ಪ್ರಾಣಲಿಂಗಿಯ ಜ್ಞಾನಿಸ್ಥಲ - ಶರಣರು
ಮುನ್ನೂರರವತ್ತು ನಕ್ಷತ್ರಕ್ಕೆ ಬಾಯಿಬಿಟ್ಟುಕೊಂಡಿಪ್ಪುದೆ ಸಿಂಪು?
ಅದು ಸ್ವಾತಿಗಲ್ಲದೆ ಬಾಯ್ದೆರೆಯದು ಕೇಳು, ಕೇಳಾ, ತಂದೇ:
ಎಲ್ಲವಕ್ಕೆ ಬಾಯ ಬಿಟ್ಟರೆ ತಾನೆಲ್ಲಿಯ ಮುತ್ತಪ್ಪುದೊ?
ಪರಮಂಗಲ್ಲದೆ ಹರುಷತಿಕೆಯಿಲ್ಲೆಂದು
ಕರಣಾದಿ ಗುಣಂಗಳ ಮರೆದರು:
ಇದು ಕಾರಣ, ಕೂಡಲಸಂಗನ ಶರಣರು ಸಪ್ತವ್ಯಸನಿಗಳಲ್ಲಾಗಿ.
Transliteration Munnūra aruvattu nakṣatrakke bāyibiṭṭukoṇḍippude simpu?
Adu svātigallade bāydereyadu kēḷu, kēḷā, tandē:
Ellavakke bāya biṭṭare tānelliya muttappudu?
Paramaṅgaḷallade haruṣatikeyillendu
karaṇādi guṇaṅgaḷa maredaru:
Idu kāraṇa, kūḍalasaṅgana śaraṇaru saptavyasanigaḷallāgi.
Manuscript
English Translation 2 Does the pearl oyster keep gaping
For three-hundred and sixty stars?
Hear me, good Sir, hear me:
It never opens but for Svāti.
Should never opens but for Svāti.
Should it gape open for all stars,
How can there be a pearl?
Kūḍala Saṅga's Śaraṇā.
Belong free from all the seven vices,
Because no joy is but the Supreme,
Forget their sensual traits.
Translated by: L M A Menezes, S M Angadi
Hindi Translation सीप तीन सौ साठ नक्षत्रों के लिए
मुँह खोले रहता है,
सुनो पिता, वह स्वाति के सिवा
किसी के लिए मुँह नहीं खोलता ।
सब केलिए मुँह खोले
तो वह मोती कैसे बनता है?
परमात्मा के सिवा कोई आनंद नहीं है।
समझ वे करणादि के गुण भूल गये;
कूडलसंगमेश के शरण सप्तव्यसनी जो नहीं है ॥
Translated by: Banakara K Gowdappa
Telugu Translation మున్నూరరవై నక్షత్రములకు
నోరిప్పుకొని యుండునే శుక్తి?
అది స్వాతికి తప్ప నోర్విడదు
అన్నిటికీ నోరు విప్ప ముత్య మెట్లగును?
పరమునకుగాక హర్షములేదని
కరణాది గుణముల మఱచిరీ కారణమున
సంగని శరణులు సస్తవ్యసనులుగారు.
Translated by: Dr. Badala Ramaiah
Tamil Translation முந்நூற்று அறுபது நட்சத்திரங்களுக்கு
சிப்பி வாய்திறந்துகொண்டு இருக்குமோ?
அது சுவாதிக்கல்லது வாயைத் திறக்காது
தந்தையே, கேளாய், கேளாய்
அனைத்திற்கும் வாய் திறந்தால் தான்
எங்ஙனம் முத்து ஆக இயலும்?
இறைவனுக்கன்றி அவர் இன்பம் இல்லையென
புலனின்பங்கள் போன்ற இயல்பினை
மறந்தனர் எனவே கூடல சங்கனின்
அடியாரிடம் ஏழுவகையான கீழ்மை இல்லை
Translated by: Smt. Kalyani Venkataraman, Chennai
Marathi Translation
तीनशे साठ नक्षत्रात तोंड उघडते का शिंपले?
ते स्वाती नक्षत्रात तोंड उघडते ऐकावे पिता.
सर्व नक्षत्रात तोंड उघडले तर मोती होईल?
परमतत्त्व जाणल्या विना परमसुख नाही.
विषयगुण विसरल्याने कूडलसंगाचे शरण सप्त व्यसनी झाले नाही.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶರಣರು ಸಪ್ತವ್ಯಸನಿಗಳಲ್ಲವೇಕೆ ? ಅವರ “ಹರುಷತಿಕೆ” ಪರಮನಿಗೇ ಮೀಸಲಾಗಿದೆ –ಇನ್ನೆಲ್ಲಿಯ ಜೂಜು ಕುಡಿತ ಹಾದರ ಮುಂತಾದ ಚಪಲವವರಿಗೆ ?
ಚಿಪ್ಪು ಸಿಕ್ಕಿದ ಹನಿಗೆಲ್ಲಾ ಬಾಯಿಬಿಟ್ಟುಕೊಂಡಿದ್ದರೆ ಅದು ಕಪ್ಪೆಯ ಚಿಪ್ಪಾಗುವುದಲ್ಲದೆ –ಮುತ್ತಿನ ಚಿಪ್ಪಾಗುವುದಿಲ್ಲ. ಬೆಲೆಬಾಳುವ ಮಿನುಗಿರುವ ಆಣಿಮುತ್ತು ತನ್ನೊಳಗಾಗಬೇಕಾದರೆ –ಆ ಚಿಪ್ಪು ಸ್ವಾತಿಯ ಮಳೆಗಲ್ಲದೆ ಅನ್ಯವೊಂದಕ್ಕೂ ಬಾಯ್ದೆರೆಯುವುದಿಲ್ಲ. ಪ್ರಾಣಲಿಂಗವನ್ನು ಒಳಗೊಳ್ಳಬೇಕಾದ ಶರಣರು -ಪರಮಶಿವನಲ್ಲದನ್ಯವೊಂದನ್ನೂ ಕುರಿತು ಹಾತೊರೆಯುವುದಿಲ್ಲ. (ಹರುಷತಿಕೆಯೆಂದರೆ ಸ್ಪರ್ಶತೆ, ಸಂಬಂಧವೆಂದು).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು