన మనమున
‘‘యత్రజీవస్తత్ర శివుడంచు’’
సకల జీవదయామయుడై నచో
సంగమదేవుడు కై లాసమును
విడివచ్చి తన్నెత్తుకొన కుండునే?
Translated by: Dr. Badala Ramaiah
Tamil Translation அறிந்தறிந்து, சமமான கண்ணோட்டத்தைப்
பெறவியலாது, துலாக்கோலின்
எடை சிறிது அதிகமாயின் இறைவன்
பொடிக்காது விடுவானோ? தகுதி
தகுதியற்றது எனக்காணின் சிவன்
எப்படி மெச்சுவான்? ஜீவனும் ஆன்மாவும்
சமம் எனக்காணின் ஒருமித்துக் கொள்ளாதிருப்பனோ சிவன்?
தன் மனத்தில் “யத்ரஜீவ தத்ரசிவன்” என்று
அனைத்து உயிர்களிடத்திலும் அன்பு செலுத்தின்
கூடல சங்கமதேவன் கைலாசத்திலிருந்து
வந்து எடுத்துக் கொள்ளாமல் இருப்பானோ?
Translated by: Smt. Kalyani Venkataraman, Chennai
Marathi Translation
जाणून बुजून ! भेदभाव करु नये.
तराजूचा काटा थोडा जरी कमी जास्त
होता ईश्वर शिक्षा केल्याशिवाय राहील?
पात्र-अपात्र हा भेदभाव केला तर शिव प्रसन्न होईल?
जीव जीवांना समान पाहिले तरशिव प्रसन्न का होणार नाही?
आपल्या मनात `यत्र जीव तत्र शिव` मानले.
सर्व जीवावर दया करणारे कूडलसंगमदेव
कैलासला येऊन घेऊन जाणार नाही का ?
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಎಲ್ಲರನ್ನೂ ಸಮಾನವಾಗಿ ಕಾಣುವುದೆಂಬುದು ಸುಲಭವಲ್ಲವೆಂದೇ ಪ್ರಾರಂಭವಾಗುವ ಈ ವಚನ –ಯಾವನಾದರೂ ತಾನು ಇನ್ನೊಬ್ಬನಿಗಿಂತ ಅಧಿಕನೆಂದು ಮೆರೆಯುವುದನ್ನು ತೀವ್ರವಾಗಿ ನಿಷೇಧಿಸುತ್ತದೆ.
ತಕ್ಕಡಿಯಲ್ಲಿ ತೂಕಕ್ಕಿಂತ ಅಧಿಕವಾದ ಉಂಡೆಯನ್ನು ಶೆಟ್ಟಿಯು ಒಡೆದು ಸಮತೂಕಮಾಡುವಂತೆ-ಸಾಧಕನ ಹೆಚ್ಚು ಕುಂದಿನ ವಿಷಯವನ್ನು ಮುರಿದು ಶಿವನು ಸಮಮಾಡುವನೆನ್ನುತ್ತಿರುವರು ಬಸವಣ್ಣನವರು.
ಆದ್ದರಿಂದ ಆದರ್ಶಸಾಧಕನು ಸಮದರ್ಶಿಯಾಗಿರಬೇಕು –ಜೀವಕ್ಕೆ ಜೀವ ಸಮವೆಂದು ಎಲ್ಲರಲ್ಲಿ ಸಮಾನ ಗೌರವದಿಂದ ನಡೆದುಕೊಳ್ಳಬೇಕು –ಆಗ ಶಿವನು ಸುಪ್ರಸನ್ನನಾಗುವನು.
ಮತ್ತು ಈ ಮಾನವಸ್ತರದಲ್ಲಿಯೇ ಅಲ್ಲ–ಎಲೆಲ್ಲಿ ಜೀವವಿದೆಯೋ ಅಲ್ಲೆಲ್ಲ ಶಿವನಿರುವನೆಂದು “ಸರ್ವ ಜೀವದಯಾಪಾರಿ”ಯಾಗಿದ್ದರೆ ಸಾಕ್ಷಾತ್ ಶಿವನೇ ಕೈಲಾಸಗಿರಿಯಿಂದಿಳಿದು ಬಂದು ಆ ಭಕ್ತಶ್ರೇಷ್ಠನನ್ನು ಎತ್ತಿ ಹೆಗಲಮೇಲಿಟ್ಟುಕೊಂಡು ಮೆರೆಸುವನು.
ವಿ : 442ನೇ ವಚನವನ್ನು ನೋಡಿ. ಅಲ್ಲಿ ಮತ್ತು ಇಲ್ಲಿ ಪ್ರಸ್ತಾಪವಾಗಿರುವ ತ್ರಾಸು –ಗೆರೆಗಳೆಳೆದ ದಂಡದ ಒಂದು ಕೊನೆಗೆ ತಗುಲಿಸಿದ ಒಂದೇ ತಟ್ಟೆಯ ತಕ್ಕಡಿಯೆನಿಸುವುದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು