•  
  •  
  •  
  •  
Index   ವಚನ - 806    Search  
 
ಸ್ಥಾವರ ಜಂಗಮವೆಂಬುಭಯ ಪಕ್ಷ ಒಂದೇ, ಆವ ಮುಖದಲಿ ಬಂದರೂ ತೃಪ್ತಿಯೊಂದೇ: ಕೂಡಲಸಂಗಮದೇವರ ಆಪ್ಯಾಯನವೊಂದೇ.
Transliteration Sthāvara jaṅgamavemba ubhaya pakṣa onde, āva mukhadali bandarū tr̥ptiyondē: Kūḍalasaṅgamadēvara āpyāyanavondē.
Manuscript
English Translation 2 The standing image and the Jaṅgama Are both one sect : Whichever way it come, the joy’ s the same: Lord Kūḍala saṅgama’s food is the same Translated by: L M A Menezes, S M Angadi
Hindi Translation स्थावर जंगम उभय पक्ष एक ही है । किसी भी मुख से आवे तृप्ति एक ही है । कूडलसंगमदेव का आप्यायन एक ही है । Translated by: Banakara K Gowdappa
Telugu Translation స్థావర జంగమములీ రెండూ నొకటే! ఏ ముఖమున వచ్చినా తృప్తి యొకటే; సంగమదేవుని ఆప్యాయన మొకటే! Translated by: Dr. Badala Ramaiah
Tamil Translation ஸ்தாவர ஜங்கமம் எனும் இரு பட்சமும் ஒன்றுதான் எந்த முகத்தோடு வரினும் நிறைவு ஒன்றுதான் கூடல சங்கமதேவனின் உவகையும் ஒன்றுதான் நிறைவும் ஒன்றுதான் Translated by: Smt. Kalyani Venkataraman, Chennai
Marathi Translation स्थावर (लिंग), जंगम (चर) दोन्ही एक आहे. कोणत्याही मुखातून आली तरी तृप्ती एक आहे. कूडलसंगमदेव दोघावर प्रसन्न आहे. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಧರಿಸಿದ ಲಿಂಗವಾಗಲಿ, ಚರಿಸುವ (ಜಂಗಮ)ಲಿಂಗವಾಗಲಿ -ಎರಡೂ ಒಂದೆ. ಕಟ್ಟಿದ ಆ ಕಲ್ಲನ್ನು ದೇವರೆಂದು ಪೂಜಿಸಿ - ಈ ಮಾನವದೇವ(ಜಂಗಮ)ನನ್ನು ನರನೆಂದು ಉಪೇಕ್ಷಿಸಿದರೆ ಆ ಮಾಡಿದ ದೇವರ ಪೂಜೆ ವ್ಯರ್ಥ. ದೇವರ ಪೂಜೆಯ ಸಫಲತೆಯು ಅಡಗಿರುವುದು ಮಾನವಾವತಾರವು ಅತ್ಯಂತ ಮಹಿಮಾನ್ವಿತವೆಂದು ಮನವರಿಕೆ ಮಾಡಿಕೊಳ್ಳುವುದರಲ್ಲಿಯೆ. ಲಿಂಗ ಮತ್ತು ಜಂಗಮ ಭಿನ್ನ ಭಿನ್ನವೆಂಬುದೂ ನಿಜವಲ್ಲ –ಜಂಗಮಕ್ಕಿಂತ ಲಿಂಗ ಶ್ರೇಷ್ಠವೆಂಬುದೂ ನಿಜವಲ್ಲ. ಜಂಗಮದ ಹಸಿವೇ ಲಿಂಗದ ಹಸಿವು, ಜಂಗಮಾರ್ಪಿತವೇ ಲಿಂಗಾರ್ಪಿತ, ಜಂಗಮತೃಪ್ತಿಯೇ ಲಿಂಗತೃಪ್ತಿ. ವಿ : ಈ ವಚನದಲ್ಲಿ ಇಷ್ಟಲಿಂಗವನ್ನೂ ಸ್ಥಾವರಲಿಂಗವೆಂದೇ ಬಸವಣ್ಣನವರು ಕರೆದಿರುವುದನ್ನು ಗಮನಿಸಿರಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು