ಪ್ರಾಣಲಿಂಗಿಯ ಪ್ರಾಣಲಿಂಗಿಸ್ಥಲ - ಮನಸ್ಸು
ಮೈಗೆ ಕಾಹ ಹೇಳುವರಲ್ಲದೆ, ಮನಕ್ಕೆ ಕಾಹ ಹೇಳುವರೆ?
ಅಣಕದ ಮಿಂಡನ ಹೊಸ ಪರಿಯ ನೋಡಾ:
ಕೂಡಲಸಂಗಮದೇವನೆನ್ನ ಮನವ ನಂಬದೆ
ತನ್ನಲ್ಲಿದ್ದ ಲೇಸ ಕಾಹ ಹೇಳಿದನು!
Transliteration ಮೈಗೆ ಕಾಹ ಹೇಳುವರಲ್ಲದೆ, ಮನಕ್ಕೆ ಕಾಹ ಹೇಳುವರೆ?
ಅಣಕದ ಮಿಂಡನ ಹೊಸ ಪರಿಯ ನೋಡಾ:
ಕೂಡಲಸಂಗಮದೇವನೆನ್ನ ಮನವ ನಂಬದೆ
ತನ್ನಲ್ಲಿದ್ದ ಲೇಸ ಕಾಹ ಹೇಳಿದನು!
Manuscript
English Translation 2 Protect the body- so they say:
But do they say, protect the mind?
Mark this new way of paramour's
Showing contempt: Lord Kūḍala Saṅgama,
Having no faith in my mind
Tells it to guard its goodness
Translated by: L M A Menezes, S M Angadi
Hindi Translation देह की रक्षा करने को कहते हैं?
मन की रक्षा करने को कहते हैं?
निर्भीक विट की नयी रीति देखो,
कूडलसंगमदेव ने मेरे मन पर विश्वास न कर मेरी
उत्तमता की रक्षा करने को कहा ॥
Translated by: Banakara K Gowdappa
Telugu Translation మేను కావుమనువారే కాని
మనసు కావుమను వారు లేరు;
మిడుకు మిండని లేవలపు చూడుమ;
సంగమదేవుడు నామతి నమ్మక
తనయందుగల గుణమే కావుమని బల్కె!
Translated by: Dr. Badala Ramaiah
Tamil Translation பிராணலிங்கியின் பிராணலிங்கித்தலம்
உடலைக் காவல் காக்கவியலுமே தவிர
மனத்தைக் காவல் காக்கவியலுமோ?
உலகியலில் கணவன், மனைவியின்
உடலிற்கு காவலாகலாமே தவிர மனத்தைக்
காவல் காக்க இயலுமோ? கூடல சங்கன்
என் மனத்தை நம்பாது, மனத்தில்
பிராணலிங்கத்தை வைத்துக் காவலாக இட்டனன்.
Translated by: Smt. Kalyani Venkataraman, Chennai
Marathi Translation
देहाचे रक्षण सांगता येईल, मनाचे रक्षण सांगता येईल ?
माझ्या पतीची ही नवी रीत पहा.
कूडलसंगमदेवाने माझ्या मनावर विश्वास न करता
आपल्यात ठेवून रक्षणाची व्यवस्था केली.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ “ಕೆಡುವ” ಗಂಡರು ತಮ್ಮಲ್ಲಿರುವ ಲೇಸಿನಿಂದ ತಂತಮ್ಮ ಹೆಂಡಿರನ್ನು ಆಳಲಾರದೆ–ಆಳಿಟ್ಟು ಅವಳ ದೇಹಕ್ಕೆ ಕಾವಲು ಹಾಕುವರು –ಆದರೇನು, ಅವರು ಅವಳ ಮನಸನ್ನು ನಿಯಂತ್ರಿಸಬಲ್ಲರೇನು ? ಲಿಂಗಪತಿಯಾದರೋ ಶರಣಸತಿಯ ದೇಹವನ್ನೂ ಮನವನ್ನೂ –ಅಷ್ಟೇ ಅಲ್ಲ –ಅಂತರಾಳದ ಆತ್ಮವನ್ನೂ ಪ್ರಿಯವಾಗಿಯೇ ರಕ್ಷಿಸಬಲ್ಲನು –ಅವನು ಅಷ್ಟು ಸುಂದರ. ಮನೋಹರ ಮತ್ತು ಆನಂದಸ್ವರೂಪಿ.
ಆದ್ದರಿಂದ ಅವನನ್ನು ಪ್ರೀತಿಸು, ಅವನನ್ನು ನಿನ್ನ ಪತಿಯನ್ನಾಗಿ ವರಿಸು –ಎಂದು ಜೀವಕನ್ಯೆಗೆ ಬಸವಣ್ಣನವರು ಬುದ್ಧಿ ಹೇಳುತ್ತಿರುವರು.
ಕಾವಲಿಟ್ಟು ರಕ್ಷಿಸಬೇಕಾದ್ದು ಈ ದೇಹವನಲ್ಲ–ಈ ದೇಹವನ್ನು ಹಿಡಿದಾಡಿಸುವ ಮನಸ್ಸನ್ನು. ಅಂಥ ಮನಸ್ಸನ್ನು ಶಿವನು ತನ್ನ ಕೃಪಾಜಲದಿಂದ ರಕ್ಷಿಸುವನೆಂದು –ಅವನಿಗೆ ತನ್ನನ್ನು ತೆತ್ತುಕೊಂಡ ಶರಣ ಸತಿ ಹೇಳುತ್ತಿರುವ ಮಾತಿದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು