ಪ್ರಾಣಲಿಂಗಿಯ ಜ್ಞಾನಿಸ್ಥಲ - ಭಕ್ತಿ
ಚಂದ್ರಕಾಂತದ ಶಿಲೆಯಲ್ಲಿ ಜಲವಿಲ್ಲದನ್ನಕ್ಕ
ಶೈತ್ಯವ ತೋರುವ ಪರಿಯೆಂತೋ?
ಸೂರ್ಯಕಾಂತದ ಶಿಲೆಯಲ್ಲಿ ಅಗ್ನಿಯಿಲ್ಲದನ್ನಕ್ಕ
ಉಷ್ಣವ ತೋರುವ ಪರಿಯೆಂತೊ?
ಶರಣಂಗೆ ಭಕ್ತಿಕಾಯವಿಲ್ಲದನ್ನಕ್ಕ
ಕೂಡಲಸಂಗಯ್ಯನನರಿವ ಪರಿಯೆಂತೋ?
Transliteration Candrakāntada śileyalli jalavilladannakka
śaityava tōruva pariyentō?
Sūryakāntada śileyalli agniyilladannakka
uṣṇava tōruva pariyentō?
Śaraṇaṅge bhaktikāyavilladannakka
kūḍalasaṅgayyananariva pariyentō?
Manuscript
English Translation 2 Unless there's water in the moonstone,
How can the moon be cool?
Unless there is fire in the sunstone,
How can the sun be hot?
Unless the Śaraṇās is made
Of piety, how can he know
Lord Kūḍala Saṅga ?
Translated by: L M A Menezes, S M Angadi
Hindi Translation चंद्रकांत-शिला में जल न हो,
तो शीतलता कैसे दीख पड़ेगी?
सूर्यकांत शिला में अग्नि न हो,
तो उष्णता कैसे दीख पडेगी?
शरण का भक्ति काय न हो;
तो कूडलसंगय्या कैसे जान पडेंगे?
Translated by: Banakara K Gowdappa
Telugu Translation జలములేదని చంద్రకాంతో పలమున శైత్యమెటువచ్చు
అగ్ని లేదేని సూర్యకాంతమున వేడి యెటు బుట్టు?
శరణునకు భక్తి కాయములేకున్న
సంగని చూడ యెట్లౌను:
Translated by: Dr. Badala Ramaiah
Tamil Translation சந்திரகாந்தக் கல்லில் நீல் இல்லை எனின்
தண்மையைக் காட்டும் வழி என்னவோ?
சூரியகாந்தக் கல்லில் வெப்பம் இல்லை எனின்
வெப்பத்தைக் காட்டும் வழி என்னவோ?
சரணனுக்கு பக்தி உடல் இல்லை எனின்
கூடல சங்கய்யனை அறியும் வழி என்னவோ?
Translated by: Smt. Kalyani Venkataraman, Chennai
Marathi Translation
चंद्रकांत शिलेत जल असल्याशिवाय शीतलता कशी दिसणार?
सूर्यकांत शिलेत अग्नी असल्याशिवाय उष्णता कशी दिसणार?
शरणात भक्ती काया असल्याशिवाय कूडलसंगमदेवाला जाणणार कसा?
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಚಂದ್ರಕಾಂತದ ಶಿಲೆಯಲ್ಲಿ ನೀರೂ, ಸೂರ್ಯಕಾಂತದ ಶಿಲೆಯಲ್ಲಿ ಬೆಂಕಿಯೂ ಇರುವುದರಿಂದಲೇ ಕ್ರಮವಾಗಿ ಅವಕ್ಕೆ ಚಂದ್ರ-ಸೂರ್ಯ ಸಂಪರ್ಕವಾದಾಗ ಶೈತ್ಯವನ್ನೂ ಉಷ್ಣವನ್ನೂ ಅವು ಹೊರಸೂಸುವವು. ಹಾಗೆಯೇ ಶಿವಶರಣನಲ್ಲಿ (ಪ್ರಾಣಲಿಂಗ)ಭಕ್ತಿಯಿರುವುದರಿಂದಲೇ ಮುಕ್ತಿಕಾರಣವಾದ ಶಿವಜ್ಞಾನವು ಅವನಲ್ಲಿ ಉನ್ಮೇಷಿಸುವುದೆಂಬುದು ಈ ವಚನದ ಅಭಿಪ್ರಾಯ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು