ಮುತ್ತು ಉದಕದಲಾಗದು, ಉದಕ ಮುತ್ತಿನಲಾಗದು:
ತತ್ತ್ವ ಘಟಿಸಿದ ಸುಮುಹೂರ್ತದಲ್ಲಲ್ಲದೆ,
ಚಿತ್ತವೇದ್ಯವಾಗದು, ಸದ್ಗುರುವಿನ ಕರುಣಕ್ಕಲ್ಲದೆ.
ಕರ್ತೃ ಕೂಡಲಸಂಗಮದೇವರ ಒಲವಿನ ದಯದ
ಚಿತ್ತವಿಡಿದಂಗಲ್ಲದೆ, ಶಿವತತ್ತ್ವ ಸಾಹಿತ್ಯವಾಗದು.
Transliteration Muttu udakalāgadu, udaka muttinalāgadu:
Tattva ghaṭisida sumuhūrtadallade,
cittavēdyavāgadu, sadguruvina karuṇakkallade.
Kartr̥ kūḍalasaṅgamadēvara olavina dayada
cittaviḍidaṅgallade, śivatattva sāhityavāgadu.
Manuscript
English Translation 2 Unless the law's at work
At an auspicious point of time,
No pearl can grow from water,
Nor water grow from pearl.
Unless the holy Guru' s hand
Is raised to bless,
No understanding penetrates the mind.
The Śiva- hood can be attained by none
But one who has won the love and mercy
Of Lord Kūḍala saṅgama
Translated by: L M A Menezes, S M Angadi
Hindi Translation तत्व घटित शुभ मुहूर्त के अतिरिक्त
न मोती पानी से बन सकता है,
न पानी मोति से ।
सद्गुरु कारुण्य बिना
चित्त मनोवेद्या नहीं होता
कूडलसंगमदेव के कृपा-पात्र को छोड़
दूसरों को शिवतत्त्व संबंध नहीं हो सकता ॥
Translated by: Banakara K Gowdappa
Telugu Translation నీటిచే ముత్యముకాదు; ముత్యమున నీరు కాదు;
తత్త్వము ఘటించు సుముహూర్త మందగునుగాని;
చిత్త వేద్యముకాదు సద్గురుని కరుణవృత్తిచే దప్ప;
కర్తకూడల సంగమదేవుడు మెచ్చు
దయా హృదయమంద కే శివతత్త్వ సాహిత్య మేర్పడదు
Translated by: Dr. Badala Ramaiah
Tamil Translation முத்து நீரில் தோன்றாது, நீர் முத்தில் தோன்றாது
சிவதத்துவத்தை உணர்வதற்குக் காலம் கனிய வேண்டும்
மேலான குருவின் அருளின்றி மனத்தால் அறியவியலாது
Translated by: Smt. Kalyani Venkataraman, Chennai
Marathi Translation
मोती पाणी होत नाही. जल मोती होत नाही सुमुहूर्ताविना.
आत्मसाक्षात्कार होत नाही सद्गरुंच्या करुणेविना,
कर्ता कूडलसंगमदेवाच्या दयेविना
चित्त एकाग्रता-शिवतत्त्वसमरसता साध्य होत नाही.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶಿವತತ್ತ್ವವು ಸಾಧ್ಯವಾಗಲು ಗುರುವು ಕರುಣಿಸಬೇಕು, ಶಿವನೂ ಒಲಿಯಬೇಕು ಎಂಬುದು ಈ ವಚನದ ಅಭಿಪ್ರಾಯ.
ಅಂಗವೆಲ್ಲಾ ಲಿಂಗವಾಗಿ –ಅಲ್ಲಿ ಅಂಗಗುಣಲವಲೇಶವೂ ಇಲ್ಲದ “ಶಿವತತ್ತ್ವಸಾಹಿತ್ಯ” ತನಗಾಗಲು -ಭಕ್ತನಿಗೆ ಘಳಿಗೆ ಕೂಡಿರಬೇಕು. ಮುತ್ತಾಗುವುದೇನು ಸಾಮಾನ್ಯವೆ ? ಚಿಪ್ಪಿನ ಬೆದೆ, ಸ್ವಾತಿಯ ಹದ ಕೂಡಿ ಬಂದ ಹೊರತು –ಆ ಮುತ್ತು ಘಟಿಸುವುದಿಲ್ಲ, ಹಾಗೆಯೇ ಗುರುವಿನ ಕರುಣೆ ಶಿವನ ಒಲುಮೆ ಭಕ್ತನಲ್ಲಿ ಸಂಕ್ರಮಿಸಿದ ಹೊರತು ಅವನಿಗೆ ಶಿವತತ್ತ್ವ ಘಟಿಸುವುದಿಲ್ಲ.
ಈ ಸಂಬಂಧವಾಗಿ ಅಕ್ಕಮಹಾದೇವಿಯ ವಚನವೊಂದನ್ನು ನೋಡಬಹುದು : “ಅರಸಿ ತೊಳಲಿದರಿಲ್ಲ, ಹರಸಿ ಬಳಲಿದರಿಲ್ಲ, ಬಯಸಿ ಹೊಕ್ಕರಿಲ್ಲ,ತಪಸ್ಸು ಮಾಡಿದರಿಲ್ಲ. ಅದು ತನ್ನತಾನಹ ಕಾಲಕ್ಕಲ್ಲದೆ ಸಾಧ್ಯವಾಗದು, ಶಿವನೊಲಿದಲ್ಲದೆ ಕೈಗೂಡದು. ಚೆನ್ನಮಲ್ಲಿಕಾರ್ಜುನನೆನಗೊಲಿದನಾಗಿ ನಾನು ಸಂಗನ ಬಸವಣ್ಣನ ಶ್ರೀಪಾದವ ಕಂಡು ಬದುಕಿದೆನು” (ನಾನು ಸಂಪಾದಿಸಿರುವ ಅಕ್ಕನ ವಚನಗಳು 156)
ವಿ : ಶೈವಸಿದ್ಧಾಂತದ ಪ್ರಕಾರ : “ಆ ಪರಮಶಿವನ ಅನುಗ್ರಹಶಕ್ತಿಯೊಂದೇ ಮಲಾಪನಯನಕ್ಕೆ ಸಾಧನವಾಗಿರುತ್ತದೆ. ಇದಕ್ಕೆ ತಾಂತ್ರಿಕ ಭಾಷೆಯಲ್ಲಿ ‘ಶಕ್ತಿಪಾತ’ ಎಂದು ಕರೆಯುತ್ತಾರೆ. ಪರಮಾತ್ಮನ ಅನುಗ್ರಹದಿಂದಲೇ ಜೀವನು ಭವಬಂಧನದಿಂದ ಮುಕ್ತಿಯನ್ನು ಹೊಂದಿ ಶಿವತತ್ತ್ವವನ್ನು ಹೊಂದುತ್ತಾನೆ. ಈ ಅನುಗ್ರಹಶಕ್ತಿಗೆ ದೀಕ್ಷಾ ಎಂದು ಹೆಸರು. ಪರಮಾತ್ಮಸ್ವರೂಪನಾದ ಆಚಾರ್ಯನು ಈ ದೀಕ್ಷೆಯ ದ್ವಾರಾ ಶಿಷ್ಯನನ್ನು ಉದ್ಧಾರಮಾಡುತ್ತಾನೆ.” (ಬಲದೇವ ಉಪಾಧ್ಯಾಯರ ಭಾರತೀಯ ದರ್ಶನ -ಪುಟ 551, ಪ್ರಃ ಮೈ.ವಿವಿ. 1970).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು