•  
  •  
  •  
  •  
Index   ವಚನ - 808    Search  
 
ಕಾಯದ ಗಡಣೆ ಕೆಲಬರಿಗುಂಟು, ಜೀವದ ಗಡಣೆ ಕೆಲಬರಿಗುಂಟು, ಭಾವದ ಗಡಣೆ ಕೆಲಬರಿಗುಂಟು, ವಚನದ ಗಡಣೆ ಕೆಲಬರಿಗುಂಟು: ಪ್ರಾಣಲಿಂಗದ ಗಡಣೆ ಆರಿಗೂ ಇಲ್ಲ, ಕೂಡಲಸಂಗನ ಶರಣರಲ್ಲಿ, ತಂಗಟೂರ ಮಾರಯ್ಯಂಗಲ್ಲದೆ.
Transliteration Kāyada gaḍaṇe kelabariguṇṭu, jīvada gaḍaṇe kelabariguṇṭu, bhāvada gaḍaṇe kelabariguṇṭu, vacanada gaḍaṇe kelabariguṇṭu: Prāṇaliṅgada gaḍaṇe ārigū illa, kūḍalasaṅgana śaraṇaralli taṅgaṭūra mārayyaṅgallade.
Manuscript
English Translation 2 Some care for body, others for the soul; Some for the heart, and others for their word: Amongst Kūḍala Saṅga’s Śaraṇas, None cares for Prāṇaliṅga, except Mārayya of Taṅgaṭūra. Translated by: L M A Menezes, S M Angadi
Hindi Translation कुछ लोगों को देह चिंता है; कुछ लोगों को जीव चिंता है; कुछ लोगों को भाव चिंता है; कुछ लोगों को वचन चिंता है; प्राणलिंग की चिंता कूडलसंगमदेव के शरणों में तंगटूर मारय्या के सिवा किसी को नहीं है॥ Translated by: Banakara K Gowdappa
Telugu Translation కాయపు గడన కొందరికుండె; జీవన గడన కొందరికుండె; : భావము గడన కొందరికుండె; వచనము గడన కొందరికుండె; ప్రాణలింగపు గడన యెవరికీ లేదు; సంగని శరణులందు తంగుటూరి మారయ్య కొక్కనికి తప్ప: Translated by: Dr. Badala Ramaiah
Tamil Translation சிலருக்கு உடல் சார்ந்த குறிக்கோள் உள்ளது. சிலருக்கு ஜீவன் சார்ந்த குறிக்கோள் உள்ளது. சிலருக்கு எண்ணம் சார்ந்த குறிக்கோள் உள்ளது. சிலருக்கு வசனம் சார்ந்த குறிக்கோள் உள்ளது பிராணலிங்கம் சார்ந்த குறிக்கோள் எவருக்கும் இல்லை கூடல சங்கனின் அடியாருள், தங்கட்டூரைச் சார்ந்த மாரய்யனுக்கின்றி ஏனையோருக்கு இல்லை. Translated by: Smt. Kalyani Venkataraman, Chennai
Marathi Translation देहाचे ध्येय काहीनां असते, जीवाचे ध्येय काहीनां असते. भावाचे ध्येय काहीनां असते, वचनाचेध्येय काहीनां असते. प्राणलिंगाचा ध्येय कोणाला नाही. कूडलसंगाच्या शरणातील तंगटूर मारय्याविना. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಎಲ್ಲಕ್ಕೂ ಮೂಲಭೂತವಾದ ಮತ್ತು ಪರಾತ್ಪರವಾದ ವಸ್ತು ಯಾವುದು –ಎಂಬುದೊಂದು ಮಹಾಪ್ರಶ್ನೆ. ಪಂಚೇಂದ್ರಿಯಗಮ್ಯವಾಗದ ಮತ್ತು ಮನ ಬುದ್ಧಿ ಮುಂತಾದ ಅಂತಃಕರಣಗ್ರಹಿಕೆಗೂ ಮೀರಿದ ಒಂದು ಸೂಕ್ಷ್ಮತಮವಸ್ತುವೇ ವಿಶ್ವಸಮಸ್ತಕ್ಕೂ ಉಗಮಪ್ರಾಯವಾಗಿದೆಯೆಂಬುದು ಸಾಮಾನ್ಯ ಉತ್ತರ. ಈ ಮಾರ್ಗವಾಗಿ ಜೀವ, ಭಾವ(ಪುರುಷ), ವಚನ(ವೇದ) ಮುಂತಾದವು ಅನುಸಂಧಾನಕ್ಕೊಳಗಾದವು ಇವಕ್ಕೆಲ್ಲ ವ್ಯತಿರಿಕ್ತವಾಗಿ ದೇಹವೇ ದೇವರೆಂದವರೂ ಉಂಟು, ಬಸವಣ್ಣನವರಾದರೋ ಪ್ರಾಣ ಲಿಂಗವೇ ಆ ಪರಾತ್ಪರವಸ್ತು ಎನ್ನುತ್ತಿರುವರು. ಗೋರಕ್ಷನಂಥ ರಸಸಿದ್ಧರಿಗೆ ವಜ್ರಕಾಯವೇ ಪರಮಸಿದ್ಧಿ, ಅದ್ವೈತಿಗಳಿಗೆ ತನ್ನನ್ನು ತಾನರಿತ ಜೀವವೇ ಪರಮಸಿದ್ಧಿ, ದ್ವೈತಿಗಳಿಗೆ ಭಕ್ತಿಭಾವವೇ ಪರಮಸಿದ್ಧಿ, ಮೀಮಾಂಸಕರಿಗೆ ವೇದಗಳಲ್ಲಿ ಹೇಳಿರುವ ಯಜ್ಞಯಾಗಾದಿ ಕರ್ಮಗಳೇ ಪರಮಸಿದ್ಧಿ, ತಂಗಟೂರು ಮಾರಯ್ಯನಂಥ ಶಿವಯೋಗಿಗೆ ಪ್ರಾಣಲಿಂಗವೇ ಪರಮಸಿದ್ಧಿ. ವಿ : ಗಡಣ ಎಂಬ ಪದಕ್ಕೆ ಸೇರುವೆ, ಬಡಿಸುವಿಕೆ ಎಂದು ಮುಂತಾದ ಅರ್ಥಗಳುಂಟು. ಕೆಲವು ವಚನ ವ್ಯಾಖ್ಯಾನಕಾರರು ಗಡಣ ಎಂಬ ಪದವನ್ನು ಅರ್ಪಣೆ ಎಂಬ ಅರ್ಥದಲ್ಲೆ ವ್ಯಾಖ್ಯಾನಿಸಿರುವುದುಂಟು ಕೆಲವರಿಗೆ ಕಾಯದ ಗಡಣವಿದೆಯೆಂಬಲ್ಲಿ –ತನ್ನ ದೇಹವನ್ನು ಶಿವನಿಗೆ ಗುಗ್ಗುಳವಾಗಿ ಬೆಂಕಿಯಲ್ಲಿ ಬೇಳಿಕೊಂಡು ಓಹಿಲಯ್ಯನ ನಿದರ್ಶನವನ್ನೂ ಕೊಡುವರು. ಈ ಧಾಟಿಯನ್ನು ಮುಂದುವರಿಸಿ ಹೇಳುವುದಾದರೆ –ಕೆಲವು ಶರಣರು ಶಿವನಿಗೆ ಜೀವವನ್ನು, ಇನ್ನು ಕೆಲವರು ಭಾವವನ್ನು, ಮತ್ತೆ ಕೆಲವರು ವಚನವನ್ನು ಶಿವನಿಗೆ ಅರ್ಪಿಸಿದರು–ತಂಗಟೂರು ಮಾರಯ್ಯನಾದರೋ ಪ್ರಾಣ(ಲಿಂಗ)ವನ್ನೇ ಅರ್ಪಿಸಿದನೆನ್ನಬೇಕಾಗುವುದು. ದೇಹದ ಮೇಲೆ ಧರಿಸಿದ ಇಷ್ಟಲಿಂಗವು ಪ್ರಾಣಲಿಂಗವಾಗಿ ಅದು ದೇಹದಿಂದ ಪಲ್ಲಟವಾದರೆ ಭಕ್ತನ ಪ್ರಾಣವೇ ಹೋಗುವದೆಂಬ ವಿಚಿತ್ರ ಪವಾಡಾತ್ಮಕ ಕಥೆಗಳು ಹಲವಾರು ಶರಣರ ಬಗ್ಗೆ ಬರುವುದುಂಟು : “ತಂಗಟೂರ ಮಾರಯ್ಯಗಳು ಪ್ರಾಣಲಿಂಗಸಂಬಂಧಿಗಳಾಗಿ ಬಸವಣ್ಣನವರ ಮನೆಯ ಪಾರಿಯ ಕಾವುತ್ತಿರಲು ಅವರು ಅಪ್ಪಣೆಯ ಕೊಟ್ಟುದಿಲ್ಲವೆಂದು ಹನ್ನೆರಡು ವರ್ಷ ಮನೆಗೆ ಬಾರದಿರಲು ಬಸವಣ್ಣನದ ತಿಳಿದು ಮನೆಗೆ ಹೋಗಿ ಎಂದು ಕಳುಹಲು ಬಂದು ಸತಿಪತಿಗಳು ಪವಡಿಸಿರಲು ಒಬ್ಬರ ಲಿಂಗ ಒಬ್ಬರಿಗೆ ಪಲ್ಲಟವಾಗಿರಲು ಆಗ ಮಾರಯ್ಯ ಐಕ್ಯವಾಗಲು ಬಳಿಕ ಸತ್ಯಣ್ಣಗಳು ಮಾರಯ್ಯಗಳ ಐಕ್ಯವಾದ ಶಾವಿಗೆ ಬಂದು ಇವರು ಲಿಂಗಪ್ರಾಣಿಗಳೆಂಬುದ ತಿಳಿದು ಅವರವರ ಲಿಂಗವ ಅವರವರಿಗೆ ಕೊಡಲು ಸತಿಪತಿಗಳೆದ್ದರು (ಬಸವೇಶ್ವರ ಷಟ್ಸ್ಥಲವಚನದ ಕಥಾಸಾರ, ಪುಟ 104). ಪ್ರಾಣಲಿಂಗದ ಗಡಣವೆಂದರೆ ಯೋಗಶಾಸ್ತ್ರದ “ಪ್ರಾಣ”ವನ್ನು -ಲಿಂಗವಾಗಿ ಉಪಾಸಿಸಿ -ಮೂಲಾಧಾರದಿಂದ ಸಹಸ್ರಾರದವರೆಗೆ ಏರಿಸುವುದು ಎಂದು ತಿಳಿಯಬೇಕು. ಈ ಪ್ರಾಣಲಿಂಗದ ವಿಚಾರವನ್ನು ವಿವರವಾಗಿ ತಿಳಿಯಲು ಬಯಸುವವರು ಪ್ರಭುಲಿಂಗಲೀಲೆಯ 16ನೇ ಗತಿಯನ್ನು ನೋಡಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು